ಸ್ಮಾರ್ಟ್‌ಫೋನ್‌ಗಳಲ್ಲಿ ಬಜೆಟ್ ಬೆಲೆಯ ಫೋನ್‌ಗಳನ್ನು ಖರೀದಿ ಮಾಡುವ ದೊಡ್ಡ ವರ್ಗ ಭಾರತದಲ್ಲಿ ಇದೆ. ಅದರಲ್ಲೂ ಫೀಚರ್ ಫೋನ್ ಬೆಲೆಗೆ ಸ್ಮಾರ್ಟ್‌ಫೋನ್ ಸಿಗುತ್ತದೆ ಎಂದರೆ ಯಾರೂ ತಾನೆ ಬಿಡುತ್ತಾರೆ ಹೇಳಿ. ಅದರಂತೆ ಐಟೆಲ್ ನ (Itel) ಈ ಬಜೆಟ್ ಬೆಲೆಯ ಫೋನ್ ಭಾರೀ ಆಫರ್ ನೊಂದಿಗೆ ಅಗ್ಗದರ ದರದಲ್ಲಿ ಲಭ್ಯ ಇದೆ.
ಹೌದು, ಬಜೆಟ್ ಫೋನ್‌ಗಳು ದಿನದ ಸಾಮಾನ್ಯ ಬಳಕೆಗೆ ಉತ್ತಮವಾಗಿವೆ. ಹಾಗಂದ ಮಾತ್ರಕ್ಕೆ ಐಟೆಲ್‌ನ ಈ ಈ ಬಜೆಟ್ ಬೆಲೆಯ ಫೋನ್ ಕ್ಯಾಮೆರಾ ಅಥವಾ ಬ್ಯಾಟರಿ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ಈ ಕಾರಣಕ್ಕೆ ನೀವು ಐಟೆಲ್ P40 ಸ್ಮಾರ್ಟ್‌ಫೋನ್ (Itel P40 Smartphone) ಖರೀದಿ ಮಾಡಬಹುದಾಗಿದೆ. ಈ ಫೋನ್ 6000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆದ ದೀರ್ಘ ಬ್ಯಾಕಪ್ ನೀಡಲಿದೆ. ಹಾಗಿದ್ರೆ, ಈ ಫೋನ್‌ನ ಮೂಲ ದರ ಎಷ್ಟು?, ಎಷ್ಟು ಆಫರ್ ನೀಡಲಾಗಿದೆ?, ಇದರ ಫೀಚರ್ಸ್ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಐಟೆಲ್ P40 ಸ್ಮಾರ್ಟ್‌ಫೋನ್ ಆಫರ್ ಮಾಹಿತಿ:
ಈ ಸ್ಮಾರ್ಟ್‌ಫೋನ್ 9,999 ರೂ.ಗಳ ಆಫರ್ ಬೆಲೆ ಹೊಂದಿದ್ದು, ನೀವೀಗ ಇದನ್ನು ಕೇವಲ 6,799 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ಫೋನ್‌ಗೆ ಫ್ಲಿಪ್‌ಕಾರ್ಟ್ (Flipkart) 32% ರಿಯಾಯಿತಿ ಘೋಷಣೆ ಮಾಡಿದೆ. ಈ ಮೂಲಕ ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ. ಅಲ್ಲದೆ ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೂಲಕ 10% ರಿಯಾಯಿತಿ ಸಿಗಲಿದೆ.
ಐಡಿಎಫ್‌ಸಿ ಮೊದಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ ಬ್ಯಾಂಕ್ ಆಫರ್ 10% ಸಿಗಲಿದ್ದು, ಒನ್‌ಕಾರ್ಟ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಇಎಮ್‌ಐ ವ್ಯವಹಾರದ ಮೇಲೂ ಆಫರ್ ಸಿಗಲಿದೆ. ಅಲ್ಲದೆ ವಿಶೇಷ ಬೆಲೆಗೆ ಹೆಚ್ಚುವರಿ 181 ರೂ.ಗಳ ರಿಯಾಯಿತಿ ಸಹ ಲಭ್ಯ ಇದೆ. ಈ ಮೂಲಕ ಅತ್ಯಂತ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಐಟೆಲ್ P40 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ:
ಈ ಸ್ಮಾರ್ಟ್‌ಫೋನ್ 6.6 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 720 x 1612 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಮೂಲಕ ಉತ್ತಮವಾದ ವೀಕ್ಷಣೆಯನ್ನು ನೀಡಲಿದೆ. ಜೊತೆಗೆ 20:9 ಅನುಪಾತ ಹಾಗೂ 267 ppi ಸಾಂದ್ರತೆ ಹೊಂದಿದ್ದು, ಬಜೆಟ್ ಬೆಲೆಯಲ್ಲಿ ಬೆಸ್ಟ್ ಫೀಚರ್ಸ್ ಎನ್ನಬಹುದಾಗಿದೆ.
ಐಟೆಲ್ P40 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ:
ಈ ಫೋನ್ ಚಿಪ್‌ಸೆಟ್ ಯುನಿಸಾಕ್ SC9863A (28nm) ಪ್ರಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 12 (ಗೋ ಆವೃತ್ತಿ) ನಲ್ಲಿ ರನ್ ಆಗಲಿದೆ. ಅಲ್ಲದೆ GPU IMG8322 ಗ್ರಾಫಿಕ್ಸ್ ಕಾರ್ಡ್ ಆಯ್ಕೆ ಪಡೆದಿದ್ದು, ಈ ಮೂಲಕ ಉತ್ತಮವಾಗಿ ಕೆಲಸ ಮಾಡಲಿದೆ. ಇದರೊಂದಿಗೆ ಆಫರ್ ಬೆಲೆಗೆ ಲಭ್ಯ ಇರುವ ಈ ಫೋನ್ 128 GB ಇಂಟರ್ ಸ್ಟೋರೇಜ್ ಹಾಗೂ 8 GB RAM ಆಯ್ಕೆ ಪಡೆದುಕೊಂಡಿದೆ.
ಐಟೆಲ್ P40 ಸ್ಮಾರ್ಟ್‌ಫೋನ್ ಕ್ಯಾಮೆರಾ ಹಾಗೂ ಇತರೆ: ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 0.3 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಆಯ್ಕೆ ಪಡೆದಿದೆ. ಇದರೊಂದಿಗೆ ಎಲ್ಇಡಿ ಫ್ಲ್ಯಾಶ್ ಫೀಚರ್ಸ್ ಸಹ ಇದ್ದು, 1080p@30fps ಸಾಮರ್ಥ್ಯದ ವಿಡಿಯೋಗಳನ್ನು ಸೆರೆಹಿಡಿಯಬಹುದಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಈ ಫೋನ್‌ನಲ್ಲಿದೆ