ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲಿ ಬಜೆಟ್ ಬೆಲೆಯಿಂದ ದುಬಾರಿ ಬೆಲೆಯ ಫೋನ್‌ಗಳು ಲಭ್ಯ ಇವೆ. ಆದರೆ ಎಲ್ಲರೂ ಸಹ ದುಬಾರಿ ಬೆಲೆಯ ಫೋನ್‌ಗಳನ್ನು ಖರೀದಿ ಮಾಡಲು ಸಾಧ್ಯ ಇಲ್ಲ. ಅದರಲ್ಲೂ ಭಾರತದಲ್ಲಿ ಬಜೆಟ್ ಬೆಲೆಯ ಫೋನ್‌ಗಳಿಗೆ ಭರ್ಜರಿ ಬೇಡಿಕೆ ಇದೆ. ಅದರಂತೆ ಇಲ್ಲೊಂದು ಬಜೆಟ್ ಬೆಲೆಯ ಫೋನ್‌ಗೆ ಇನ್ನಷ್ಟು ಬೆಲೆ ಕಡಿಮೆ ಮಾಡಲಾಗಿದೆ. ಈ ಫೋನ್ ಸಖತ್ ಫೀಚರ್ಸ್ ಆಯ್ಕೆ ಪಡೆದಿದೆ.
ಹೌದು, ಹಳ್ಳಿಗಾಡಿನ ಜನರಿಗೆ ಅಥವಾ ಸಾಮಾನ್ಯ ದಿನನಿತ್ಯದ ಬಳಕೆಗೆ ಬಜೆಟ್ ಬೆಲೆಯ ಫೋನ್‌ಗಳು (Budget priced phones) ಉತ್ತಮವಾಗಿರಲಿವೆ. ಈ ವಿಭಾಗದ ಫೋನ್‌ಗಳ ಲಿಸ್ಟ್‌ನಲ್ಲಿ ಐ ಕಾಲ್ Z19 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್ (i Kall Z19 Pro Ultra Smartphone) ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ನ ಬೆಲೆಗೂ ಇದರಲ್ಲಿನ ಫೀಚರ್ಸ್‌ಗೂ ಬಹಳ ಭಿನ್ನತೆ ಇದ್ದು, ಈ ಮೂಲಕ ಖರೀದಿದಾರರಿಗೆ ವಿವಿಧ ರೀತಿಯಲ್ಲಿ ಅನುಕೂಲ ಆಗಲಿದೆ. ಹಾಗಿದ್ರೆ, ಈ ಫೋನ್‌ನಲ್ಲಿ ಇರುವ ಅಂತಹ ಫೀಚರ್ಸ್ ಏನು?, ಆಫರ್ ಬೆಲೆ ಎಷ್ಟು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಐ ಕಾಲ್ Z19 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್ ಆಫರ್ ವಿವರ:
ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 10,999 ರೂ.ಗಳಾಗಿದೆ. ಆದರೆ ನೀವು ಈ ವಿಶೇಷ ಸೇಲ್‌ನಲ್ಲಿ 7,989 ರೂ.ಗಳಿಗೆ ಖರೀದಿ ಮಾಡಬಹುದು. ಈ ಮೂಲಕ 1010 ರೂ.ಗಳನ್ನು ಉಳಿಸಬಹುದಾಗಿದೆ. ಈ ಆಫರ್ ಅನ್ನು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ (Flipkart) ಘೋಷಣೆ ಮಾಡಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್ ಆಫರ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಖರೀದಿ ಮಾಡಬಹುದಾಗಿದೆ.
ಐ ಕಾಲ್ Z19 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿವರ:
ಈ ಸ್ಮಾರ್ಟ್‌ಫೋನ್ 6.5 ಇಂಚಿನ, ಐಪಿಎಸ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 269 ಪಿಪಿಐ ಆಯ್ಕೆಯೊಂದಿಗೆ ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ ಪಡೆದಿದೆ. ಈ ಮೂಲಕ ಅತ್ಯುತ್ತಮ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ.
ಐ ಕಾಲ್ Z19 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ:
ಈ ಫೋನ್ ಮೀಡಿಯಾಟೆಕ್ ಹೆಕ್ಸಾ ಕೋರ್ ಪ್ರೊಸೆಸರ್ ಬಲ ಪಡೆದಿದ್ದು, 6 GB RAM ಹಾಗೂ 128 GB ಇಂಟರ್ ಸ್ಟೋರೇಜ್ ಆಯ್ಕೆಯೊಂದಿಗೆ ಪ್ಯಾಕ್ ಆಗಿದೆ. ಆದರೂ ಸಹ ನೀವು ಇನ್ನೂ ಹೆಚ್ಚಿನ ಸ್ಟೋರೇಜ್ ಬೇಕು ಎಂದುಕೊಂಡರೆ ಎಸ್‌ಡಿ ಕಾರ್ಡ್ ಬಳಕೆ ಮಾಡಿಕೊಳ್ಳುವ ಮೂಲಕ 512 GB ವರೆಗೆ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
ಐ ಕಾಲ್ Z19 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ:
ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಅಂದರೆ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಸೆನ್ಸರ್ ಮೂಲಕ 720p ಹೆಚ್‌ಡಿ ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ಪಡೆದಿದೆ.
ಐ ಕಾಲ್ Z19 ಪ್ರೊ ಅಲ್ಟ್ರಾ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ:
ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಅತ್ಯುತ್ತಮ ಬ್ಯಾಕಪ್ ಪಡೆಯಬಹುದಾಗಿದೆ. ಉಳಿದಂತೆ ಈ ಫೋನ್ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್, 4G, VoLTE, ಯುಎಸ್‌ವಿ ಟೈಪ್-ಸಿ, ವೈ -ಫೈ ಆವೃತ್ತಿ 802.11a/b/g/n/ac ಸೇರಿದಂತೆ ಅನೇಕ ಕನೆಕ್ಟಿವಿಟಿ ಬೆಂಬಲ ಪಡೆದಿದೆ. ಒಟ್ಟಾರೆ ಈ ಫೋನ್ 300 ಗ್ರಾಂ ತೂಕ ಹೊಂದಿದೆ.
