ಭಾರತೀಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಜಿಯೋ (Reliance Jio) ಸಾಕಷ್ಟು ಗ್ರಾಹಕರನ ಹೊಂದಿದೆ. ಕೋಟ್ಯಾಂತರ ಜನ ಗ್ರಾಹಕರಿಗೆ ಅಗತ್ಯ ಇರುವ ರಿಚಾರ್ಜ್ ಪ್ಲಾನ್ ನೀಡಿರುವ ಹೆಗ್ಗಳಿಕೆ ಜಿಯೋದು. ಟೆಲಿಕಾಂ ಕ್ಷೇತ್ರದಲ್ಲಿ ಅತ್ಯಂತ ಹೆಸರುವಾಸಿಯಾಗಿರುವ ಜಿಯೋ ಈಗ ತನ್ನ ಪೋರ್ಟ್ ಪೋಲಿಯೋದಲ್ಲಿ ಹೊಸ ರಿಚಾರ್ಜ್ ಪ್ಲಾನ್ ಸೇರಿಸಿಕೊಂಡಿದೆ.
148 ರೂಪಾಯಿಗಳ ರಿಚಾರ್ಜ್ ಪ್ಲಾನ್ ಘೋಷಿಸಿದ ರಿಲಯನ್ಸ್ ಜಿಯೋ (Reliance Jio)!
ಜೀಯೋ ಕಂಪನಿ ಇತ್ತೀಚಿಗೆ ಸಾಕಷ್ಟು ಪ್ಲಾನ್ ಗಳಲ್ಲಿ ಮನೋರಂಜನೆ ಯೋಜನೆಗಳನ್ನು ಕೂಡ ಪರಿಚಯಿಸಿದೆ. ಅಂತಹ ಒಂದು ಪ್ಲಾನ್ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಇದು ಅತಿ ಕಡಿಮೆ ರೂಪಾಯಿಗಳ ರಿಚಾರ್ಜ್ ಪ್ಲಾನ್ ಆಗಿದ್ದು, ನೀವು ಸುಮಾರು 12 ಒಟಿಟಿ ಪ್ಲಾಟ್ ಫಾರ್ಮ್ ಗಳಿಗೆ ನೇರ ಪ್ರವೇಶ ಪಡೆದುಕೊಳ್ಳಬಹುದು.
ಹೊಸ ರಿಚಾರ್ಜ್ ಪ್ಲಾನ್ ನ ವೈಶಿಷ್ಟ್ಯತೆ!
ಇದು ಡೇಟಾ ಮಾತ್ರ ಬೇಕು ಅಂದುಕೊಳ್ಳುವವರಿಗೆ ಸೂಕ್ತವಾಗಿರುವ ಯೋಜನೆಯಾಗಿದೆ. ಇದರಲ್ಲಿ ನಿಮಗೆ ಯಾವುದೇ ರೀತಿಯ ಧ್ವನಿ ಕರೆ ಅಥವಾ ಉಚಿತ ಎಸ್ಎಂಎಸ್ ಪ್ರಯೋಜನ ಸಿಗುವುದಿಲ್ಲ. ಬದಲಾಗಿ ಇದು ಇಂಟರ್ನೆಟ್ ಡಾಟಾ ನೀಡುವ ಯೋಜನೆ ಆಗಿದೆ.
10GB ಡಾಟಾವನ್ನು ಪಡೆಯುತ್ತೀರಿ!
ಜಿಯೋ (Jio) ಪರಿಚಯಿಸಿರುವ 148 ರೂಪಾಯಿಗಳ ಯೋಜನೆ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ಗ್ರಾಹಕರು 28 ದಿನಗಳ ವರೆಗೆ 10 ಜಿಬಿ ಡಾಟಾವನ್ನು ಪಡೆಯುತ್ತಾರೆ.
OTTಗಳಿಗೆ ನೇರ ಪ್ರವೇಶ!
Reliance jio ಪರಿಚಯಿಸಿರುವ 148 ಸ್ವರೂಪಗಳ ಡೇಟಾ ಪ್ಲಾನ್ ನಲ್ಲಿ Sony LIV, ZEE5, jio cinema, lions gate play ಸೇರಿದಂತೆ 12ಕ್ಕೂ ಹೆಚ್ಚಿನ OTT ಗಳಿಗೆ ನೇರ ಪ್ರವೇಶ ಪಡೆಯಬಹುದು.
ಇನ್ನು ಈ OTT ಹೊರತಾಗಿ ಡಿಸ್ಕವರಿ ಪ್ಲಸ್, ಪ್ಲಾನೆಟ್ ಮರಾಠಿ, ಸನ್ ಎನ್ ಎಕ್ಸ್ ಟಿ, ಚೌಪಾಲ, Epic on ಸೇರಿದಂತೆ ಮೊದಲಾದ ಪ್ಲ್ಯಾಟ್ ಫಾರ್ಮ್ ಗಳಿಗೂ ಉಚಿತ ಪ್ರವೇಶ ಪಡೆಯಬಹುದಾಗಿದೆ.
28 ದಿನಗಳ ವ್ಯಾಲಿಡಿಟಿ!
ನೀವು 148 ರೂಪಾಯಿಗಳ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳವರೆಗೆ ಯಾವುದೇ ಚಿಂತೆ ಇಲ್ಲದೆ ಇಂಟರ್ನೆಟ್ ಬಳಕೆ ಮಾಡಬಹುದು. ಇಲ್ಲಿ ಜಿಯೋ ಸಿನಿಮಾ ಪ್ರೀಮಿಯಂ ಕೂಪನ್ ಕ್ರೆಡಿಟ್ ಮಾಡಿಕೊಳ್ಳಬಹುದು. ಜಿಯೋ ಟಿವಿ ಅಪ್ಲಿಕೇಶನ್ ಮೂಲಕ ನೀವು ಇತರ ಒಟಿಟಿ ಗಳಿಗೆ ಪ್ರವೇಶ ಪಡೆಯಬಹುದು. ನಿಮ್ಮ ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಲ್ಲಿ ಈ ಅಪ್ಲಿಕೇಶನ್ ಬಳಸಿಕೊಳ್ಳಬಹುದು. ಗ್ರಾಹಕರ ಮನೋರಂಜನೆಗಾಗಿ ಬಂಡಲ್ ಗಟ್ಟಲೆ ಪ್ರಯೋಜನ ಹೊಂದಿರುವ ಪ್ಲಾನ್ ಜಿಯೋ ಪರಿಚಯಿಸಿದ್ದು, OTT ವೀಕ್ಷಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ.