ಟಿಸಿಎಸ್‌ ಫ್ರೆಷರ್ಸ್ ನೇಮಕಾತಿ 2024: ಏಪ್ರಿಲ್ 10 ರೊಳಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ದಿನಾಂಕ ಸೇರಿ ಈ ಮಾಹಿತಿ ತಿಳಿದಿರಲಿ

ಟಿಸಿಎಸ್‌ ಫ್ರೆಷರ್ಸ್ ನೇಮಕಾತಿ 2024: ಏಪ್ರಿಲ್ 10 ರೊಳಗೆ ಅರ್ಜಿ ಸಲ್ಲಿಸಿ, ಪರೀಕ್ಷೆ ದಿನಾಂಕ ಸೇರಿ ಈ ಮಾಹಿತಿ ತಿಳಿದಿರಲಿ

  • TCS Recruitment: ಟಿಸಿಎಸ್ 2024 ರ ನೇಮಕಾತಿಯನ್ನು ಆರಂಭಿಸಿದೆ. ಬಿಟೆಕ್, ಬಿಇ, ಎಂಸಿಎ, ಎಂಎಸ್‌ಸಿ ಹಾಗೂ ಎಂಎಸ್ ಬ್ಯಾಚ್‌ನಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.



ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹಲವಾರು ಐಟಿ ಕಂಪನಿಗಳು ನೇಮಕಾತಿಗೆ ಹಿಂದೇಟು ಹಾಕುತ್ತಿರುವ ನಡುವೆಯೇ ಹೊಸ ನೇಮಕಾತಿಯನ್ನು ಪ್ರಾರಂಭಿಸಿದೆ. ಟಿಸಿಎಸ್ 2024 ಫ್ರೆಷರ್ಸ್ ನೇಮಕಾತಿಯಲ್ಲಿ ಬಿಟೆಕ್, ಬಿಇ, ಎಂಸಿಎ, ಎಂಎಸ್‌ಸಿ ಹಾಗೂ ಎಂಎಸ್ ಬ್ಯಾಚ್‌ಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 10 ಕೊನೆಯ ದಿನವಾಗಿದ್ದು, ಏಪ್ರಿಲ್ 26 ರಂದು ಪರೀಕ್ಷೆಗಳು ನಡೆಯಲಿವೆ ಎಂದು ಕಂಪನಿಯ ತನ್ನ ಅಧಿಕೃತ ವೆಬ್‌ಸೈಟ್‌ನ ಜಾಬ್ಸ್ ಪುಟದಲ್ಲಿ ಮಾಹಿತಿಯನ್ನು ಪ್ರಕಟಿಸಿದೆ.

ಟಿಸಿಎಸ್ ನೇಮಕಾತಿ: ಯಾವ ವರ್ಗದ ನೇಮಕಾತಿ

ಟಿಸಿಎಸ್ ಕಂಪನಿಯು ನಿಂಜಾ, ಡಿಜಿಟಲ್ ಮತ್ತು ಪ್ರೈಮ್ ಎಂಬ ಮೂರು ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ ಎಂದು ಹೇಳಿದೆ. ನಿಂಜಾ ವಿಭಾಗದಲ್ಲಿ ವಾರ್ಷಿಕವಾಗಿ 3.36 ಲಕ್ಷ ರೂಪಾಯಿ ವೇತನ ನೀಡಲಾಗುತ್ತದೆ. ಡಿಜಿಟಲ್ ಮತ್ತು ಪ್ರೈಮ್ ವಿಭಾಗಗಳಲ್ಲಿ ಕ್ರಮವಾಗಿ 7 ಲಕ್ಷ ಮತ್ತು 9 ರಿಂದ 11.5 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಅನ್ನು ನೀಡುತ್ತದೆ.

ಟಿಸಿಎಸ್ ನೇಮಕಾತಿ: ಎಷ್ಟು ಹುದ್ದೆಗಳು ಖಾಲಿ ಇವೆ?

ಕಂಪನಿಯು ಎಷ್ಟು ಮಂದಿಯನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಖಾಲಿ ಇರುವ ಹುದ್ದೆಗಳ ಸಂಖ್ಯೆಗಳನ್ನು ನಿರ್ದಿಷ್ಟಪಡಿಸಿಲ್ಲ. ಎಷ್ಟು ಆಫರ್ ಲೆಟರ್‌ಗಳನ್ನು ಅಭ್ಯರ್ಥಿಗಳಿಗೆ ಕಳಿಸಲಿದೆ ಎಂಬುದರ ನಂತರ ಒಟ್ಟು ನೇಮಕಾತಿಯ ಸ್ಪಷ್ಟ ಚಿತ್ರಣ ಸಿಗಲಿದೆ.

2024ರ ಆರ್ಥಿಕ ವರ್ಷದಲ್ಲಿ ನೇಮಕಾತಿ ಬಗ್ಗೆ ಕಂಪನಿ ಹೇಳಿದ್ದೇನು?

2024-25ರ ಹಣಕಾಸು ವರ್ಷಕ್ಕೆ ಹೊಸಬರನ್ನು ನೇಮಕ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಕಂಪನಿಯು ಜನವರಿಯಲ್ಲಿ ತಿಳಿಸಿತ್ತು. ಆದರೂ ಕಂಪನಿ ಈಗ ವ್ಯಾಂಪಸ್‌ಗಳಿಗೆ ಭೇಟಿ ನೀಡುತ್ತಿದೆ. "ನಾವು ಮುಂದಿನ ವರ್ಷಕ್ಕೆ ನಮ್ಮ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಟಿಸಿಎಸ್‌ಗೆ ಸೇರಲು ಹೊಸಬರಲ್ಲಿ ಅಪಾರ ಉತ್ಸಾಹವನ್ನು ನೋಡುತ್ತೇವೆ" ಎಂದು ಟಿಸಿಎಸ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಹೇಳಿದ್ದರು.

ಇನ್ಫೋಸಿಸ್ ನೇಮಕಾತಿಯ ಪರಿಸ್ಥಿತಿ ಹೇಗಿದೆ?

ಇನ್ಫೋಸಿಸ್‌ನ ನಿರ್ಗಮಿತ ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್ ಮಾತನಾಡಿ, ಕಂಪನಿಯು ಬಳಕೆಯ ದರಗಳು ಮತ್ತು ಅದರ ಫ್ಲೆಕ್ಸಿ-ನೇಮಕಾತಿ ಮಾದರಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದರು. ಫೆಬ್ರವರಿಯಲ್ಲಿ ಕಂಪನಿಯು ಹಲವಾರು ಪ್ರಮುಖ ಪಾತ್ರಗಳಿಗೆ ನೇಮಕಗೊಂಡಿದೆ ಎಂದು ವರದಿಯಾಗಿದ್ದರೂ, ಈ ವರ್ಷದ ಆರಂಭದಲ್ಲಿ ತಕ್ಷಣದ ಕ್ಯಾಂಪಸ್ ಅಗತ್ಯವಿಲ್ಲ ಎಂದು ಇನ್ಫೋಸಿಸ್ ಹೇಳಿದೆ.


2023-24ರ ಆರ್ಥಿಕ ವರ್ಷದಲ್ಲಿ ಟೆಕ್ ಉದ್ಯಮವು 60,000 ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಜ್ಜಾಗಿದೆ ಎಂದು ಕೈಗಾರಿಕಾ ಸಂಸ್ಥೆ ನಾಸ್ಕಾಮ್ ಫೆಬ್ರವರಿಯಲ್ಲಿ ತಿಳಿಸಿತ್ತು. "ಕೋವಿಡ್ ವರ್ಷದಲ್ಲಿ ಸಾಕಷ್ಟು ಅತಿಯಾದ ನೇಮಕಾತಿ ನಡೆದಿದ್ದರಿಂದ, ಉದ್ಯಮಕ್ಕೆ ನಿರೀಕ್ಷಿತ ಮತ್ತು ಅಗತ್ಯವಿರುವ ಕೆಲವು ಮಟ್ಟದ ತಿದ್ದುಪಡಿಗಳನ್ನು ನಾವು ನೋಡುತ್ತಿದ್ದೇವೆ" ಎಂದು ನಾಸ್ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್ ಹೇಳಿದರು.

ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಬ್ಯಾಂಕ್ ಆಫ್ ಇಂಡಿಯಾ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಹಾಗೂ ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್ bankofindia.co.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಕೇಲ್ 4 ರವರೆಗೆ ವಿವಿಧ ವಿಭಾಗಗಳಲ್ಲಿ ಅಧಿಕಾರಿಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಮಾರ್ಚ್ 27ರ ಬುಧವಾರದಿಂದ ಪ್ರಾರಂಭವಾಗಿದ್ದು, ಏಪ್ರಿಲ್ 10 ರ ಬುಧವಾರ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಕೊನೆಗೊಳ್ಳುತ್ತದೆ.


Post a Comment

Previous Post Next Post
CLOSE ADS
CLOSE ADS
×