OTT Releases This week:ಈ ವಾರ ಒಟಿಟಿಯಲ್ಲಿ ಹತ್ತು ಹಲವು ಸಿನಿಮಾ ಮತ್ತು ವೆಬ್ ಸಿರೀಸ್‌ಗಳು ಬಿಡುಗಡೆ ಆಗುತ್ತಿವೆ. ಅಷ್ಟೇ ಈಗಾಗಲೇ ಒಂದಷ್ಟು ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಕನ್ನಡದ ಗರಡಿ, ಮರೀಚಿ ಸಿನಿಮಾಗಳೂ ಸಹ ಒಟಿಟಿಗೆ ಬಂದಿವೆ. ಇಲ್ಲಿವೆ ಈ ವಾರದ ಒಟಿಟಿ ಸಿನಿಮಾ ಮತ್ತು ವೆಬ್ ಸರಣಿಗಳ ಸಂಪೂರ್ಣ ವಿವರ.
ಸಂಕ್ರಾಂತಿ ಪ್ರಯುಕ್ತ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಕೆಲವು ಸಿನಿಮಾಗಳೀಗ ಒಟಿಟಿ ಅಂಗಳಕ್ಕೆ ಆಗಮಿಸುತ್ತಿವೆ. ಫೆಬ್ರವರಿ ಮೊದಲ ವಾರದಲ್ಲಿ ಸಿನಿಮಾ ಸೇರಿ ವಿವಿಧ ಭಾಷೆಗಳ ವೆಬ್‌ಸಿರೀಸ್‌ಗಳು ಸ್ಟ್ರೀಮಿಂಗ್ ಆರಂಭಿಸಲಿವೆ. ಈಗಾಗಲೇ ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಹತ್ತು ಹಲವು ಕಂಟೆಂಟ್‌ಗಳು ಬಂದಿವೆ. ಕನ್ನಡದ ಮರೀಚಿ, ಗರಡಿ ಸಿನಿಮಾಗಳೂ ಒಟಿಟಿಗೆ ಕಾಲಿಟ್ಟಿವೆ.
ಪ್ರೈಂನಲ್ಲಿ ಕನ್ನಡದ ಗರಡಿ, ಮರೀಚಿ
ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಗರಡಿ ಸಿನಿಮಾ ನವೆಂಬರ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಎರಡು ತಿಂಗಳ ಬಳಿಕ ದಿಢೀರ್ ಒಟಿಟಿ ಅಂಗಳಕ್ಕೆ ಬಂದಿದೆ. ಬಿ.ಸಿ ಪಾಟೀಲ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸಿದ್ದರೆ, ಸೋನಲ್ ಮಾಂತೆರೋ ನಾಯಕಿಯಾಗಿದ್ದರು. ನಟ ದರ್ಶನ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ವಿಜಯ್ ರಾಘವೇಂದ್ರ, ಸೋನು ಗೌಡ ನಟನೆಯ ಮರೀಚಿ ಸಿನಿಮಾ ಸಹ ಇದೀಗ ಒಟಿಟಿಗೆ ಬಂದಿದೆ. ಈ ಚಿತ್ರವೂ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಾಗಾದರೆ ಇನ್ನುಳಿದ ಯಾವ್ಯಾವ ಸಿನಿಮಾಗಳು ಸ್ಟ್ರೀಮ್ ಆಗಲಿವೆ, ಆಗುತ್ತಿವೆ? ಇಲ್ಲಿದೆ ಮಾಹಿತಿ.
ಅಮೆಜಾನ್ ಪ್ರೈಮ್ ವಿಡಿಯೋ
- ಗರಡಿ (ಕನ್ನಡ ಸಿನಿಮಾ) ಜ. 30
- ಮರೀಚಿ (ಕನ್ನಡ ಸಿನಿಮಾ) – ಜನವರಿ 29
- ದಿ ಫ್ರಾಂಕ್ ಶೋ (ಡಚ್ ವೆಬ್ ಸರಣಿ) - ಫೆಬ್ರವರಿ 2
- ಮಿಸ್ಟರ್ ಮತ್ತು ಮಿಸ್ ಸ್ಮಿತ್ (ಇಂಗ್ಲಿಷ್ ವೆಬ್ ಸರಣಿ) - ಫೆಬ್ರವರಿ 2
- ಸೈಂಧವ್ (ತೆಲುಗು ಸಿನಿಮಾ) - ಫೆಬ್ರವರಿ 2
ನೆಟ್‌ಫ್ಲಿಕ್ಸ್
- ಭಕ್ಷಕ್ (ಹಿಂದಿ ಸಿನಿಮಾ) ಫೆ. 9
- ಮೈಟಿ ಭೀಮ್ಸ್ ಪ್ಲೇಟೈಮ್ (ಇಂಗ್ಲಿಷ್ ವೆಬ್ ಸರಣಿ) - ಜನವರಿ 29
- ದಿ ಗ್ರೇಟೆಸ್ಟ್ ನೈಟ್ ಇನ್ ಪಾಪ್ (ಇಂಗ್ಲಿಷ್ ಸಿನಿಮಾ) - ಜನವರಿ 29
- ಜ್ಯಾಕ್ ವೈಟ್ ಹಾಲ್: ಸೆಟ್ಲ್ ಡೌನ್ (ಇಂಗ್ಲಿಷ್ ಸಿನಿಮಾ) - ಜನವರಿ 30
- ನಾಸ್ಕರ್: ಫುಲ್ ಸ್ಪೀಡ್ (ಇಂಗ್ಲಿಷ್ ವೆಬ್ ಸರಣಿ) - ಜನವರಿ 30
- ಅಲೆಕ್ಸಾಂಡರ್: ದಿ ಮೇಕಿಂಗ್ ಆಫ್ ಎ ಗಾಡ್ (ಇಂಗ್ಲಿಷ್ ವೆಬ್ ಸರಣಿ) - ಜನವರಿ 31
- ಬೇಬಿ ಬ್ಯಾಂಡಿಟೊ (ಇಂಗ್ಲಿಷ್ ಸರಣಿ) - ಜನವರಿ 31
- ದಿ ಸೆವೆನ್ ಡೆಡ್ಲಿ ಸಿನ್ಸ್ (ಜಪಾನೀಸ್ ವೆಬ್ ಸರಣಿ) - ಜನವರಿ 31
- ವಿಲ್ (ಡಚ್ ಸಿನಿಮಾ) - ಜನವರಿ 31
- ಆಫ್ಟರ್ ಎವರಿಥಿಂಗ್ (ಇಂಗ್ಲಿಷ್ ಸಿನಿಮಾ)- ಜನವರಿ 31
- ಲೆಟ್ಸ್ ಟಾಕ್ ಅಬೌಟ್ ಚು (ಮ್ಯಾಂಡರಿನ್ ವೆಬ್ ಸರಣಿ)- ಫೆಬ್ರವರಿ 2
- ಓರಿಯನ್ ಅಂಡ್ ದಿ ಡಾರ್ಕ್ (ಇಂಗ್ಲಿಷ್ ಸಿನಿಮಾ) - ಫೆಬ್ರವರಿ 2
ಡಿಸ್ನಿ ಪ್ಲಸ್ ಹಾಟ್ ಸ್ಟಾರ್
- ಕಾಯರ್ (ಇಂಗ್ಲಿಷ್ ವೆಬ್ ಸರಣಿ) - ಜನವರಿ 31
- ಮಿಸ್ ಪರ್ಫೆಕ್ಟ್ (ತೆಲುಗು ವೆಬ್ ಸರಣಿ) - ಫೆಬ್ರವರಿ 2
- ಸೆಲ್ಫ್ (ಇಂಗ್ಲಿಷ್ ಸಿನಿಮಾ) - ಫೆಬ್ರವರಿ 2
- ದಿ ನೋ (ಇಂಗ್ಲಿಷ್ ವೆಬ್ ಸರಣಿ) - ಜಿಯೋ ಸಿನಿಮಾ OTT - ಜನವರಿ 29
- ಅಸಿಡಿಯೊ (ಸ್ಪ್ಯಾನಿಷ್ ಸಿನಿಮಾ)- ಬುಕ್ ಮೈ ಶೋ OTT- ಜನವರಿ 30
- ಓ ಮೈ ಡಾರ್ಲಿಂಗ್ (ಮಲಯಾಳಂ ಸಿನಿಮಾ)- ಮನೋರಮಾ ಮ್ಯಾಕ್ಸ್ OTT- ಫೆಬ್ರವರಿ 2
.jpeg)