ಹಲೋ ಸ್ನೇಹಿತರೇ, ನೀವು ಇ-ಶ್ರಮ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೇ? ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು & ಯಾವ ಕೆಲಸ ಮಾಡುತ್ತಿರುವವರು E Shram ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು & ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂಬ ಎಲ್ಲಾ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಮೀನುಗಾರರು, ಚಾಲಕರು, ಟೈಲರಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರ್ಕಾರವು ಗುರುತಿಸಿರುವ ಸುಮಾರು 379 ವರ್ಗದ ಕಾರ್ಮಿಕರು ಇ-ಶ್ರಮ್ ಕಾರ್ಡ್‌ಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಅರ್ಹತೆ:
- ಕನಿಷ್ಠ 16 ವರ್ಷ ರಿಂದ 59 ವಯೋಮಿತಿ.
- ಆದಾಯ ತೆರಿಗೆ ಪಾವತಿ ಮಾಡುತ್ತಿರಬಾರದು.
- ಭವಿಷ್ಯನಿಧಿ ಮತ್ತು ESI ಫಲಾನುಭವಿಯಾಗಿರಬಾರದು.
ಅವಶ್ಯಕ ದಾಖಲೆಗಳು
- ಆಧಾರ್ ಕಾರ್ಡ್ (aadhar card)
- ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ.(mobile number)
- ಬ್ಯಾಂಕ್ ಖಾತೆ ವಿವರಗಳು.(bank details)
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಧಿಕೃತ ವೆಬ್ ಸೈಟ್’ಗೆ ಭೇಟಿ ನೀಡಿ “Register on e-SHRAM” ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಂತರ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚ್ ನಮೂದಿಸಿ ನಂತರ ನೀವು EPFO & ESIC ಸದಸ್ಯರಿದ್ದೀರಾ ಎಂದು ಕೇಳಾಗಿದೆ No ಎಂದು ಆಯ್ಕೆ ಮಾಡಿಕೊಳ್ಳಿ ನಂತರ Send OTP button ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಿಮ್ಮ mobile number ಗೆ ಬಂದ OTP ಸಂಖ್ಯೆಯನ್ನು ನಮೂದಿಸಿ Submit ಮಾಡಬೇಕು.
- ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸಿ Submit ಮಾಡಿಕೊಳ್ಳಿ.
- ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯು ಕಂಪ್ಯೂಟರ್ ಪರದೆಯ ಮೇಲೆ ತೋರಿಸಲಾಗುತ್ತದೆ. ಮಾಹಿತಿಯನ್ನು ನಮೂದಿಸಿ ಮುಂದುವರೆಯಬೇಕು.
- ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು.
- ನಿಮ್ಮ ವಿಳಾಸದ ವಿವರಗಳನ್ನು ನಮೂದಿಸಬೇಕು.
- ಶೈಕ್ಷಣಿಕ ವಿದ್ಯಾರ್ಹತೆ & ಆದಾಯದ ವಿವರಗಳನ್ನು ನಮೂದಿಸಿ.
- ವೃತ್ತಿ, ಉದ್ಯೋಗದ ವಿವರವನ್ನು ನಮೂದಿಸಿ.
- ಬ್ಯಾಂಕ್ ಖಾತೆಗೆ aadhar number ಲಿಂಕ್ ಆಗಿರದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ.
- ನೀವು ಎಂಟರ್ ಮಾಡಿರುವ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ ನಂತರ Submit button ಮೇಲೆ ಕ್ಲಿಕ್ ಮಾಡಿ.
- ಸಕ್ರಿಯವಾಗಿ ಅರ್ಜಿ ಸಲ್ಲಿಸಿದ ನಂತರದಲ್ಲಿ ಗುರುತಿನ ಚೀಟಿಯನ್ನು ಪಡೆದುಕೊಳ್ಳಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ಲಿಂಕ್: Apply ಮಾಡಿ
Tags:
Govt. schemes