ಕಿಸಾನ್ ಆಶೀರ್ವಾದ ಸ್ಕೀಮ್ ಮೂಲಕ ರೈತರಿಗೆ 25,000 ಸಹಾಯಧನ : ಅರ್ಜಿ ಸಲ್ಲಿಸಿ ಕೂಡಲೇ

ಕಿಸಾನ್ ಆಶೀರ್ವಾದ ಸ್ಕೀಮ್ ಮೂಲಕ ರೈತರಿಗೆ 25,000 ಸಹಾಯಧನ : ಅರ್ಜಿ ಸಲ್ಲಿಸಿ ಕೂಡಲೇ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಂತೆ ಜಾರಿಗೆ ತಂದಿರುವ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಈ ಯೋಜನೆಯ ಅಡಿಯಲ್ಲಿ ರೈತರು 25,000ಗಳ ಸಹಾಯಧನವನ್ನು ಪಡೆಯಬಹುದಾಗಿದೆ.



ಕೃಷಿಯನ್ನು ನಮ್ಮ ದೇಶ ಜೀವಾಳವಾಗಿಸಿಕೊಂಡಿದ್ದರು ಕೂಡ ಕೃಷಿ ಚಟುವಟಿಕೆಯನ್ನು ಇತ್ತೀಚಿನ ದಿನಗಳಲ್ಲಿ ಉತ್ತೇಜಿಸುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು ತಪ್ಪಾಗಲಾರದು ಏಕೆಂದರೆ ಕೃಷಿ ಮಾಡುವವರ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಾಗುತ್ತಿದೆ ಇದೇ ಕಾರಣದಿಂದಾಗಿ ಇನ್ನಷ್ಟು ಹೆಚ್ಚು ಜನ ಕೃಷಿಯನ್ನು ಮುಂದುವರಿಸಿಕೊಂಡು ಹೋಗಲು ಆಗಾಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳೆರಡು ರೈತರಿಗೆ ಅನುಕೂಲವಾಗುವಂತಹ ಕೆಲವೊಂದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ರೈತರಿಗಾಗಿ ಕಿಸಾನ್ ಆಶೀರ್ವಾದ ಸ್ಕೀಮ್ ಅನ್ನು ಜಾರಿಗೆ ತಂದಿದ್ದು ಕಿಸಾನ್ ಆಶೀರ್ವಾದ ಯೋಜನೆ ಅಡಿಯಲ್ಲಿ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವವರು 25,000ಗಳ ಸಹಾಯಧನವನ್ನು ಪಡೆಯಬಹುದಾಗಿದೆ.

ಕಿಸಾನ್ ಆಶೀರ್ವಾದ ಸ್ಕೀಮ್ :

ಕಿಸಾನ್ ಸಂಬಂಧಿತ ಯೋಜನೆ ಮೂಲಕ ಈಗಾಗಲೇ ರೈತರಿಗೆ ಆರ್ಥಿಕ ಸಹಾಯ ಧನವನ್ನು ಸರ್ಕಾರ ಒದಗಿಸಿದೆ ಎಂದು ಹೇಳಬಹುದು ಅದರಂತೆ ಇದೀಗ ಸರ್ಕಾರ ಕಿಸಾನ್ ಆಶೀರ್ವಾದ ಸ್ಕೀಮ್ ಅನ್ನು ಜಾರಿಗೆ ತಂದಿದ್ದು.

ಪ್ರತಿ ಎಕರೆಗೆ 5000 ಗಳಂತೆ 5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಕಿಸಾನ್ ಆಶೀರ್ವಾದ ಯೋಜನೆಯಡಿಯಲ್ಲಿ ಎಷ್ಟು ಜಮೀನಿಗೆ ಎಷ್ಟು ಹಣ ನೀಡಲಾಗುತ್ತದೆ ಎಂಬುದನ್ನು ನೋಡುವುದಾದರೆ.

5,000 1 ಎಕರೆ ಜಮೀನಿಗೆ

10,000 2 ಎಕರೆ ಜಮೀನಿಗೆ

15000 3 ಎಕರೆ ಜಮೀನಿಗೆ

20,000 4 ಎಕರೆ ಜಮೀನಿಗೆ

25000 5 ಎಕರೆ ಜಮೀನಿಗೆ

ಹೀಗೆ ಜಮೀನಿಗೆ ಅನುಗುಣವಾಗಿ ಸರ್ಕಾರ ರೈತರಿಗೆ ಸಹಾಯಧನವನ್ನು ನೀಡುತ್ತಿದೆ ಎಂದು ಹೇಳಬಹುದು. 6,000ಗಳನ್ನು ಪ್ರತಿ ವರ್ಷ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ಪಡೆಯುತ್ತಿದ್ದಾರೆ.

ಇದರ ಜೊತೆಗೆ ರೈತರು 25,000ಗಳ ಹಣವನ್ನು ಆಶೀರ್ವಾದ ಯೋಜನೆಯ ಅಡಿಯಲ್ಲಿ ಪಡೆದುಕೊಂಡರೆ 31 ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ಪ್ರತಿ ವರ್ಷ ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.

ಕಿಸಾನ್ ಆಶೀರ್ವಾದ ಯೋಜನೆಗೆ ಅಗತ್ಯ ದಾಖಲೆಗಳು :

ರೈತರು ಸರ್ಕಾರದ ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಆ ದಾಖಲೆಗಳನ್ನು ಹೊಂದಿದ್ದಾಗ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಾಗುತ್ತದೆ.

ರೈತರ ಭೂಮಿಯ ಪಹಣಿ ಪತ್ರ.

ಆಧಾರ್ ಕಾರ್ಡ್.

ಬ್ಯಾಂಕ್ ಪಾಸ್ ಬುಕ್.

ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್.

ಪಾಸ್ಪೋರ್ಟ್ ಸೈಜ್ ಫೋಟೋ.

ಪಾನ್ ಕಾರ್ಡ್.

ಆದಾಯ ಪ್ರಮಾಣ ಪತ್ರ.

ಹೀಗೆ ಕೆಲವೊಂದು ಪ್ರಮುಖ ದಾಖಲೆಗಳನ್ನು ಹೊಂದುವುದರ ಮೂಲಕ ಕಿಸಾನ್ ಆಶೀರ್ವಾದ ಯೋಜನೆಗೆ ರೈತರು ಅರ್ಜಿ ಸಲ್ಲಿಸಿ ಸರ್ಕಾರದಿಂದ 25,000ಗಳ ಸಹಾಯಧನವನ್ನು ಪಡೆಯಬಹುದಾಗಿದೆ.

ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ಕಿಸಾನ್ ಆಶೀರ್ವಾದ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಅಭ್ಯರ್ಥಿಗಳು ಆಫ್ಲೈನ್ https://mmkay.jharkhand.gov.in/ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿತ್ತು ತಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಹಾಗೂ ಮಾಹಿತಿಗಳನ್ನು ನೀಡಿ ಕಿಸಾನ್ ಆಶೀರ್ವಾದ ಯೋಜನೆಗೆ ರೈತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೀಗೆ ಈ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ.

ಝಾರ್ಕಂಡ್ ನಲ್ಲಿ ಮಾತ್ರ ಲಭ್ಯ :

ಸಜಯ್ ದೀಗ ಝಾರ್ಖಂಡ್ ರಾಜ್ಯದಲ್ಲಿರುವ 35 ಲಕ್ಷ ರೈತರು ಮಾತ್ರ ಕಿಸಾನ್ ಆಶೀರ್ವಾದ ಯೋಜನೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿತ್ತು ಈ ಯೋಜನೆ ಜಾರ್ಕಂಡ್ ನಲ್ಲಿ ಯಶಸ್ಸನ್ನು ಕಂಡರೆ ರಾಷ್ಟ್ರ ವ್ಯಾಪಿ ಕಿಸಾನ್ ಆಶೀರ್ವಾದ ಯೋಜನೆಯನ್ನು ವಿಸ್ತರಿಸಲಾಗುತ್ತದೆ ಎನ್ನುವ ವರದಿಯು ಕೂಡ ಲಭ್ಯವಾಗುತ್ತಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಜಾರ್ಖಂಡ್ನಲ್ಲಿ ಮಾತ್ರ ಕಿಸಾನ್ ಆಶೀರ್ವಾದ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯು ಸಂಪೂರ್ಣವಾಗಿ ಯಶಸ್ಸನ್ನು ಜಾರ್ಖಂಡ್ನಲ್ಲಿ ಕಂಡರೆ ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೂ ಕೂಡ ಕಿಸಾನ್ ಆಶೀರ್ವಾದ ಯೋಜನೆ, ಜಾರಿಯಾಗಲಿದೆ ಎಂದು ಹೇಳಬಹುದು .

ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಕೃಷಿ ಚಟುವಟಿಕೆ ಸಂಬಂಧಿಸಿದಂತೆ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರವು ಕಿಸಾನ್ ಆಶೀರ್ವಾದ ಯೋಜನೆಯನ್ನು ಜಾರಿಗೆ ತಂದಿದ್ದು .

ಈ ಯೋಜನೆಯು 25,000 ರೂಪಾಯಿಗಳ ಸಹಾಯಧನವನ್ನು ನೀಡುತ್ತದೆ ಎಂಬುದರ ಬಗ್ಗೆ ಎಲ್ಲ ರೈತರಿಗೂ ಶೇರ್ ಮಾಡಿ ಇದರಿಂದ ಅವರು ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ತಿಳಿದುಕೊಂಡು ಮುಂದಿನ ದಿನಗಳಲ್ಲಿಯೂ ಈ ಯೋಜನೆ ನಮ್ಮ ರಾಜ್ಯಗಳಲ್ಲಿಯೂ ಕೂಡ ಜಾರಿಯಾಗಲಿದೆಯೇ ಇಲ್ಲವೇ ಎಂಬುದರ ಸಂಪೂರ್ಣ ಮಾಹಿತಿಗಳನ್ನು ಆಗಾಗ ತಿಳಿದುಕೊಳ್ಳಲಿ ಧನ್ಯವಾದಗಳು.

Post a Comment

Previous Post Next Post
CLOSE ADS
CLOSE ADS
×