ದಾಂಡೇಲಿಗೆ ಒಮ್ಮೆ ಆದ್ರೂ ಹೋಗಬೇಕು ಅನ್ಕೊಂಡಿದ್ದೀರಾ? ಮೊದಲು ಈ ಲೇಖನ ಓದಿ.

ದಾಂಡೇಲಿ ಸಾಹಸಿಗರ ಸ್ವರ್ಗವಾಗಿದೆ. ಇಲ್ಲಿ ರಿವರ್‌ ರಾಫ್ಟಿಂಗ್‌ ಮಾಡಲು ಯಾವ ಸಮಯ ಬೆಸ್ಟ್ ಎಂಬುದು ಬಹಳ ಮುಖ್ಯವಾಗಿದೆ.

ಕರ್ನಾಟಕದ ದಾಂಡೇಲಿ ಸಾಹಸಿಗರ ಸ್ವರ್ಗವಾಗಿದೆ. ದೇಶದ ನಾನಾ ಭಾಗಗಳಿಂದ ಜನರು ದಾಂಡೇಲಿಯ ಅಸಾಧಾರಣ ಸೊಬಗನ್ನು ನೋಡಲು ಬರುತ್ತಾರೆ. ಅಲ್ಲದೆ, ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳು, ಪ್ರಯತ್ನಿಸಬೇಕಾದ ಸಾಹಸ ಚಟುವಟಿಕೆಗಳಿವೆ. ಅದರಲ್ಲೂ ವೈಟ್ ರಿವರ್ ರಾಫ್ಟಿಂಗ್‌ ಇಲ್ಲಿ ತುಂಬಾನೇ ಫೇಮಸ್ ಆಗಿದೆ. ಹಾಗಾದರೆ ದಾಂಡೇಲಿಗೆ ಯಾವ ಸಮಯದಲ್ಲಿ ಹೋಗಬೇಕು?

ದಾಂಡೇಲಿಗೆ ಒಮ್ಮೆ ಆದ್ರೂ ಹೋಗಬೇಕು ಅನ್ಕೊಂಡಿದ್ದೀರಾ? ಮೊದಲು ಈ ಲೇಖನ ಓದಿ..!

ದಾಂಡೇಲಿ ಸಾಹಸಿಗರ ಸ್ವರ್ಗವಾಗಿದೆ. ಇಲ್ಲಿ ರಿವರ್‌ ರಾಫ್ಟಿಂಗ್‌ ಮಾಡಲು ಯಾವ ಸಮಯ ಬೆಸ್ಟ್ ಎಂಬುದು ಬಹಳ ಮುಖ್ಯವಾಗಿದೆ.

ಕರ್ನಾಟಕದ ದಾಂಡೇಲಿ ಸಾಹಸಿಗರ ಸ್ವರ್ಗವಾಗಿದೆ. ದೇಶದ ನಾನಾ ಭಾಗಗಳಿಂದ ಜನರು ದಾಂಡೇಲಿಯ ಅಸಾಧಾರಣ ಸೊಬಗನ್ನು ನೋಡಲು ಬರುತ್ತಾರೆ. ಅಲ್ಲದೆ, ಇಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳು, ಪ್ರಯತ್ನಿಸಬೇಕಾದ ಸಾಹಸ ಚಟುವಟಿಕೆಗಳಿವೆ. ಅದರಲ್ಲೂ ವೈಟ್ ರಿವರ್ ರಾಫ್ಟಿಂಗ್‌ ಇಲ್ಲಿ ತುಂಬಾನೇ ಫೇಮಸ್ ಆಗಿದೆ. ಹಾಗಾದರೆ ದಾಂಡೇಲಿಗೆ ಯಾವ ಸಮಯದಲ್ಲಿ ಹೋಗಬೇಕು?

ದಾಂಡೇಲಿ ಪ್ರವಾಸ ಮಾಡಲು ಪರ್ಫೇಕ್ಟ್‌ ಸಮಯ

ಅಕ್ಟೋಬರ್‌ನಿಂದ ಮೇ ವರೆಗೆ ದಾಂಡೇಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಕಾರಣ ಈ ಅವಧಿಯು ದಾಂಡೇಲಿಯ ಹವಾಮಾನ ಆಹ್ಲಾದಕರವಾಗಿರುತ್ತದೆ. ಅಲ್ಲದೆ, ಇದು ದೃಶ್ಯವೀಕ್ಷಣೆಗೆ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಸೂಕ್ತವಾಗಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಮಾನ್ಸೂನ್‌ ಆಗಿರುತ್ತದೆ.

ದಾಂಡೇಲಿ ಪ್ರವಾಸ ಮಾಡಲು ಎಷ್ಟು ದಿನ ಸಾಕು?

ದಾಂಡೇಲಿ ಮತ್ತು ಸುತ್ತಮುತ್ತಲಿನ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ಗರಿಷ್ಠ 3 ದಿನಗಳು ಸಾಕು. ದಾಂಡೇಲಿ ಪ್ರವಾಸವನ್ನು ಯೋಜಿಸಲು ಕನಿಷ್ಠ 2 ದಿನ ಉತ್ತಮವಾಗಿರುತ್ತದೆ. ಇದರಿಂದ ನೀವು ಅನೇಕ ಸಾಹಸ ಚಟುವಟಿಕೆಗಳನ್ನು ಮಾಡಬಹುದು ಮತ್ತು ದೃಶ್ಯವೀಕ್ಷಣೆಯನ್ನು ಆನಂದಿಸಬಹುದು.

ದಾಂಡೇಲಿ ರಿವರ್ ರಾಫ್ಟಿಂಗ್‌ಗೆ ಯಾವ ಸೀಸನ್ ಉತ್ತಮವಾಗಿದೆ?

ಯಲ್ಲಿ ರಿವರ್‌ ರಾಫ್ಟಿಂಗ್‌ ಮಾಡಬೇಕು ಅನ್ನುವವರು ಬೇಸಿಗೆಯ ತಿಂಗಳುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ನೀರಿನ ಮಟ್ಟವು ಕುಸಿಯುತ್ತದೆ ಮತ್ತು ಪ್ರದೇಶದ ಸುತ್ತಲಿನ ಅಣೆಕಟ್ಟುಗಳು ಮತ್ತು ಜಲಾಶಯಗಳು ಹೆಚ್ಚಿನ ನೀರನ್ನು ಬಿಡುವುದಿಲ್ಲ. ಆದಷ್ಟು ನವೆಂಬರ್‌ನಿಂದ ಮೇ ತಿಂಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳಿ.

ದಾಂಡೇಲಿಯಲ್ಲಿ ರಿವರ್ ರಾಫ್ಟಿಂಗ್ ಸುರಕ್ಷಿತವೇ?

ದಾಂಡೇಲಿಯಲ್ಲಿ ರಾಫ್ಟಿಂಗ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ದೂರದ ಊರುಗಳಿಂದ ಜನರು ಇಲ್ಲಿಗೆ ಬಂದು ಸಾಹಸದ ಅನುಭವ ಪಡೆಯುತ್ತಾರೆ.

ದಾಂಡೇಲಿಯಲ್ಲಿ ರಾಫ್ಟಿಂಗ್‌ನಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿಮ್ಮ ರಜೆಯನ್ನು ಸಾರ್ಥಕಗೊಳಿಸಿ ಮತ್ತು ಈ ಬೆರಗುಗೊಳಿಸುವ ಸ್ಥಳದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಿ.

Previous Post Next Post