ಫೋನ್ ಪೇ, ಯುಪಿಐ ಪೇಮೆಂಟ್ ಮಾಡೋರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ

ಫೋನ್ ಪೇ, ಯುಪಿಐ ಪೇಮೆಂಟ್ ಮಾಡೋರಿಗೆ ಬಿಗ್ ಅಪ್ಡೇಟ್! ಹೊಸ ನಿಯಮ

UPI Payment : ಯುಪಿಐ ಪೇಮೆಂಟ್ ಮೇಲೆ ಶುಲ್ಕ ವಿಧಿಸಲು ನಿರ್ಧರಿಸಿದ ಸರ್ಕಾರ! ಎಷ್ಟು ಗೊತ್ತೇ



UPI Payment : ಇತ್ತೀಚಿನ ದಿನಗಳಲ್ಲಿ ಯಾವುದೇ ರೀತಿಯ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕ್ ವರೆಗೆ ಹೋಗುವ ಅಗತ್ಯ ಇಲ್ಲ. ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ಯುಪಿಐ ಪೇಮೆಂಟ್ (unified payments interface UPI) ಅಪ್ಲಿಕೇಶನ್ ಗಳ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತೇವೆ.

ದೊಡ್ಡ ಮೊತ್ತದ ಹಣ ಪಾವತಿ ಮಾಡುವುದರಿಂದ ಹಿಡಿದು ಸಣ್ಣ ಪುಟ್ಟ ಪೇಮೆಂಟ್ ಗಳು ಕೂಡ ಯುಪಿಐ ಮೂಲಕವೆ ನಡೆದು ಹೋಗುತ್ತದೆ.

ಭಾರತದಲ್ಲಿ ಯುಪಿಐ ಪೇಮೆಂಟ್ ಹೆಚ್ಚು ಪ್ರಚಲಿತದಲ್ಲಿ ಇದೆ ಯಾಕಂದ್ರೆ ಯುಪಿಐ ಪೇಮೆಂಟ್ ಎನ್ನುವುದು ಸಂಪೂರ್ಣ ಶುಲ್ಕ ರಹಿತವಾಗಿದೆ. ನೀವು ಯಾವುದೇ ಅಪ್ಲಿಕೇಶನ್ ಗಳ ಮೂಲಕ ಯುಪಿಐ ಪಾವತಿ ಮಾಡಿದ್ರೆ ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ.

ಹೀಗಾಗಿ ಭಾರತದಲ್ಲಿ ಬಹುತೇಕ ಎಲ್ಲರೂ ನಗದು ರಹಿತ ಹಣಕಾಸಿನ (cashless transaction) ವ್ಯವಹಾರವನ್ನ ಮಾಡುತ್ತಿದ್ದು ಅದಕ್ಕೆ ಯುಪಿಐ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. NPCI (National payment Corporation of India), UPI ಅನ್ನು ನಿರ್ವಹಿಸುತ್ತದೆ.

ಯುಪಿಐ ಪೇಮೆಂಟ್ ಮೇಲೆ ಶುಲ್ಕ ವಿಧಿಸಲು ಮುಂದಾದ ಸರ್ಕಾರ!

ಇತ್ತೀಚಿಗೆ ಹಣಕಾಸು ತಂತ್ರಜ್ಞಾನ ಕಂಪನಿಗಳು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ಜೊತೆಗೆ ಮಾತನಾಡಿ, ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಫೆಬ್ರುವರಿ ತಿಂಗಳಿನಲ್ಲಿ ಯುಪಿಐ ಪೇಮೆಂಟ್ ಪ್ರಮಾಣ 1800 ಕೋಟಿಗೆ ತಲುಪಿದೆ ಎನ್ನಲಾಗಿದೆ. ಇನ್ನು ಯುಪಿಐ ಚಾರ್ಜಸ್ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಂಡಿದೆ ಎನ್ನುವುದರ ಬಗ್ಗೆ ಇದುವರೆಗೆ ಸ್ಪಷ್ಟ ಮಾಹಿತಿ ಇಲ್ಲ.

ಯುಪಿಐ ಚಾರ್ಜಸ್ ವಿಧಿಸಿದ್ರೆ ಏನಾಗುತ್ತೆ?

ಯುಪಿಐ ಚಾರ್ಜಸ್ (UPI charges) ವಿಧಿಸಿದರೆ ಮೊಟ್ಟ ಮೊದಲನೇದಾಗಿ ಈಗ ಎಷ್ಟು ಯುಪಿಐ ಅನ್ನು ಜನ ಬಳಸುತ್ತಿದ್ದರೋ ಅದರ ಅರ್ಧದಷ್ಟು ಕಡಿಮೆ ಆಗಬಹುದು. ಒಂದು ಸಮೀಕ್ಷೆಯ ಪ್ರಕಾರ ಶೇಕಡ 75% ನಷ್ಟು ಜನ ಯುಪಿಐ ಚಾರ್ಜಸ್ ವಿಧಿಸಬಾರದು ಎಂದು ತಿಳಿಸಿದ್ದಾರೆ.

NPCI, ಯುಪಿಐ ಪೇಮೆಂಟ್ ಮೇಲೆ ಚಾರ್ಜಸ್ ವಿಧಿಸಿದರೆ ಅದು ನೇರವಾಗಿ ಯುಪಿಐ ಪೇಮೆಂಟ್ ಮೇಲೆ ಪರಿಣಾಮ ಬೀರಲಿದೆ ಎಂದು ಲೋಕಲ್ ಸರ್ಕಲ್ ಆನ್ಲೈನ್ ಸಮೀಕ್ಷೆ ತಿಳಿಸುತ್ತದೆ.

ಒಟ್ಟಿನಲ್ಲಿ ಯುಪಿಐ ಮೂಲಕ ಉಚಿತವಾಗಿ ಪೇಮೆಂಟ್ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿರುವವರಿಗೆ ಇದು ಆತಂಕದ ವಿಷಯವಾಗಿದ್ದರೆ, ಇನ್ನೊಂದು ಕಡೆ ಯುಪಿಐ ಪೇಮೆಂಟ್ ಬಳಕೆ ಕಡಿಮೆ ಆಗಿ ಜನ ಮತ್ತೆ ಬ್ಯಾಂಕ್ ಮೂಲಕ ಅಥವಾ ಕ್ಯಾಶ್ ಮೂಲಕ ವ್ಯವಹಾರ ಮಾಡುವ ಅಪಾಯವು ಇದೆ.


Post a Comment

Previous Post Next Post
CLOSE ADS
CLOSE ADS
×