ಭಾರತೀಯ ವಾಯುಪಡೆಯ ಅಗ್ನಿವೀರರ ನೇಮಕ: ಪಿಯುಸಿ, ಐಟಿಐ ಪಾಸಾದವರು ಅರ್ಜಿ ಹಾಕಿ

Agniveer Jobs 2024: ಇಂಡಿಯನ್‌ ಏರ್‌ಫೋರ್ಸ್‌ ಅಗ್ನಿಪಥ ಯೋಜನೆಯ ಅಗ್ನಿವೀರ್ ವಾಯು ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಜನವರಿ 17 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ರಕ್ಷಣಾ ಇಲಾಖೆಯ ಈ ಹುದ್ದೆಗಳಿಗೆ ಆಸಕ್ತರು ಅರ್ಜಿ ಸಲ್ಲಿಸಿ.



ಭಾರತೀಯ ವಾಯುಪಡೆಯು ಅಗ್ನಿಪಥ ಯೋಜನೆಯಡಿಯಲ್ಲಿ ನೇಮಕ ಮಾಡಿಕೊಳ್ಳುವ ಅಗ್ನಿವೀರ್ ವಾಯು ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ದೇಶದ ಅವಿವಾಹಿತ ಯುವಕ-ಯುವತಿಯರು ನಿಗದಿತ ಅರ್ಹತೆಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಕೇವಲ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಜನವರಿ 17 ರಂದು ಅರ್ಜಿಗೆ ಆನ್‌ಲೈನ್‌ ಲಿಂಕ್‌ ಆಕ್ಟಿವೇಟ್‌ ಮಾಡಲಾಗುತ್ತದೆ. ಮಾರ್ಚ್‌ ತಿಂಗಳಲ್ಲಿ ನೇಮಕಾತಿ ಪರೀಕ್ಷೆಗಳು ಆರಂಭವಾಗಲಿವೆ. ಆಸಕ್ತರು ಇತರೆ ಹೆಚ್ಚಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ: ಭಾರತೀಯ ವಾಯುಪಡೆ

ಹುದ್ದೆ ಹೆಸರು : ಅಗ್ನಿವೀರ್ ವಾಯು

ಹುದ್ದೆಗಳ ಸಂಖ್ಯೆ : ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕಾರ ಆರಂಭಿಕ ದಿನಾಂಕ: 17-01-2024

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 06-02-2024 ರ ರಾತ್ರಿ 11-00 ಗಂಟೆವರೆಗೆ.

ನೇಮಕ ಪರೀಕ್ಷೆಗಳ ದಿನಾಂಕ : 2024 ರ ಮಾರ್ಚ್‌ 17 ರಿಂದ

ವಯಸ್ಸಿನ ಅರ್ಹತೆ

ಅರ್ಜಿ ಸಲ್ಲಿಸಲು ಬಯಸುವ ಅವಿವಾಹಿತ ಪುರುಷ -ಮಹಿಳೆಯರು 02 ಜನವರಿ 2004 ಮತ್ತು 02 ಜುಲೈ 2007 ರ ನಡುವೆ ಜನಿಸಿರಬೇಕು.

ವಿದ್ಯಾರ್ಹತೆ

- 12ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ, ಇಂಗ್ಲಿಷ್‌ ಓದಿದ್ದು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು. ಅಥವಾ

- 2 ವರ್ಷದ ವೃತ್ತಿಪರ ಕೋರ್ಸ್‌ಗಳನ್ನು ಓದಿರಬೇಕು. ಕನಿಷ್ಠ ಶೇ.50 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು.

- ವಿಜ್ಞಾನ ವಿಭಾಗ ಹೊರತುಪಡಿಸಿ ಇತರೆ ಯಾವುದೇ ಸ್ಟ್ರೀಮ್‌ನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದವರು ಕನಿಷ್ಠ ಶೇಕಡ. 50 ಅಂಕ ಪಡೆದಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

10ನೇ ತರಗತಿ ಅಂಕಪಟ್ಟಿ

12ನೇ ತರಗತಿ ವಿಜ್ಞಾನ ವಿಭಾಗ / ತತ್ಸಮಾನ ವಿದ್ಯಾರ್ಹತೆ ದಾಖಲೆ.

2 ವರ್ಷದ ವೃತ್ತಿಪರ ಕೋರ್ಸ್‌ ಪಾಸ್‌ ಮಾಡಿದ ಸರ್ಟಿಫಿಕೇಟ್‌.

ಪಾಸ್ಪೋರ್ಟ್‌ ಅಳತೆಯ ಭಾವಚಿತ್ರ

ಅಭ್ಯರ್ಥಿ ಸಹಿ ಸ್ಕ್ಯಾನ್‌ ಕಾಪಿ

ಅಭ್ಯರ್ಥಿ ಎಡಗೈ ಹೆಬ್ಬೆರಳು ಥಂಬ್ ಇಂಪ್ರೆಷನ್ ಸ್ಕ್ಯಾನ್ ಕಾಪಿ

ಪೋಷಕರ ಸಹಿ

ಅಪ್ಲಿಕೇಶನ್ ಶುಲ್ಕ ರೂ.250.

ಅರ್ಜಿ ಶುಲ್ಕವನ್ನು ಆನ್‌ಲೈನ್‌, ಡೆಬಿಟ್, ಕ್ರೆಡಿಟ್‌ ಕಾರ್ಡ್‌ ಬಳಸಿ ಪಾವತಿ ಮಾಡಬಹುದು.

ಆಯ್ಕೆ ಪ್ರಕ್ರಿಯೆ ವಿವರ

ಲಿಖಿತ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಆಯ್ಕೆ ಪರೀಕ್ಷೆಗಳು 2024ರ ಮಾರ್ಚ್‌ 17 ರಿಂದ ಆರಂಭವಾಗಲಿವೆ.

ವಾಯುಪಡೆ ಅಗ್ನಿವೀರರಿಗೆ ವೇತನ, ಭತ್ಯೆ ವಿವರ

ಮೊದಲನೇ ವರ್ಷ : ರೂ.30,000 ಜತೆಗೆ ಇತರೆ ಭತ್ಯೆ.

ಎರಡನೇ ವರ್ಷ : ರೂ.33,000 ಜತೆಗೆ ಇತರೆ ಭತ್ಯೆ.

ಮೂರನೇ ವರ್ಷ : ರೂ.36,500 ಜತೆಗೆ ಇತರೆ ಭತ್ಯೆ.

ನಾಲ್ಕನೇ ವರ್ಷ : ರೂ.40,000 ಜತೆಗೆ ಇತರೆ ಭತ್ಯೆ.

ಅಗ್ನಿವೀರ್ ಹುದ್ದೆಯಿಂದ ನಿವೃತ್ತಿ ಪಡೆದ ಸಂದರ್ಭದಲ್ಲಿ ಸೇವಾನಿಧಿ ಪ್ಯಾಕೇಜ್‌ - 10.04 ಲಕ್ಷ ರೂ ಅನ್ನು ಅಭ್ಯರ್ಥಿಗೆ ನೀಡಲಾಗುತ್ತದೆ.

ರಜೆಗಳ ಮಾಹಿತಿ: 

ವಾಯುಪಡೆಯ ಅಗ್ನಿವೀರ್ ಹುದ್ದೆಗೆ ಸೇರಿದ ಅಭ್ಯರ್ಥಿಗಳಿಗೆ ವಾರ್ಷಿಕ 30 ರಜೆಗಳು ಸಿಗುವ ಅವಕಾಶ ಇರುತ್ತದೆ. ಮೆಡಿಕಲ್ ರಜೆಗಳು ವೈದ್ಯರ ಸಲಹೆ ಮೇರೆಗೆ ನಿರ್ಧರಿತವಾಗುತ್ತವೆ.

ಅಗ್ನಿವೀರ್‌ವಾಯು ಹುದ್ದೆಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಸಿಗುವ ಸೌಲಭ್ಯಗಳು / ಭತ್ಯೆಗಳು

ರಿಸ್ಕ್‌ ಅಂಡ್ ಹಾರ್ಡ್‌ಶಿಪ್, ರೇಷನ್, ಡ್ರೆಸ್, ಪ್ರಯಾಣ ಭತ್ಯೆಗಳನ್ನು ನೀಡಲಾಗುತ್ತದೆ.

ರೂ.48 ಲಕ್ಷ ಮೊತ್ತದ ಜೀವ ವಿಮೆ ಇರುತ್ತದೆ.

ಅಗ್ನಿವೀರರಿಂದ 9 ಸಾವಿರ ರೂ ಮತ್ತು ಸರ್ಕಾರದ 9 ಸಾವಿರ ರೂ ಗಳ ವಂತಿಗೆಯಿಂದ ಪ್ರತಿ ತಿಂಗಳು 18 ಸಾವಿರ ರೂ.ಗಳ ಪಿಎಫ್‌ ಸೌಲಭ್ಯ ಇರಲಿದೆ.

ಸೇವಾ ಸಮಯದಲ್ಲಿ ಜೀವಹಾನಿಯಾದರೆ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಜತೆಗೆ ಉಳಿದ ಸೇವಾ ಅವಧಿಯ ಸಂಬಳ ಪ್ರಾಪ್ತವಾಗಲಿದೆ. - ಒಂದು ವೇಳೆ ಸೇವೆ ಸಮಯದಲ್ಲಿ ಅಂಗವೈಕಲ್ಯವಾದರೆ ಅದರ ಗಂಭೀರತೆ ಆಧಾರದಲ್ಲಿ ಪರಿಹಾರ ಸಿಗಲಿದೆ. ಸಾಮಾನ್ಯವಾಗಿ ಇದು 44 ಲಕ್ಷ ರೂಪಾಯಿವರೆಗೆ ಇರಲಿದೆ. ಜತೆಗೆ ಸೇವೆಯ ಉಳಿದ ಭಾಗದ ಸಂಬಳ ದೊರೆಯಲಿದೆ.

ಅರ್ಜಿ ಸಲ್ಲಿಸಲು ಡೈರೆಕ್ಟ್‌ ಲಿಂಕ್‌ಗಾಗಿ ಕ್ಲಿಕ್ ಮಾಡಿ

IAF Agniveervayu Jobs 2024 Notification


Previous Post Next Post