ದರ್ಶನ್ ಮುಖ್ಯಭೂಮಿಕೆಯ ಡೆವಿಲ್ ಸಿನಿಮಾದ ಮೊದಲ ಹಂತದ ಶೂಟಿಂಗ್ (shooting) ಮುಕ್ತಾಯವಾಗಿದೆ ಎಂದು ಸ್ವತಃ ನಿರ್ದೇಶಕ ಪ್ರಕಾಶ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಎರಡನೇ ಹಂತದ ಚಿತ್ರೀಕರಣವನ್ನು ಫೆಬ್ರವರಿ 2 ತಾರೀಖಿನಿಂದ ಆರಂಭಿಸೋದಾಗಿ ತಿಳಿಸಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೇ ‘ಡೆವಿಲ್’ (Devil) ಚಿತ್ರದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರವೇರಿತ್ತು. ಪೂಜೆ ಮುಗಿದಿದ್ದೆ ತಡ ಡೆವಿಲ್ ಹೆಸರಿನಲ್ಲಿ ಪೋಸ್ಟರ್ ಹರಿದಾಡಿದವು. ಆದರೆ, ಈ ಕುರಿತು ನಿರ್ದೇಶಕರು ಪ್ರತಿಕ್ರಿಯೆ ನೀಡಿದ್ದರು. ಡೆವಿಲ್ ಸಿನಿಮಾದ ಯಾವುದೇ ಮಾಹಿತಿ ನಂಬಬೇಡಿ. ನಾವೇ ಕೊಡುತ್ತೇವೆ ಎಂದಿದ್ದರು.
ಶುಭದಿನವೆಂದು ಡೆವಿಲ್ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದೇವೆ. ಆದರೆ, ಚಿತ್ರದ ಫಸ್ಟ್ ಲುಕ್ (First Look) ಆಗಲಿ, ಪೋಸ್ಟರ್ ಆಗಲಿ ಯಾವುದು ನಾವು ಬಿಡುಗಡೆ ಮಾಡಿಲ್ಲ. ಕಾಟೇರ ಚಿತ್ರದ ನಂತರ ನಮ್ಮ ಚಿತ್ರದ ಪ್ರಚಾರ ಕಾರ್ಯ ಆರಂಭಿಸುತ್ತೇವೆ. ನಮ್ಮ ವೈಷ್ಣೊ ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ ಡೆವಿಲ್ ಚಿತ್ರದ ಬಗ್ಗೆ ಮಾಹಿತಿ ನೀಡುತ್ತಾ ಹೋಗುತ್ತೇವೆ ಎಂದು ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದರು.
ಮಿಲನ ಪ್ರಕಾಶ್ (Milan Prakash) ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ನಡುವೆ ಮತ್ತೊಂದು ಸುದ್ದಿ ಗಾಂಧಿ ನಗರದಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ. ದರ್ಶನ್ ಮತ್ತು ಸುದೀಪ್ ಕಾಂಬಿನೇಷನ್ ನ ದಿಗ್ಗಜರು 2 ಸಿನಿಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಮತ್ತೆ ಇಬ್ಬರು ಜೊತೆಯಾಗಿ ನಟಿಸುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಮುಂದಿನ ದಿನಗಳಲ್ಲಿ ಇದಕ್ಕೂ ಉತ್ತರ ಸಿಗಬಹುದು.