ಅಯೋಧ್ಯೆಯಲ್ಲಿ ಶ್ರಿರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಶದ ಮೂಲೆ ಮೂಲೆಗಳಿಂದ ಜನರು, ಶ್ರಿರಾಮನ ಭಕ್ತರು ಅಯೋಧ್ಯೆಗೆ ತೆರಳುತ್ತಿದ್ದಾರೆ. ಇದರ ಕರ್ನಾಟಕ ಹೊರತಾಗಿಲ್ಲ. ಹೀಗೆ ಅಯೋಧ್ಯೆಗೆ ತೆರಳುವವರಿಗಾಗಿ ಭಾರತಿಯ ರೈಲ್ವೆಯು ವಿಶೇಷ ಆಸ್ಥಾ ರೈಲುಗಳನ್ನು ಬಿಟ್ಟಿದೆ. ಉತ್ತರ ಕರ್ನಾಟಕದಿಂದ ವಿಶೇಷ ರೈಲು ಅಯೋಧ್ಯೆಗೆ ಪ್ರಯಾಣ ಬೆಳೆಸಿದೆ.
ಜನವರಿ 22ರಂದು ಅಯೋಧ್ಯೆ ಉದ್ಘಾಟನೆ ಆದ ಬಳಿಕ ಮರು ದಿನವೇ ಜನವರಿ 23 ರಿಂದಲೇ ಭಕ್ತರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ದೇಶದ ವಿವಿಧ ಮೂಲೆಗಳಲ್ಲಿ ಭಕ್ತರ ಸಂಚಾರಕ್ಕೆ 200 ವಿಶೇಷ ಆಸ್ಥಾ ರೈಲು ಬಿಡಲಾಗಿದೆ. ಈ ಪೈಕಿ ಉತ್ತರ ಕರ್ನಾಟಕದ ಹುಬ್ಬಳ್ಳಿಯ ಶ್ರಿ ಸಿದ್ಧಾರೂಢ ರೈಲು ನಿಲ್ದಾಣದಿಂದ ಭಾನುವಾರದಿಂದ ಹೊರಟಿದೆ.
ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ
ರಾಮಲಲ್ಲಾನ ದರ್ಶನಕ್ಕೆ ಹುಬ್ಬಳ್ಳಿ-ಧಾರವಾಡ ಅವಳಿನಗರ ಸೇರಿದಂತೆ ಸಾವಿರಾರು ಭಕ್ತರು ಇಂದು ಆಸ್ಥಾ ವಿಶೇಷ ರೈಲು ಮೂಲಕ ಅಯೋಧ್ಯೆಗೆ ಪ್ರಯಾಣ ಬೆಳೆಸಿದರು. ಅಯೋಧ್ಯಾ ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಬಳಿಕ ಭಕ್ತರಿಗೆ ದೇಗುಲ ದರ್ಶನಕ್ಕೆ ಅವಕಾಶ ಸಿಕ್ಕಿದೆ.
ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡದವರು, ಇದೀಗ ಕುಟುಂಬ, ಗ್ರಾಮ ಸಮೇತರಾಗಿ ತೆರಳುತ್ತಿರುವ ಕಂಡು ಬಂದಿದೆ. ಇವರಿಗೆ ಅನುಕೂಲವಾಗಲೆಂದು ನೈರುತ್ಯ ರೈಲ್ವೆ ಇಲಾಖೆ ಸಹ ಪ್ರಕಟಿಸಿದೆ.
ಉ.ಕ ಭಾಗದ 13 ಜಿಲ್ಲೆಗಳ ಭಕ್ತರ ಪ್ರಯಾಣ
ಭಾನುವಾರ ವಾಣಿಜ್ಯ ನಗರಿ ಹುಬ್ಬಳ್ಳಿಯಿಂದ ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳ 1,350 ಜನರು ತೆರಳುತಿದ್ದಾರೆ. ಇಷ್ಟು ಜನರಿಗೆ ಊಟ ವ್ಯವಸ್ಥೆ ತೊಂದರೆ ಆಗದಂತೆ ಮಾಡಲಾಗಿದೆ. ವಿಶ್ವ ಹಿಂದು ಪರಿಷತ್ ಎಲ್ಲ ರೀತಿಯ ಉಸ್ತುವಾರಿ ವಹಿಸಿಕೊಂಡಿದ್ದು ಒಟ್ಟು ಮೂರು ಸಾವಿರ ಜನರು ಕರ್ನಾಟಕದಿಂದ ಹೊರಟಿದ್ದಾರೆ ಎಂಬ ಮಾಹಿತಿ ಇದೆ.
ಹುಬ್ಬಳ್ಳಿಯ ಸಿದ್ಧಾರೂಢ ರೈಲು ನಿಲ್ದಾಣದಿಂದ ಇಡೀ ರೈಲು ತುಂಬ ಶ್ರೀರಾಮ ಭಕ್ತರು ತುಂಬಿಕೊಂಡಿದ್ದು ಕಂಡು ಬಂತು. ಕೈಯಲ್ಲಿ ರಾಮನ ಭಾವಚಿತ್ರದ ಬ್ಯಾನರ್ ಹಿಡಿದು ಜೈ ಶ್ರಿರಾಮ ಎನ್ನುತ್ತಲೇ ನಮಸ್ಕರಿಸಿ ಹುಬ್ಬಳ್ಳಿ-ಅಯೋಧ್ಯೆಗೆ ತೆರಳುವ ಆಸ್ಥಾ ವಿಶೇಷ ರೈಲು ಏರಿದರು.
ಭಕ್ತರ ಜತೆ ಕರಸೇವಕರು: ಖುಷಿ
ಪ್ರಯಾಣ ಮಾಡಿರುವ ಭಕ್ತರಲ್ಲಿ ಕೇಲವರು ಕರಸೇವಕರು ಇದ್ದಾರೆ. ಅವರು ಹುಬ್ಬಳ್ಳಿ ರೈಲು ಬಿಡುವ ಮುನ್ನ ಖುಷಿ ಹಂಚಿಕೊಂಡಿದ್ದಾರೆ. ರಾಮ ಭಕ್ತರಿಗೆ ತೊಂದರೆ ಆಗದಂತೆ ಊಟ ಉಪಚಾರವನ್ನು ಅತ್ಯಂತ ಸುವ್ಯವಸ್ಥಿತವಾಗಿ ಮಾಡಲಾಗಿದೆ. ಸುಗಮ ಪ್ರಯಾಣಕ್ಕೆ ಬೇಕಾದ ಎಲ್ಲವನ್ನು ಮಾಡಲಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ಉತ್ತರ ಪ್ರಾಂತ ಪ್ರಮುಖ ಗೋವರ್ಧನ ಮಾಹಿತಿ ಹಂಚಿಕೊಂಡು.
ಇವರೊಂದಿಗೆ ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಶ್ರಿರಾಮ ದರ್ಶನ ಕಾಣುವ ತವಕ್ಕದಲ್ಲಿರುವ ಅನೇಕ ರಾಮ ಭಕ್ತರು ಪ್ರಯಾಣದ, ದೇವರ ದರ್ಶನದ ಸಂತಸ ಹಂಚಿಕೊಂಡರು.