2023-24ನೇ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಸ್ಕೀಮ್ ಅಡಿ ವಿದ್ಯಾರ್ಥಿಗಳಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳ ವತಿಯಿಂದ ನೀಡಲಾಗುತ್ತಿರುವ ವಿವಿಧ ತಾಂತ್ರಿಕ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
2023-24ನೇ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳ ವತಿಯಿಂದ ನೀಡಲಾಗುತ್ತಿರುವ ವಿವಿಧ ತಾಂತ್ರಿಕ ಕೌಶಲ್ಯ ತರಬೇತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ಕೊನೆ ದಿನಾಂಕ : 01-03-2024
ಅರ್ಹತೆಗಳು
- ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದವರಾಗಿರಬೇಕು.
- ತರಬೇತಿಗನುಸಾರ ನಿಗಧಿತ ವಿದ್ಯಾರ್ಹತೆ ಹೊಂದಿರಬೇಕು.
- ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ.8.00 ಲಕ್ಷಗಳು ಮೀರಿರಬಾರದು.
- ತರಬೇತಿ ಕಾಲಾವಧಿಯು 60 ದಿನಗಳಾಗಿರುತ್ತದೆ.
- ಅಭ್ಯರ್ಥಿಗೆ ಯಾವುದೇ ತರಹದ ಸ್ಟೈಫಂಡ್ ನೀಡಲಾಗುವುದಿಲ್ಲ.
- ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ ತರಬೇತಿ ನೀಡಲಾಗುವುದು.
ಇತರೆ ಸೂಚನೆಗಳು
ಅರ್ಜಿದಾರರು ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್‌ಸೈಟ್ ವಿಳಾಸ https://dom.karnataka.gov.in ಗೆ ಭೇಟಿ ನೀಡುವ ಮೂಲಕ '2023-24 ನೇ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಜಿಟಿಟಿಸಿ ಮೂಲಕ ನೀಡಲಾಗುವ ವಿವಿಧ ತಾಂತ್ರಿಕ ಕೌಶಲ್ಯ ತರಬೇತಿಗೆ ಅರ್ಜಿ' ಎಂದಿರುವ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಈ ತರಬೇತಿ ನೀಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಆಯ್ಕೆ ಆದವರಿಗೆ ಮುಂದಿನ ಕ್ರಮಗಳ ಕುರಿತು ಇ-ಮೇಲ್, ಎಸ್‌ಎಂಎಸ್, ಅಂಚೆ ಮೂಲಕ ಸಂವಹನ ಕಾರ್ಯ ನಡೆಸಲಾಗುತ್ತದೆ. ಉಚಿತ ಊಟ, ವಸತಿ ಸೌಲಭ್ಯ ನೀಡಲಿದ್ದು, ಆಸಕ್ತರು ತಪ್ಪದೇ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ತರಬೇತಿಯಲ್ಲಿ ತಾಂತ್ರಿಕ ಕೌಶಲಗಳಾದ ಕಂಪ್ಯೂಟರ್ ತರಬೇತಿ, ವಿವಿಧ ಸಾಫ್ಟ್‌ವೇರ್ ಅಭಿವೃದ್ಧಿ, ಬಳಕೆ ಕುರಿತು ಟ್ರೈನಿಂಗ್ ನೀಡಲಾಗುತ್ತದೆ.