ಪಿಎಂ ಸೂರ್ಯೋದಯ ಯೋಜನೆಗೆ ವಿಶೇಷ ಒತ್ತು – ಒಂದು ಕೋಟಿ ಮನೆಗಳಿಗೆ ಸೋಲಾರ್ ಮೇಲ್ಛಾವಣಿ

SVR Creations
0

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಮಧ್ಯಂತರ ಬಜೆಟ್‍ನಲ್ಲಿ (Interim Budget) ಇತ್ತೀಚೆಗೆ ಘೋಷಣೆಯಾದ `ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ಗೆ (Pradhan Mantri Suryoday Yojna) ವಿಶೇಷ ಒತ್ತು ನೀಡಲಾಗಿದೆ. ಮನೆಗಳಿಗೆ ಸೋಲಾರ್ ಮೇಲ್ಛಾವಣಿ (Rooftop Solar Scheme) ಅಳವಡಿಸುವ ಈ ಯೋಜನೆ ಬಗ್ಗೆ ಅವರು ತಮ್ಮ ಬಜೆಟ್ ಭಾಷಣದಲ್ಲಿ ವಿಶೇಷವಾದ ಮಾಹಿತಿ ಹಂಚಿಕೊಂಡಿದ್ದಾರೆ.



  • ಕೇಂದ್ರ ಸರಕಾರದ ಪ್ರಸ್ತಾಪಿತ ಮೇಲ್ಛಾವಣಿ ಸೌರ ವಿದ್ಯುದೀಕರಣ ಯೋಜನೆಯ ಅನ್ವಯ, ಸುಮಾರು ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ತನ್ನ ಮಧ್ಯಾಂತರ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.
  • ಮೇಲ್ಛಾವಣಿ ಸೌರ ವಿದ್ಯುದೀಕರಣ ಮತ್ತು ಉಚಿತ ವಿದ್ಯುತ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜನವರಿ 22ರಂದು ಘೋಷಿಸಿದ್ದರು.
  • ಈ ಯೋಜನೆಯ ಮೂಲಕ ಒಂದು ಕೋಟಿ ಮನೆಗಳಲ್ಲಿ ಸೌರ ಮೇಲ್ಛಾವಣಿ ಅಳವಡಿಸಲು ಉದ್ದೇಶಿಸಲಾಗಿದೆ. ಇದರಿಂದ ಒಂದು ಮನೆಗೆ ತಿಂಗಳಿಗೆ ಸುಮಾರು 300 ಯೂನಿಟ್ ವಿದ್ಯುತ್ ಉಳಿತಾಯವಾಗುತ್ತದೆ. ವಾರ್ಷಿಕವಾಗಿ 15,000-18,000 ರೂ.ಗಳ ಉಳಿತಾಯವಾಗಲಿದೆ ಎಂದು ಅವರು ಹೇಳಿದ್ದಾರೆ. 
  • ಸರ್ಕಾರಿ ಸ್ವಾಮ್ಯದ ಆರ್‌ಇಸಿ ಲಿಮಿಟೆಡ್‍ನ್ನು ಯೋಜನೆಯ ಅನುಷ್ಠಾನ ಏಜೆನ್ಸಿಯಾಗಿ ನೇಮಿಸಲಾಗಿದೆ. ಒಂದು ವರ್ಷದೊಳಗೆ ಒಂದು ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ಅಳವಡಿಕೆಗಳನ್ನು ಹೊಂದುವ ಗುರಿಯನ್ನು ಹೊಂದಿದೆ. ಜ.22 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ನಂತರ ಅಯೋಧ್ಯೆಯಿಂದ ಹಿಂದಿರುಗಿದ ನಂತರ ಒಂದು ಕೋಟಿ ಮನೆಗಳಲ್ಲಿ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.

ಯೋಜನೆಯ ಮುಖ್ಯಾಂಶಗಳು

1. ಈ ಯೋಜನೆಯು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಅಡಿಯಲ್ಲಿ ಬರುತ್ತದೆ. ಇದರ ಪ್ರಯೋಜನವನ್ನು ಸುಮಾರು ಒಂದು ಕೋಟಿ ಕುಟುಂಬಗಳು ಪಡೆಯುತ್ತವೆ. ಈ ಕುಟುಂಬಗಳು ತಮ್ಮ ಹೆಚ್ಚುವರಿ ವಿದ್ಯುತನ್ನು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಮಾರಾಟ ಮಡಬಹುದಾಗಿದೆ.

2. ಈ ಯೋಜನೆಯಿಂದ ಈ ಕುಟುಂಬಗಳಿಗೆ ವರ್ಷಕ್ಕೆ 15,000ದಿಂದ 18,000 ರೂಪಾಯಿ ಉಳಿಸಲು ಸಾಧ್ಯವಾಗುತ್ತದೆ ಎಂಬುದಾಗಿ ಅಂದಾಜಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

3. ಸರಕಾರಿ ಒಡೆತನದ ಗ್ರಾಮೀಣ ವಿದ್ಯುದೀಕರಣ ನಿಗಮ (ಆರ್ಇಸಿ)ಲಿಮಿಟೆಡನ್ನು ಯೋಜನೆಯ ಉಸ್ತುವಾರಿ ಸಂಸ್ಥೆಯಾಗಿ ನೇಮಿಸಲಾಗಿದೆ.

4. ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯು ಕೆಳ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಮೇಲ್ಛಾವಣಿ ಸೌರವಿದ್ಯುತ್ ಸಲಕರಣೆಗಳನ್ನು ನೀಡುವ ಮೂಲಕ ವಿದ್ಯುತ್ ಒದಗಿಸುವ ಉದ್ದೇಶವನ್ನು ಹೊಂದಿದೆ.

5. ಮೇಲ್ಛಾವಣಿ ವಿದ್ಯುದೀಕರಣ ಯೋಜನೆಯನ್ವಯ, ಸೌರ ಫೋಟೋವೋಲ್ಟಾಯಿಕ್ (ಪಿವಿ) ಫಲಕಗಳನ್ನು ಕಟ್ಟಡಗಳು, ಮನೆ ಅಥವಾ ವಾಸಿಸುವ ಕಟ್ಟಡಗಳ ತುದಿಯಲ್ಲಿ ಸ್ಥಾಪಿಸಲಾಗುವುದು.



ಇಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಗೆ ಉತ್ತೇಜನ

  • ದೇಶದಲ್ಲಿ ಇಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ಗೆ ಮತ್ತು ಅವುಗಳ ಮೂಲಸೌಕರ್ಯಗಳನ್ನು ದೇಶದಲ್ಲಿ ನಿರ್ಮಿಸುವುದಕ್ಕೆ ಉತ್ತೇಜನ ನೀಡುವ ಮೂಲಕ ದೇಶದಲ್ಲಿ ಇಲೆಕ್ಟ್ರಿಕ್ ವಾಹನಗಳ ಪರಿಸರ ವ್ಯವಸ್ಥೆಯನ್ನು ಬಲಗೊಳಿಸಲು ಸರಕಾರ ಮುಂದಾಗಿದೆ.
  • ಸಾರ್ವಜನಿಕ ಸಾರಿಗೆಯಲ್ಲಿ ಇಲೆಕ್ಟ್ರಿಕ್ ಬಸ್ ಗಳ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣದಲ್ಲಿ ಘೋಷಿಸಿದರು.

ನೇರ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ

2024-25ರ ಮಧ್ಯಾಂತರ ಬಜೆಟ್ನಲ್ಲಿ, ನರೇಂದ್ರ ಮೋದಿ ಸರಕಾರವು ತೆರಿಗೆ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

  • ತೆರಿಗೆಯಲ್ಲಿ ಸರಕಾರವು ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ಮತ್ತು ಆಮದು ತೆರಿಗೆ ಸೇರಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಯಲ್ಲಿ ಹಿಂದಿನದೇ ದರಗಳನ್ನು ಉಳಿಸಿಕೊಳ್ಳಲಾಗುವುದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
  • ಹಳೆಯ ತೆರಿಗೆಯನ್ನೇ ಮುಂದುವರಿಸಿಕೊಂಡು ಹೋಗುವ ನಿಟ್ಟಿನಲ್ಲಿ, ನವೋದ್ಯಮಗಳಿಗೆ ಮತ್ತು ಸಂಪತ್ತು ಅಥವಾ ಪಿಂಚಣಿ ನಿಧಿಗಳು ಮಾಡುವ ಹೂಡಿಕೆಗಳಿಗೆ ನೀಡಲಾಗುತ್ತಿರುವ ಕೆಲವೊಂದು ತೆರಿಗೆ ವಿನಾಯಿತಿಗಳನ್ನು 2025 ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು ಎಂದು ಹಣಕಾಸು ಸಚಿವೆ ಘೋಷಿಸಿದರು.
  • ‘‘ಸಂಪ್ರದಾಯಕ್ಕೆ ಅನುಗುಣವಾಗಿ, ತೆರಿಗೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ನಾನು ಹೋಗುವುದಿಲ್ಲ ಹಾಗೂ ಆಮದು ತೆರಿಗೆಗಳು ಸೇರಿದಂತೆ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ’’ ಎಂದು ನಿರ್ಮಲಾ ತನ್ನ ಬಜೆಟ್ ಭಾಷಣದಲ್ಲಿ ಹೇಳಿದರು.

ಹಳೆಯ ತೆರಿಗೆ ಬಾಕಿ ನೋಟಿಸ್ ಗಳನ್ನು ವಾಪಸ್ ಪಡೆದ ಸರಕಾರ

ಜೀವನ ಮತ್ತು ಉದ್ಯಮವನ್ನು ಸರಳಗೊಳಿಸುವ ಉದ್ದೇಶದಿಂದ, ಬಾಕಿ ತೆರಿಗೆ ನೋಟಿಸ್ ಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಘೋಷಿಸಿದ್ದಾರೆ.

  • ಹಲವಾರು ವರ್ಷಗಳಿಂದ ಬಾಕಿಯಿರುವ, ಕ್ಷುಲ್ಲಕ, ಪರಿಶೀಲಿಸಲ್ಪಡದ ಮತ್ತು ಸ್ವೀಕೃತಗೊಳ್ಳದ ಅಥವಾ ವಿವಾದಿತ ಲೆಕ್ಕವಿಲ್ಲದಷ್ಟು ತೆರಿಗೆ ನೋಟಿಸ್ ಗಳಿಂದ ಜನರು ಹೈರಾಣಾದಿದ್ದಾರೆ ಎಂದು ನಿರ್ಮಲಾ ಅಭಿಪ್ರಾಯಪಟ್ಟರು. ಕೆಲವು ನೋಟಿಸ್ ಗಳನ್ನು 1962ರಷ್ಟು ಹಿಂದೆಯೇ ನೀಡಲಾಗಿದೆ ಎಂದರು.
  • ಜನರನ್ನು ಈ ಹೊರೆಯಿಂದ ಮುಕ್ತಗೊಳಿಸಲು, 2009-10ರ ಹಣಕಾಸು ವರ್ಷದವರೆಗಿನ 25,000 ರೂ.ವರೆಗಿನ ತೆರಿಗೆ ಬಾಕಿ ವ್ಯಾಜ್ಯಗಳನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹಣಕಾಸು ಸಚಿವರು ಘೋಷಿಸಿದರು. 2010-11ರಿಂದ 2014-15ರ ಹಣಕಾಸು ವರ್ಷಗಳವರೆಗಿನ 10,000 ರೂ.ವರೆಗಿನ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು ಎಂದರು. ಇದರಿಂದ ದೇಶಾದ್ಯಂತದ ಸುಮಾರು ಒಂದು ಕೋಟಿ ತೆರಿಗೆದಾರರಿಗೆ ಪ್ರಯೋಜನವಾಗಿಲಿದೆ ಎಂದು ಅವರು ತಿಳಿಸಿದರು. ಇದರ ಪ್ರಯೋಜನ ಪಡೆಯುವವರ ಪೈಕಿ ಹೆಚ್ಚಿನವರು ಮಧ್ಯಮ ವರ್ಗದ ವೇತನದಾರರು.

ಸಾರಿಗೆಯಲ್ಲಿ ಪ್ರಾಕೃತಿಕ ಅನಿಲಗಳ ಮಿಶ್ರಣ ಕಡ್ಡಾಯ

ವಾಹನಗಳಲ್ಲಿ ಬಳಕೆಗೆ ಸಂಕುಚಿತ ಜೈವಿಲ ಅನಿಲವನ್ನು ಸಂಕುಚಿತ ನೈಸರ್ಗಿಕ ಅನಿಲದೊಂದಿಗೆ ಮಿಶ್ರಣ ಮಾಡುವುದು ಇನ್ನು ಮುಂದೆ ಕಡ್ಡಾಯವಾಗಿದೆ ಎಂದು ಹಣಕಾಸು ಸಚಿವೆ ಘೋಷಿಸಿದ್ದಾರೆ. ಅದೇ ವೇಳೆ, ನೈಸರ್ಗಿಕ ಅನಿಲವನ್ನು ಕೊಳವೆಗಳಲ್ಲಿ ಸಾಗಿಸುವುದು ಕೂಡಾ ಕಡ್ಡಾಯ ಎಂದರು.

  • ಜೈವಿಕವಾಗಿ ಕೊಳೆಯುವ ಉತ್ಪನ್ನಗಳ ಬದಲಿಗೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಒದಗಿಸಲು ಜೈವಿಕ ಉತ್ಪಾದನೆ ಮತ್ತು ಬಯೋ ಫೌಂಡ್ರಿ ಯೋಜನೆಯನ್ನು ಆರಂಭಿಸಲಾಗುವುದು ಎಂದು ಸಚಿವೆ ತಿಳಿಸಿದರು.
  • ಈ ಯೋಜನೆಯು ಈಗಾಗಲೇ ಜಾರಿಯಲ್ಲಿದೆ, ಇದು ಹೊಸ ಮಾರ್ಗಸೂಚಿಗಳು ಮತ್ತು ಪ್ರೋತ್ಸಾಹಗಳೊಂದಿಗೆ ಜಾರಿಯಾಗಲಿದೆ. 

Post a Comment

0 Comments
* Please Don't Spam Here. All the Comments are Reviewed by Admin.
Post a Comment (0)

#buttons=(Accept !) #days=(20)

Our website uses cookies to enhance your experience. Learn More
Accept !
To Top