ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ 421 ಹುದ್ದೆ ಖಾಲಿ: ಐಟಿಐ, ಡಿಪ್ಲೊಮ, ಪಿಯು ಪಾಸಾದವರು ಅರ್ಜಿ ಹಾಕಿ

ಆಯಿಲ್ ಇಂಡಿಯಾ ಕಾರ್ಪೋರೇಷನ್‌ ಲಿಮಿಟೆಡ್‌ ವರ್ಕ್‌ ಪರ್ಸನ್‌ ಹುದ್ದೆಗಳ ಭರ್ತಿಗಾಗಿ ಡಿಪ್ಲೊಮ, ಐಟಿಐ, ದ್ವಿತೀಯ ಪಿಯುಸಿ ಪಾಸಾದವರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಗೆ ಜನವರಿ 30 ರವರೆಗೆ ಅವಕಾಶ ನೀಡಿದೆ.



ಆಯಿಲ್ ಇಂಡಿಯಾ ಲಿಮಿಟೆಡ್ ತನ್ನ ಘಟಕದಲ್ಲಿ ಖಾಲಿ ಇರುವ 421 ವರ್ಕ್‌ ಪರ್ಸನ್‌ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ವಿದ್ಯಾರ್ಹತೆ, ವಯಸ್ಸಿನ ಅರ್ಹತೆ, ಪ್ರಮುಖ ದಿನಾಂಕಗಳು, ವೇತನ ವಿವರ, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

  • ನೇಮಕಾತಿ ಸಂಸ್ಥೆ: ಆಯಿಲ್ ಇಂಡಿಯಾ ಲಿಮಿಟೆಡ್‌
  • ಹುದ್ದೆ ಹೆಸರು : ವರ್ಕ್‌ ಪರ್ಸನ್
  • ಹುದ್ದೆಗಳ ಸಂಖ್ಯೆ : 421
  • ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 30-12-2023
  • ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-01-2024 ರ ರಾತ್ರಿ 11-59 ರವರೆಗೆ.
  • ವೇತನ ಶ್ರೇಣಿ : 20,000-35000.

ಆಯ್ಕೆ ವಿಧಾನ

ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಒಟ್ಟು 100 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಹುದ್ದೆಗೆ ಸಂಬಂಧಿತ ವಿದ್ಯಾರ್ಹತೆ ಮತ್ತು ಟೆಕ್ನಿಕಲ್ ಅರಿವಿನ ಬಗ್ಗೆ 60 ಅಂಕಗಳಿಗೆ, ರೀಸನಿಂಗ್ ಅರಿಥ್ಮೆಟಿಕ್, ಮೆಂಟಲ್ ಎಬಿಲಿಟಿ ಕುರಿತು 20 ಅಂಕಗಳಿಗೆ, ಇಂಗ್ಲಿಷ್ ಭಾಷೆ ಮತ್ತು ಸಾಮಾನ್ಯ ಜ್ಞಾನ ಕುರಿತು 20 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಶಾರ್ಟ್‌ ಲಿಸ್ಟ್‌ ಆದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ನಂತರ ಅಂತಿಮವಾಗಿ ಮೆಡಿಕಲ್ ಟೆಸ್ಟ್‌ ನಡೆಸಿ ಅಭ್ಯರ್ಥಿಗಳ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ವಿದ್ಯಾರ್ಹತೆ : 

ವಿವಿಧ ಟ್ರೇಡ್‌ಗಳು / ಬ್ರ್ಯಾಂಚ್‌ಗಳಲ್ಲಿ ಐಟಿಐ ಮತ್ತು ಡಿಪ್ಲೊಮ ಪಾಸಾದವರು, ಗ್ರೇಡ್‌-5 ಹುದ್ದೆಗೆ ಪದವಿ ಅರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

ವಯಸ್ಸಿನ ಅರ್ಹತೆ

  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ಮೀರಿರಬಾರದು.
  • ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ ಮೀರಿರಬಾರದು.
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 36 ವರ್ಷ ವಯಸ್ಸು ಮೀರಿರಬಾರದು.

ಅಪ್ಲಿಕೇಶನ್‌ ಶುಲ್ಕ ವಿವರ

  • ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.200.
  • ಎಸ್‌ಸಿ / ಎಸ್‌ಟಿ / EWS/ Pwd / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
  • ಅಪ್ಲಿಕೇಶನ್‌ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿ ಮಾಡಬಹುದು.

ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಯಾವ ಗ್ರೇಡ್‌ನ ಎಷ್ಟು ಹುದ್ದೆಗಳು ಖಾಲಿ ಇವೆ, ಯಾವ್ಯಾವ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತಿದೆ, ವಿದ್ಯಾರ್ಹತೆ ಏನಿರಬೇಕು ಎಂದು ತಿಳಿಯಲು ಕೆಳಗಿನ ನೋಟಿಫಿಕೇಶನ್‌ ಲಿಂಕ್ ಕ್ಲಿಕ್ ಮಾಡಿ ಓದಿರಿ.

OIL India Limited Recruitment 2024 Notification

Apply Online

Previous Post Next Post