Laptop: ಸಾಮಾನ್ಯ ಜನರೂ ಈ ಲ್ಯಾಪ್‌ಟಾಪ್‌ ಖರೀದಿ ಮಾಡಬಹುದು! 45% ರಿಯಾಯಿತಿ

ಲ್ಯಾಪ್‌ಟಾಪ್‌ಗಳು (Laptop) ಇಂದು ವಿವಿಧ ರೀತಿಯಲ್ಲಿ ಬಳಕೆ ಆಗುತ್ತಿವೆ. ಅದರಲ್ಲೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಡಿವೈಸ್ ಆಗಿದ್ದು, ಈ ಮೂಲಕ ಉತ್ತಮ ಶಿಕ್ಷಣ ಪಡೆದುಕೊಳ್ಳಲು ಕೊಡುಗೆ ನೀಡುತ್ತವೆ. ಈ ಕಾರಣಕ್ಕೆ ಪ್ರಮುಖ ಕಂಪೆನಿಗಳು ಕೈಗೆಟಕುವ ದರದಲ್ಲಿ ಭಿನ್ನ ಫೀಚರ್ಸ್‌ ಆಯ್ಕೆಯ ಲ್ಯಾಪ್‌ಟಾಪ್‌ಗಳನ್ನು ಅನಾವರಣ ಮಾಡಿವೆ



ಹೌದು, ಲ್ಯಾಪ್‌ಟಾಪ್‌ಗಳು ಇಂದು ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾಗಿವೆ. ಅದರಲ್ಲೂ ಭಾರತದಲ್ಲಿನ ಕೆಲವು ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಣೆ ಮಾಡುವುದನ್ನು ಈ ವೇಳೆ ನೆನಪಿಸಿಕೊಳ್ಳಬಹುದು. ಇದಕ್ಕೆ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇವು ದೊಡ್ಡ ಕೊಡುಗೆ ನೀಡುತ್ತವೆ. ಆದರೆ ಎಲ್ಲರೂ ಸಹ ಉಚಿತ ಲ್ಯಾಪ್‌ಟಾಪ್‌ ಪಡೆಯಲು ಅಥವಾ ದುಬಾರಿ ಬೆಲೆಯ ಲ್ಯಾಪ್‌ಟಾಪ್‌ ಖರೀದಿ ಮಾಡಲು ಸಾಧ್ಯವಾಗುದಿಲ್ಲ. ಅಂತಹವರು ಬಜೆಟ್‌ ಬೆಲೆಯಲ್ಲಿ ಲಭ್ಯ ಇರುವ ಈ ಲ್ಯಾಪ್‌ಟಾಪ್‌ ಖರೀದಿ ಮಾಡುವ ಮೂಲಕ ವಿವಿಧ ಕೆಲಸಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಬಜೆಟ್‌ ಬೆಲೆಯಲ್ಲಿ ಯಾವ ಲ್ಯಾಪ್‌ಟಾಪ್‌ ಲಭ್ಯ ಇದೆ? ಇದರ ಫೀಚರ್ಸ್‌ ಏನು? ಇದಕ್ಕೆ ಇರುವ ಆಫರ್ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಅಲ್ಟಿಮಸ್ ಎಲೈಟ್ ಲ್ಯಾಪ್‌ಟಾಪ್‌: 

ಅಲ್ಟಿಮಸ್ ಎಲೈಟ್ ಇಂಟೆಲ್ ಕೋರ್ i5 10ನೇ ಜನ್ 1035G4 (Ultimus Elite Intel Core i5 10th Gen 1035G4) ಲ್ಯಾಪ್‌ಟಾಪ್‌ ಸ್ಮಾರ್ಟ್‌ಫೋನ್‌ ಬೆಲೆಗಿಂತ ಕಡಿಮೆ ಬೆಲೆಗೆ ಲಭ್ಯ ಆಗುತ್ತಿದೆ. ಈ ಲ್ಯಾಪ್‌ಟಾಪ್‌ 14.1 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 1920 x 1080 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದಿದೆ. ಈ ಮೂಲಕ ಉತ್ತಮ ಡಿಸ್‌ಪ್ಲೇ ಅನುಭವವನ್ನು ಪಡೆಯಬಹುದಾಗಿದೆ.

ಅಲ್ಟಿಮಸ್ ಎಲೈಟ್ ಲ್ಯಾಪ್‌ಟಾಪ್‌ ಪ್ರೊಸೆಸರ್‌: 

ಈ ಲ್ಯಾಪ್‌ಟಾಪ್ 10ನೇ ಜನ್ ಇಂಟೆಲ್ ಕೋರ್ i5 1035G4 ಪ್ರೊಸೆಸರ್‌ ಬಲ ಪಡೆದಿದ್ದು, ಇದು 4 x 1.1 GHz (3.7 GHz ವರೆಗಿನ ಟರ್ಬೊ ವೇಗ) ಕೋರ್‌ಗಳನ್ನು ಹೊಂದಿದೆ. ಇದರೊಂದಿಗೆ 8 GB DDR4 RAM ಹಾಗೂ 512 GB SSD ಇಂಟರ್‌ ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದ್ದು, ಇಂಟೆಲ್ ಇಂಟಿಗ್ರೇಟೆಡ್ ಐರಿಸ್ ಗ್ರಾಫಿಕ್ಸ್ ಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಮೂಲಕ ಉತ್ತಮ ವಿಡಿಯೋ ವೀಕ್ಷಣೆ, ಅತ್ಯುತ್ತಮ ಗೇಮಿಂಗ್‌ ಅನುಭವ ಹಾಗೂ ಸುಲಭ ಎಡಿಟಿಂಗ್‌ ಸೌಲಭ್ಯವನ್ನು ಪಡೆಯಬಹುದಾಗಿದೆ.

ಇದರ ಜೊತೆಗೆ ವೇಗದ ಡೇಟಾ ವರ್ಗಾವಣೆಗಾಗಿ 2 ಯುಎಸ್‌ಬಿ ಪೋರ್ಟ್‌ಗಳು, ತಡೆರಹಿತ ನೆಟ್‌ವರ್ಕಿಂಗ್‌ಗಾಗಿ RJ45 LAN ಪೋರ್ಟ್ ಮತ್ತು ಬಹುಮುಖ ವಿಸ್ತರಣೆಗಾಗಿ ಮಿನಿ ಹೆಚ್‌ಡಿಎಮ್‌ಐ ಮತ್ತು ಮೈಕ್ರೋ-ಎಸ್‌ಡಿ ಕಾರ್ಡ್‌ ಸ್ಲಾಟ್‌ಗಳನ್ನು ಹೊಂದಿದೆ. ಹಾಗೆಯೇ 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ನಿಮ್ಮ ಆಡಿಯೊ ಅನುಭವವನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ 5.0 ಬ್ಲೂಟೂತ್ ಆವೃತ್ತಿ, ಡ್ಯುಯಲ್ ಬ್ಯಾಂಡ್ ವೈ-ಫೈ ಉತ್ತಮ ಕನೆಕ್ಟಿವಿಟಿ ಅನುಭವ ನೀಡಲಿದೆ.

ಇನ್‌ಬಿಲ್ಟ್‌ ಮೈಕ್ರೋಫೋನ್‌ ಆಯ್ಕೆ ಪಡೆದಿದ್ದು, ಈ ಮೂಲಕ ಯಾವುದೇ ಮೀಟಿಂಗ್‌ ಅಥವಾ ಇತರೆ ಕೆಲಸಗಳಲ್ಲಿ ಭಾಗಿಯಾಗಬಹುದಾಗಿದೆ. ಜೊತೆಗೆ ಉತ್ತಮ ಬ್ಯಾಟರಿ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಹತ್ತು ಗಂಟೆಗಳ ಬ್ಯಾಕಪ್‌ ಲಭ್ಯವಾಗಲಿದೆ. ಮ್ಯಾಟ್ ಬ್ಲ್ಯಾಕ್‌ ಬಣ್ಣದ ಆಯ್ಕೆಯಲ್ಲಿ ಲಭ್ಯ ಇರುವ ಈ ಲ್ಯಾಪ್‌ಟಾಪ್‌ ಕೇವಲ 1.3 ಕೆಜಿ ತೂಕ ಹೊಂದಿದ್ದು, ಸುಲಭವಾಗಿ ಬೇಕೆಂದಲ್ಲಿಗೆ ತೆಗೆದುಕೊಂಡು ಹೋಗಬಹುದಾಗಿದೆ.

ಅಲ್ಟಿಮಸ್ ಎಲೈಟ್ ಲ್ಯಾಪ್‌ಟಾಪ್‌ ಬೆಲೆ ಹಾಗೂ ಆಫರ್ ವಿವರ: ಈ ವಿಶೇಷ ಲ್ಯಾಪ್‌ಟಾಪ್ 45,990 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವೀಗ ಇದನ್ನು ಮೊದಲೇ ತಿಳಿಸಿದಂತೆ ಮೊಬೈಲ್‌ ಫೋನ್‌ ಬೆಲೆಗೆ ಖರೀದಿ ಮಾಡಬಹುದು. ಅಂದರೆ ಇದರ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ (Flipkart) 24,999 ರೂ.ಗಳಾಗಿದೆ. ಅದಾಗ್ಯೂ ಕೆಲವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಲ್ಯಾಪ್‌ಟಾಪ್‌ ಅನ್ನು ಖರೀದಿ ಮಾಡಬಹುದಾಗಿದೆ.

ಲಭ್ಯವಿರುವ ಕೊಡುಗೆಗಳ ಬಗ್ಗೆ ಹೇಳುವುದಾದರೆ ಈ ಲ್ಯಾಪ್‌ಟಾಪ್ ಅನ್ನು ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 5% ಕ್ಯಾಶ್‌ಬ್ಯಾಕ್, 1,548 ರೂ.ಗಳ ಡೆಬಿಟ್‌ ಕಾರ್ಡ್‌ ಇಎಮ್‌ಐ ಸೌಲಭ್ಯದೊಂದಿಗೆ ಇತರೆ ಕ್ಯಾಶ್‌ಬ್ಯಾಕ್‌ ಸೌಲಭ್ಯ ಸಹ ಸಿಗಲಿದೆ. ಈ ಲ್ಯಾಪ್‌ಟಾಪ್‌ ಈ ಬೆಲೆಗೆ ತಕ್ಕ ಫೀಚರ್ಸ್‌ ಆಯ್ಕೆ ಪಡೆದಿದ್ದು, ಈ ಮೂಲಕ ನೀವು ಶೈಕ್ಷಣಿಕ ವಿಷಯಗಳು ಅಥವಾ ಸಣ್ಣ ಪ್ರಮಾಣದ ಔದ್ಯೋಗಿಕ ಕೆಲಸಗಳನ್ನು ಮಾಡಲಷ್ಟೇ ಸಾಧ್ಯವಾಗಿದೆ. ಬದಲಾಗಿ ಹೆಚ್ಚಿನ ಕೆಲಸಗಳನ್ನು ಮಾಡಲು ಅಥವಾ ನಿತ್ಯವೂ ದೀರ್ಘಕಾಲ ಬಳಕೆ ಮಾಡಬೇಕು ಎಂದರೆ ಬೇರೆ ಲ್ಯಾಪ್‌ಕಡೆ ನೀವು ಕಣ್ಣಾಯಿಸಬಹುದು.

Previous Post Next Post