ಕನ್ನಡ ಮಾತ್ರ ಗೊತ್ತಿರುವವರಿಗೆ ಈ ಕೆಲಸ; ಮನೆಯಲ್ಲಿಯೇ ಕುಳಿತು ಎರಡು ಗಂಟೆ ಕೆಲಸ ಮಾಡಿ 15,000 ಗಳಿಸಿ
ನೀವು ಕಲಿತು ಮನೆಯಲ್ಲಿಯೇ ಕುಳಿತಿದ್ದೀರಾ? ನೀವು ವಿದ್ಯಾರ್ಥಿಗಳಾಗಿದ್ದು ಪಾಕೆಟ್ ಮನಿ (pocket money) ಹಣ ಬೇಕಿದ್ಯಾ? ನೀವು ಗೃಹಿಣಿಯರಾಗಿದ್ದು ಮನೆಯಲ್ಲಿಯೇ ಇದ್ದೀರಾ? ದುಡಿಯುತ್ತಿರುವ ಹಣ ಸಾಕಾಗುತ್ತಿಲ್ಲವೇ? ಹಾಗಾದ್ರೆ ದಿನದಲ್ಲಿ ಎರಡು ಗಂಟೆ ಕೆಲಸ ಮಾಡಿ 15,000ಗಳನ್ನು ಪ್ರತಿ ತಿಂಗಳು ಹೆಚ್ಚುವರಿ ಆಗಿ ಗಳಿಸಬಹುದು.
ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಮ್ ಹೋಮ್ (work from home) ಅಥವಾ ಪಾರ್ಟ್ ಟೈಮ್ (part time job) ಕೆಲಸ ಎಂದು ಹೇಳಿಕೊಂಡು ಸಾಕಷ್ಟು ಜನ ಮೋಸ ಮಾಡುತ್ತಿದ್ದಾರೆ. ನಿಮ್ಮಿಂದಲೇ ಹಣ ಪಡೆದುಕೊಂಡು ನಿಮಗೆ ಮೋಸ ಮಾಡುತ್ತಿದ್ದಾರೆ.
ಆದರೆ ಈಗ ನಾವು ಈ ಲೇಖನದಲ್ಲಿ ಹೇಳುತ್ತಿರುವ ಕೆಲಸ 100% ನಷ್ಟು ಗ್ಯಾರಂಟಿ ಏಕೆಂದರೆ ಇದು ಸರ್ಕಾರದ ಕೆಲಸವಾಗಿದ್ದು ನೀವು ಅರ್ಹರಾಗಿದ್ರೆ ತಕ್ಷಣ ಅರ್ಜಿ ಸಲ್ಲಿಸಿ ಈ ಕೆಲಸವನ್ನು ಪಡೆದುಕೊಳ್ಳಿ. ಇದು ಪಾರ್ಟ್ ಟೈಮ್ ಕೆಲಸವಾಗಿದ್ದು, ನೀವು ದಿನದಲ್ಲಿ ಎರಡು ಗಂಟೆ work ಮಾಡಿದ್ರೆ ಪ್ರತಿ ತಿಂಗಳು 10 ರಿಂದ 15 ಸಾವಿರ ರೂಪಾಯಿಗಳ ವರೆಗೆ ಹಣ ಗಳಿಸಲು ಸಾಧ್ಯವಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISC) ಕೆಲಸ! (Indian institute of science)
ಬೆಂಗಳೂರಿನಲ್ಲಿ ಇರುವ ಐಐಎಸ್ಸಿ ಅಂದ್ರೆ ಭಾರತೀಯ ವಿಜ್ಞಾನ ಸಂಸ್ಥೆ ಕನ್ನಡ ಗೊತ್ತಿರುವವರಿಗೆ ವಿಶೇಷ ಕೆಲಸದ ಅವಕಾಶವನ್ನು ನೀಡುತ್ತಿದೆ. ಇಲ್ಲಿ ನೀವು ಕೆಲಸ ಮಾಡಿದ್ರೆ ನಿಮ್ಮ ಉದ್ಯೋಗದ ಜೊತೆಗೆ ಸೈಡ್ ಬೈ ಸೈಡ್ ಸ್ವಲ್ಪ ಹಣ ಗಳಿಸಲು ಸಹಾಯವಾಗುತ್ತದೆ.
IISC ಉದ್ಯೋಗದ ಬಗ್ಗೆ ಮಾಹಿತಿ!
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಎರಡು ರೀತಿಯ ಕೆಲಸ ಲಭ್ಯ ಇದೆ. Speech recording and transcription ಮತ್ತು Content writer. ಅರ್ಹರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಇದು ಕೃಷಿಗೆ ಸಂಬಂಧಿಸಿದ ಪ್ರಾಜೆಕ್ಟ್ ಆಗಿದ್ದು ಕೃಷಿಯಲ್ಲಿ ನಿಮಗೆ ಆಸಕ್ತಿ ಇದ್ದರೆ ಖಂಡಿತವಾಗಿಯೂ ಹೆಚ್ಚು ಅನುಕೂಲವಾಗಲಿದೆ.
ಉದ್ಯೋಗದ ಬಗ್ಗೆ ಮಾಹಿತಿ!
ದೇಶದ ಕೇವಲ ಒಂಬತ್ತು ಭಾಷೆಯಲ್ಲಿ ಮಾತ್ರ ಕೆಲಸ ಪಡೆದುಕೊಳ್ಳಲು ಅವಕಾಶವಿದ್ದು, ಇದರಲ್ಲಿ ಕನ್ನಡ ಕೂಡ ಒಂದು ಭಾಷೆಯಾಗಿದೆ. ಹಾಗಾಗಿ ನೀವು ಕೇವಲ ಕನ್ನಡ ಭಾಷೆ (Kannada language) ಬಂದರೂ ಕೂಡ ಈ ಕೆಲಸ ಆಯ್ಕೆ ಮಾಡಬಹುದು.
Speech recording and transcription ಇದು ಕೇವಲ 20 ನಿಮಿಷ ಕೆಲಸ ಮಾಡಿದರೆ 500 ರೂಪಾಯಿಗಳನ್ನು ಪಡೆದುಕೊಳ್ಳಬಹುದಾದ ಕೆಲಸವಾಗಿದ್ದು, ಇದಕ್ಕೆ ಅಪ್ಲೈ ಮಾಡಿದ ನಂತರ ನಿಮಗೆ ಒಂದು ಟಾಸ್ಕ್ ನೀಡಲಾಗುತ್ತದೆ.
ಸಂಸ್ಥೆ ನೀಡುವ ಟಾಪಿಕ್ ಬಗ್ಗೆ ನೀವು ನಿಮ್ಮ ಸ್ನೇಹಿತರ ಜೊತೆಗೆ ಸಂಭಾಷಣೆ ನಡೆಸಬೇಕು ಅದನ್ನು ರೆಕಾರ್ಡ್ ಮಾಡಬೇಕು. ಬಳಿಕ ನೀವು ಮಾತನಾಡಿದ್ದನ್ನು ಬರೆದು ಅವರಿಗೆ ಕಳುಹಿಸಬೇಕು. ಇದಕ್ಕೆ ನಿಮ್ಮ ಬಳಿ ಕಂಪ್ಯೂಟರ್ ಅಥವಾ ಮೊಬೈಲ್ ಇರಲೇಬೇಕು. 20 ನಿಮಿಷಗಳ ಸಂಭಾಷಣೆಗೆ 500 ರೂಪಾಯಿಗಳಂತೆ ತಿಂಗಳಿಗೆ 15,000ಗಳನ್ನು ಪಡೆಯಬಹುದು.
Content Writer ಉದ್ಯೋಗಕ್ಕೆ ನೀವು ಅವರು ನೀಡುವ ಟಾಪಿಕ್ ಗೆ ಕಂಟೆಂಟ್ ಬರೆಯಬೇಕಾಗುತ್ತದೆ. ಇದು ದಿನದಲ್ಲಿ ಎರಡರಿಂದ ಮೂರು ಗಂಟೆಗಳ ಕೆಲಸವಾಗಿದ್ದು ಪ್ರತಿ ತಿಂಗಳು 10,000 ಗಳನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು
*ಸಾಮಾನ್ಯ ಕಂಪ್ಯೂಟರ್ ಜ್ಞಾನ computer knowledge ಹೊಂದಿರಬೇಕು
*ಕನ್ನಡ ಮತ್ತು ಸ್ವಲ್ಪವಾದರೂ ಇಂಗ್ಲಿಷ್ ಗೊತ್ತಿರಬೇಕು
*ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಹೊಂದಿರಬೇಕು
*Google dosc ಬಳಕೆ ಗೊತ್ತಿರಬೇಕು
ಅರ್ಜಿ ಸಲ್ಲಿಸುವುದು ಹೇಗೆ?
https://www.respin.iisc.ac.in/openings ಈ ವೆಬ್ ಸೈಟ್ ಗೆ ಹೋಗಿ ನೀವು ಮೇಲೆ ತಿಳಿಸಲಾಗಿರುವ ಎರಡು ಕೆಲಸಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಟಾಸ್ಕ್ ಮಾಡಲು ಅವಕಾಶ ಪಡೆದುಕೊಳ್ಳಬಹುದು.
ನೀವು ಅವರು ನೀಡಿದ ಟಾಪಿಕ್ ಮೇಲೆ ಸರಿಯಾಗಿ ಟಾಸ್ಕ್ ಕಂಪ್ಲೀಟ್ ಮಾಡಿದರೆ ಈ ಕೆಲಸ ನಿಮ್ಮದಾಗುತ್ತದೆ. ಇದು ಪಾರ್ಟ್ ಟೈಮ್ ಕೆಲಸವಾಗಿದೆ ಹಾಗೂ ಪ್ರಾಜೆಕ್ಟ್ ಆಧಾರಿತ ಕೆಲಸವಾಗಿದೆ. ಇದು ಪರ್ಮನೆಂಟ್ ಕೆಲಸವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.
