ಬೆಂಗಳೂರು: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ ಹೊಸ ನ್ಯಾಯಬೆಲೆ ಅಂಗಡಿಗಳನ್ನು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ಪದ್ಧತಿ ನಿಯಂತ್ರಣದ ಆದೇಶದ ಅನ್ವಯ ಕನಿಷ್ಠ ಪಡಿತರ ಚೀಟಿಗಿಂತ ಹೆಚ್ಚಿನ ಪಡಿತರ ಚೀಟಿ ಹೊಂದಿರುವ, ನ್ಯಾಯಬೆಲೆ ಅಂಗಡಿ ಇರುವ ಪ್ರದೇಶದಲ್ಲಿ ನಿಯಮಾನುಸಾರ ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಹ ಸಹಕಾರ ಸಂಘ & ಸಂಸ್ಥೆಗಳಿಂದ ಅರ್ಜಿಗಳನ್ನ ಈಗ ಆಹ್ವಾನಿಸಲಾಗಿದೆ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಪ್ರಸ್ತಾಪಿಸಿರುವ ಪ್ರದೇಶಗಳು ಯಾವುವು ಅಂದರೆ, ರಾಮೋಹಳ್ಳಿ ಗ್ರಾ.ಪಂಚಾಯಿತಿ ವ್ಯಾಪ್ತಿಯ ಭೀಮನಕುಪ್ಪೆ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600, ರಾಮೋಹಳ್ಳಿ ಗ್ರಾ.ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600, ತಾವರೇಕೆರೆ ಗ್ರಾ.ಪಂಚಾಯಿತಿ ವ್ಯಾಪ್ತಿಯ ತಾವರೇಕೆರೆ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 800 ಸೇರಿದಂತೆ ಇನ್ನೂ ಅನೇಕ ಪ್ರದೇಶಗಳಿಗೆ ಮುಂದೆ ಓದಿ.
ಯಾವೆಲ್ಲಾ ಪ್ರದೇಶದಲ್ಲಿ ಅವಕಾಶ?
ಅಗರ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮೀಪುರ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600, ಅಗರ ಗ್ರಾ.ಪಂ ವ್ಯಾಪ್ತಿಯ ಬಂಜಾರಪಾಳ್ಯ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600, ಜೊತೆಗೆ, ವಾರ್ಡ್ 192 ಬೇಗೂರಿನಲ್ಲಿ ಒಟ್ಟು ಪಡಿತರ ಚೀಟಿ 800, ವಾರ್ಡ್ 187 ಪುಟ್ಟೇನಹಳ್ಳಿ ಒಟ್ಟು ಪಡಿತರ ಚೀಟಿ-800, ವಾರ್ಡ್ 190 ಮಂಗಮ್ಮನ ಪಾಳ್ಯದಲ್ಲಿ ಒಟ್ಟಾರೆ ಪಡಿತರ ಚೀಟಿ 800 ಹಾಗೂ ವಾರ್ಡ್ 190 ಮಂಗಮ್ಮನ ಪಾಳ್ಯದಲ್ಲಿ ಒಟ್ಟು ಪಡಿತರ ಚೀಟಿ 800, ವಾರ್ಡ್ 194 ಗೊಟ್ಟಿಗೆರೆ ಒಟ್ಟು ಪಡಿತರ ಚೀಟಿ 800. ಈ ವಾರ್ಡ್ ಗಳಿಗೆ ಪ್ರಸ್ತಾಪಿಸಿರುವ ಹೊಸ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಚೀಟಿ ನಿಯೋಜಿಸಲಾಗಿದೆ.
ಯಾರು ಅರ್ಜಿ ಸಲ್ಲಿಸಬಹುದು?
ಹೊಸ ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಪಡೆಯಲು ತಾಲೂಕು ಕೃಷಿ ಪ್ರಾಥಮಿಕ ಪತ್ತಿನ ಮಾರಾಟ ಸರ್ಕಾರ ಸಂಘ, ಪ್ರಾಥಮಿಕ ಕೃಷಿ ಸಹಕಾರ ಸಂಘ ಇಲ್ಲವೆ ವ್ಯವಸಾಯೋತ್ಪನ್ನ ಸಹಕಾರ ಸಂಘ, ತೋಟಗಾರಿಕೆ ಉತ್ಪನ್ನ ಬಳಕೆದಾರರ ಸಹಕಾರ ಸಂಘ, ನೊಂದಾಯಿತ ಸಹಕಾರ ಸಂಘ, ನೊಂದಾಯಿತ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘ, ಬೃಹತ್ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘಗಳು, ನೊಂದಾಯಿತ ನೇಕಾರರ ಸಹಕಾರ ಸಂಘಗಳು.
ನೊಂದಾಯಿತ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳು ಸೇರಿದಂತೆ ನೊಂದಾಯಿತ ವಿವಿಧೋದ್ದೇಶ ಸಹಕಾರ ಸಂಘ, ವಿಕಲಚೇತನರ ಕಲ್ಯಾಣ ಸಹಕಾರ ಸಂಘಗಳು ಹಾಗೂ ಬ್ಯಾಂಕ್ ನಡೆಸುತ್ತಿರುವ ಸಹಕಾರ ಸಂಘಗಳು ಅಥವಾ ಸಹಕಾರ ಬ್ಯಾಂಕ್ ಗಳು, ಸ್ತೀ ಶಕ್ತಿ ಸಂಘಗಳು & ಮಹಿಳಾ ಸ್ವ ಸಹಾಯ ಸಂಘಗಳು (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ನೊಂದಣಿ ಆಗಿರಬೇಕು), ವಿಕಲಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ (ಇತರರು) ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಅರ್ಹ ಸಂಸ್ಥೆಗಳು ನಿಗಧಿತ ಅರ್ಜಿ ನಮೂನೆಯ ಭರ್ತಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಉಪನಿರ್ದೇಶಕರು, ಅಹಾರ ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇಲ್ಲಿ ಫೆಬ್ರವರಿ 03 ರ ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು & ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.