ರೈತರಿಗೆ ಭರ್ಜರಿ ಗಿಫ್ಟ್! ಕೃಷಿ ಉಪಕರಣಗಳ ಖರೀದಿಗೆ ಸಿಗಲಿದೆ 50% ರಿಯಾಯಿತಿ

ರೈತರಿಗೆ ರಾಜ್ಯ ಸರ್ಕಾರದ ಬಂಪರ್ ಕೊಡುಗೆ; ಕೃಷಿ ಉಪಕರಣಗಳ ಖರೀದಿಗೆ ಸಿಗಲಿದೆ 50% ರಿಯಾಯಿತಿ



ರಾಜ್ಯದ ರೈತರಿಗೆ (farmers) ರಾಜ್ಯ ಸರ್ಕಾರ ಬಂಪರ್ ಕೊಡುಗೆ ಒಂದನ್ನು ನೀಡುತ್ತಿದೆ. ರಾಜ್ಯದ್ಯಂತ ಕೃಷಿ (Agriculture) ಯನ್ನು ಜೀವಾಳವಾಗಿಸಿಕೊಂಡಿರುವ ರೈತರು ತಮ್ಮ ಕೃಷಿ ಭೂಮಿಗೆ ಬೇಕಾಗಿರುವ ಉಪಕರಣಗಳನ್ನು ಇನ್ನು ಮುಂದೆ ಸರ್ಕಾರದ ಧನ ಸಹಾಯದಿಂದ ಸುಲಭವಾಗಿ ಖರೀದಿ ಮಾಡಬಹುದು.

ಕೃಷಿಗೆ ಬೇಕಾಗಿರುವ ಉಪಕರಣಗಳನ್ನು (agriculture materials) ಒದಗಿಸಿಕೊಳ್ಳುವುದು ರೈತರಿಗೆ ಸುಲಭದ ಕೆಲಸವಲ್ಲ. ಯಾಕೆಂದರೆ ಕೃಷಿ ಉಪಕರಣಗಳು (agriculture implements) ಕೂಡ ಈಗ ದುಬಾರಿ ಆಗಿವೆ. ಹಾಗಾಗಿ ಕೃಷಿಗೆ ಅತ್ಯಗತ್ಯವಾಗಿರುವ, ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ಈಗ ಸರ್ಕಾರ ಸಹಾಯಧನ ನೀಡುತ್ತಿದೆ.

ಕೃಷಿ ಉಪಕರಣಗಳ ಖರೀದಿಗೆ ಸಬ್ಸಿಡಿ (Subsidy on agriculture equipment)

ರಾಜ್ಯ ಸರ್ಕಾರ ರೈತರಿಗಾಗಿಯೇ ವಿಶೇಷ ಸಬ್ಸಿಡಿ ಯೋಜನೆ ಆರಂಭಿಸಿದ್ದು, ಕೃಷಿ ಉಪಕರಣಗಳನ್ನು ಖರೀದಿಸುವುದಕ್ಕೆ ರೈತರಿಗೆ ಧನಸಹಾಯ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರು ಕೃಷಿ ಉಪಕರಣದ ಖರೀದಿಯ ಮೇಲೆ 90% ನಷ್ಟು ರಿಯಾಯಿತಿ ಪಡೆದುಕೊಂಡರೆ, ಸಾಮಾನ್ಯ ರೈತರು 50% ನಷ್ಟು ರಿಯಾಯಿತಿ ಪಡೆದುಕೊಳ್ಳಲಿದ್ದಾರೆ.

ಕಳೆ ಕೀಳುವ ಯಂತ್ರಗಳಾದ ಪವರ್ ವೀಡರ್, ಪವರ್ ಸ್ಪ್ರೇಯರ್ ಗಳು, ಡೀಸೆಲ್ ಪಂಪ್ ಸೆಟ್, ಫ್ಲೋರ್ ಮಿಲ್ ಗಳು, ಮೋಟಾರ್ ಚಾಲಿತ ಸಣ್ಣ ಎಣ್ಣೆಗಾಣಗಳು, ಪವರ್ ಟಿಲ್ಲರ್, ಮಿನಿ ಟ್ರ್ಯಾಕ್ಟರ್, ಹಾಗೂ ಇತರ ಹೈಟೆಕ್ ಕೃಷಿ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ರಿಯಾಯಿತಿ ಪಡೆಯಬಹುದಾಗಿದೆ.

ಯಾರಿಗೆ ಸಿಗಲಿದೆ ಈ ರಿಯಾಯಿತಿ?

ಸದ್ಯ ಮಡಿಕೇರಿ (madikeri) ತಾಲೂಕಿನ ರೈತ ಬಂಧುಗಳಿಗೆ ಈ ರಿಯಾಯಿತಿ ಸರ್ಕಾರ ಘೋಷಣೆ ಮಾಡಿದ್ದು, ಉಪಕರಣಗಳನ್ನು ಖರೀದಿ ಮಾಡಲು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

  • ರೈತರ ಭೂಮಿಯ ಪಹಣಿ
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ
  • ಫ್ರೂಟ್ಸ್ ಐಡಿ
  • ಪಾಸ್ ಪೋರ್ಟ್ ಅಳತೆಯ ಫೋಟೋ
  • ಯಾವ ಕೃಷಿ ಉಪಕರಣ ಖರೀದಿಸಲು ಬಯಸುತ್ತೀರಿ ಎನ್ನುವುದಕ್ಕೆ ಮಾಹಿತಿ

ಈ ಕೆಲವು ಬೇಸಿಕ್ ದಾಖಲೆಗಳನ್ನು ಒದಗಿಸುವುದರ ಮೂಲಕ, ಕೃಷಿ ಉಪಕರಣಗಳನ್ನು ಅತ್ಯುತ್ತಮ ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಸಾಧ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಕೃಷಿ ಇಲಾಖೆ ಕಛೇರಿಗೆ ಭೇಟಿ ನೀಡಬಹುದು.


Previous Post Next Post