ಗೃಹಲಕ್ಷ್ಮಿ ಪೆಂಡಿಂಗ್ ಇರುವ ಎಲ್ಲಾ ಹಣ ಬಿಡುಗಡೆ ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ : ಇಲ್ಲಿದೆ ಲಿಂಕ್

ಗೃಹಲಕ್ಷ್ಮಿ ಪೆಂಡಿಂಗ್ ಇರುವ ಎಲ್ಲಾ ಹಣ ಬಿಡುಗಡೆ ನಿಮ್ಮ ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ : ಇಲ್ಲಿದೆ ಲಿಂಕ್

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇದುವರೆಗೂ ಕೂಡ ಪೆಂಡಿಂಗ್ ಇರುವ ಹಣ ಬರದೆ ಇದ್ದರೆ ಅಂತವರಿಗೆ ಹಣ ಬರಲು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ.



gruhalkshmi-pending-release-of-all-funds

ರಾಜ್ಯ ಸರ್ಕಾರ ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ. ಯೋಜನೆಯ ಎಲ್ಲಾ ಪೆಂಡಿಂಗ್ ಹಣವನ್ನು ರಾಜ್ಯ ಸರ್ಕಾರ ಈ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆ ಮಾಡುತ್ತಿದೆ. ಹೌದು ಆಟೋಮೆಟಿಕ್ ಆಗಿ ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಸಾಕಷ್ಟು ಫಲಾನುಭವಿಗಳಿಗೆ ಇದುವರೆಗೂ ಮೊದಲನೇ ಕಂತಿನ ಹಣ ಬಂದಿರುವುದಿಲ್ಲ ಹಾಗೂ ಎರಡನೇ ಮತ್ತು ಮೂರನೇ ಕಂತಿನ ಹಣ ಸಾಕಷ್ಟು ಜನರಿಗೆ ಪೆಂಡಿಂಗ್ ಇದ್ದು ಈ ರೀತಿಯ ಸಮಸ್ಯೆ ಇರುವ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಪೆಂಡಿಂಗ್ ಇರುವ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಅದರಂತೆ ಇವತ್ತಿನ ಲೇಖನದಲ್ಲಿ ಪೆಂಡಿಂಗ್ ಇರುವ ಹಣ ಬರಬೇಕಾದರೆ ಏನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತದೆ.

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ :

ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ರೂಪಿಸಿದೆ ಈ ಯೋಜನೆಯನ್ನು ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಜಾರಿಗೆ ತರಲಾಗಿದ್ದು ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನ ಪಾತ್ರ ಬಹಳ ದೊಡ್ಡದಾಗಿರುತ್ತದೆ.

ಆದ್ದರಿಂದ ಆಕೆಗೆ ಮನೆ ನಿರ್ವಹಣೆಗಾಗಿ ಅನುಕೂಲವಾಗಲೆಂದು ಕುಟುಂಬದ ಯಜಮಾನೀಯ ಬ್ಯಾಂಕ್ ಖಾತೆಗೆ ಸರ್ಕಾರವು ಪ್ರತಿ ತಿಂಗಳು 2000 ಹಣವನ್ನು ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಗೃಹಲಕ್ಷ್ಮಿ ಯೋಜನೆಯು ಸರ್ಕಾರ ಜಾರಿಗೆ ತಂದಿದ್ದು ಅದೆಷ್ಟೋ ಮಹಿಳೆಯರಿಗೆ ದಾರಿದೀಪವಾಗಿದೆ ಎಂದು ಹೇಳಿದರು ತಪ್ಪಾಗಲಾರದು.

ತಮ್ಮ ಆರ್ಥಿಕ ಪರಿಸ್ಥಿತಿಯನ್ನು ದೂರ ಮಾಡಿ ಸ್ವಲ್ಪ ಮಟ್ಟಿಗಾದರೂ ತಮ್ಮ ಆರ್ಥಿಕ ನಿಲುವನ್ನು ಸಾಧಿಸಲು ಸರ್ಕಾರ ಸಹಕಾರಿಯಾಗಿದೆ ಇದರಿಂದ ಈ ಒಂದು ಯೋಜನೆಯಿಂದ ಅವರ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಬರುವಂತಹ ದುಡ್ಡು ಬಹಳ ಉಪಯೋಗವಾಗುತ್ತದೆ.

ಗೃಹಲಕ್ಷ್ಮಿ ಹಣ ವರ್ಗಾವಣೆಯಾಗದೇ ಇರಲು ಕಾರಣ :

ಇದುವರೆಗೂ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಎಲ್ಲಾ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಅವರಿಗೆ ಜಮಾ ಆಗಿದೆ ಹಾಗೆಯೇ ಇನ್ನೂ ಅಲ್ಪಸ್ವಲ್ಪ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಕೆಲವು ಕಂತುಗಳ ಹಣ ಜಮಾ ಆಗಿದ್ದು ಇನ್ನೂ ಕೆಲವು ಕಂತುಗಳ ಹಣ ಬರಲು ಬಾಕಿ ಇದೆ, ಆದರೆ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಇನ್ನೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದೇ ಇರಲು ಕಾರಣ ಯಾವುವೆಂದು ನೋಡುವುದಾದರೆ,

  • ಮಹಿಳೆಯರ ಬ್ಯಾಂಕ್ ಖಾತೆಗೆ ಕೆವೈಸಿ ಆಗದೆ ಇರುವುದು.
  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದು
  • ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ನೀಡದೆ ಇರುವುದು ಪ್ರಮುಖ ಕಾರಣವಾಗಿದೆ.
  • ಇದರ ಜೊತೆಗೆ ಕೆಲವು ತಾಂತ್ರಿಕ ದೋಷಗಳು ಕೂಡ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗದೇ ಇರದಂತೆ ಆಗುತ್ತಿದೆ.
  • ಹೀಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಲು ಸಾಕಷ್ಟು ಕಾರಣಗಳನ್ನು ನೋಡಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಒಟ್ಟಿಗೆ 10,000 ಬಂತು :

ಗೃಹಲಕ್ಷ್ಮಿ ಯೋಜನೆಯ ಹಣ ಇದುವರೆಗೂ ಕೂಡ ಒಂದು ಕಂತಿನ ಹಣ ಬಂದಿಲ್ಲ ಎನ್ನುವ ಮಹಿಳೆಯರಿಗೆ ಈಗಾಗಲೇ ಸರ್ಕಾರದಿಂದ ತಿಳಿಸಿರುವಂತೆ ಅವರು ತಮ್ಮ ಬ್ಯಾಂಕಿಗೆ ಹೋಗಿ ಈ ಕೆವೈಸಿ ಆಗಿದೆಯೇ ಇಲ್ಲವೇ ಎಂಬುದನ್ನು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಪರಿಶೀಲನೆ ಮಾಡಿಕೊಳ್ಳಬಹುದಾಗಿದೆ ಅದರ ಜೊತೆಗೆ ಬ್ಯಾಂಕ್ ಖಾತೆಗೆ ಎಂಪಿಸಿಐ ಮ್ಯಾಪಿಂಗ್ ಕೂಡ ಮಾಡಿಸಿರಬೇಕು.

ಆಧಾರ್ ಮತ್ತುಬ್ಯಾಂಕ್ಅಕೌಂಟ್ ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಂಡ ನಂತರ ಡಿಸೆಂಬರ್ ತಿಂಗಳಲ್ಲಿ ಹಲವಾರು ಮಹಿಳೆಯರ ಬ್ಯಾಂಕ್ ಖಾತೆಗೆ ಇದೇ ತಿಂಗಳು 23 24 ಮತ್ತು 25ನೇ ತಾರೀಕಿನಂದು ಸಾವಿರ ರೂಪಾಯಿಗಳಂತೆ ಸತತವಾಗಿ ಹುಟ್ಟು ಸಾವಿರ ರೂಪಾಯಿಗಳು ರಾಜ್ಯ ಸರ್ಕಾರ ಜಮಾ ಮಾಡಿದೆ. ಆಟೋಮೆಟಿಕ್ ಆಗಿ ಹಾವೇರಿ ಜಿಲ್ಲೆಯ ಮಹಿಳೆ ಒಬ್ಬರಿಗೆ ಹಣ ಡೆಬೀಟಿ ಮೂಲಕ ಜಮಾ ಆಗಿರುವುದರ ಸ್ಟೇಟಸ್ ಅನ್ನು ನೋಡಬಹುದಾಗಿದೆ.

ಪೆಂಡಿಂಗ್ ಹಣ ಪಡೆಯಬೇಕಾದರೆ ಈ ಕ್ರಮ ಕೈಗೊಳ್ಳಬೇಕು :

ಇದುವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರುವ ಮಹಿಳೆಯರು ಪೆಂಡಿಂಗ್ ಇರುವಂತಹ ಹಣವನ್ನು ಪಡೆಯಬೇಕಾದರೆ ಈ ಕ್ರಮವನ್ನು ಕೈಗೊಂಡಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣ ವರ್ಗಾವಣೆ ಆಗುತ್ತದೆ. ಸಿ ಡಿ ಪಿ ಓ ಕಚೇರಿಗೆ ಭೇಟಿ ನೀಡಿ ಮಹಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ದಾಖಲೆಗಳನ್ನು ಮಹಿಳೆಯರು ನೀಡಬೇಕು.

ಇನ್ನೂ ಕೂಡ ಅದೆಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಒಂದು ಕಂತಿನ ಹಣ ಬಂದಿಲ್ಲ ಈ ರೀತಿಯ ಸಮಸ್ಯೆ ಇದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿರುವುದಕ್ಕೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಸ್ವೀಕೃತಿಯಲ್ಲಿ ಪತ್ರ ಎಲ್ಲವನ್ನು ನೀಡಿ ತಮ್ಮ ಬ್ಯಾಂಕ್ ಖಾತೆಗೆ ಏಕೆ ಹಣ ಬರುತ್ತಿಲ್ಲ ಎನ್ನುವ ಮಾಹಿತಿಯನ್ನು ಪಡೆಯಬೇಕು ಅದಾದ ನಂತರ ನಿಮ್ಮ ಖಾತೆಗೆ ಯಾವ ತಾಂತ್ರಿಕ ಸಮಸ್ಯೆಯಿಂದ ಹಣ ಬಂದಿಲ್ಲ ಎನ್ನುವುದನ್ನು ಅಧಿಕಾರಿಗಳು ತಿಳಿಸುತ್ತಾರೆ ಅದರ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು.

ಅರ್ಜಿ ಅನುಮೋದನೆ ಬಾಕಿ ಇದ್ದರೆ ಆ ಪ್ರಕ್ರಿಯೆಯನ್ನು ಸಿಡಿಪಿಓ ಕಚೇರಿಯಲ್ಲಿ ಪೂರ್ಣಗೊಳಿಸಿಕೊಳ್ಳಿ ಅದಾದ ನಂತರ ಕೆವೈಸಿ ಪ್ರಕ್ರಿಯೆಯು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಪೂರ್ಣಗೊಂಡಿದ್ದಾರೆ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಹಣವು ಕೂಡ ಆಟೋಮೆಟಿಕ್ ಆಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಏಕೆಂದರೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ಜಮಾ ಆಗಿರುತ್ತದೆ.

ಹಣ ಪಡೆಯಲು E- KYC ಕಡ್ಡಾಯ :

ಗೃಹಲಕ್ಷ್ಮಿ ಯೋಜನೆಯ ಬ್ಯಾಂಕ್ ಖಾತೆಗೆ ಅರ್ಜಿಯನ್ನು ಸಲ್ಲಿಸಿದ ನಂತರ ಈ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕಾಗುತ್ತದೆ ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಬೇಕಾದರೆ ಬ್ಯಾಂಕ್ ಖಾತೆಗೆ ಕೆವೈಸಿ ಕಡ್ಡಾಯವಾಗಿದೆ. ಒಂದು ವೇಳೆ ಕೆವೈಸಿ ಬ್ಯಾಂಕ್ ಖಾತೆಗೆ ಜಮಾ ಆಗದೇ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಲು ಸಾಧ್ಯವೇ ಇಲ್ಲ ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಇಲ್ಲವೇ ಎಂಬುದನ್ನು ಬ್ಯಾಂಕಿನಲ್ಲಿ ನೀವು ಚೆಕ್ ಮಾಡಬೇಕಾಗುತ್ತದೆ.

ಆಧಾರ್ ಲಿಂಕ್ ಕಡ್ಡಾಯ :

ಇನ್ನೊಂದು ಪ್ರಮುಖ ವಿಷಯ ಏನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆಯಾಗಬೇಕಾದರೆ ಆಧಾರ್ ಲಿಂಕ್ ಬ್ಯಾಂಕ್ ಖಾತೆಗೆ ಮುಖ್ಯವಾಗಿ ಆಗಿರಲೇಬೇಕು. ಒಂದು ವೇಳೆ ಆಧಾರ್ ಲಿಂಕ್ ಖಾತೆಗೆ ಆಗಿಲ್ಲದಿದ್ದರೆ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದಿಲ್ಲ.

ಏನ್ ಪಿಸಿಐ ಮ್ಯಾಪಿಂಗ್ ಕೂಡ ಕಡ್ಡಾಯ ಆಗಿರುವುದರಿಂದ ಬ್ಯಾಂಕಿಗೆ ಆದಷ್ಟು ಬೇಗ ಹೋಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ.

ಒಟ್ಟಾರೆ ಗೃಹಲಕ್ಷ್ಮಿ ಯೋಜನೆಯ ಗೆ ಸಂಬಂಧಿಸಿದಂತೆ ಸರ್ಕಾರವು ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ ಈ ತಿಂಗಳಿನಲ್ಲಿ ಸರ್ಕಾರ ಪೆಂಡಿಂಗ್ ಇರುವ ಹಣವು ಕೂಡ ಬಿಡುಗಡೆ ಮಾಡುತ್ತಿದ್ದು ಒಟ್ಟಿಗೆ 10 ಸಾವಿರ ರೂಪಾಯಿಗಳ ಹಣವನ್ನು ಮಹಿಳೆಯರು ಪಡೆಯಬಹುದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ಎಲ್ಲಾ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಇದುವರೆಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳದಿದ್ದರೆ ಒಟ್ಟಿಗೆ ಜಮಾ ಆಗುತ್ತದೆ ಎಂಬುದರ ಬಗ್ಗೆ ತಿಳಿಸಿ ಅಲ್ಲದೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಬೇಕಾದರೆ ಸರ್ಕಾರ ತಿಳಿಸಿರುವ ಎಲ್ಲಾ ಮಾನದಂಡಗಳು ಪೂರ್ಣಗೊಂಡಿರಬೇಕಾಗುತ್ತದೆ ಧನ್ಯವಾದಗಳು.

ಪ್ರಮುಖ ಲಿಂಕ್ :

ಸ್ಟೇಟಸ್ ಚೆಕ್ ಮಾಡುವ ಲಿಂಕ್ : https://dbtbharat.gov.in/

ಅರ್ಜಿ ಪರಿಶೀಲನೆ ಲಿಂಕ್ : https://sevasindhuservices.karnataka.gov


Post a Comment

Previous Post Next Post
CLOSE ADS
CLOSE ADS
×