ಪ್ರಥಮ ವರ್ಷದ ಎಲ್ಲ ಡಿಗ್ರಿ ವಿದ್ಯಾರ್ಥಿಗಳಿಗೆ ZScholars ವಿದ್ಯಾರ್ಥಿವೇತನ: ವಾರ್ಷಿಕ ರೂ.50,000 ಕ್ಕಾಗಿ ಅರ್ಜಿ ಹಾಕಿ

 Vidyarthivethana 2023-24: ನೀವು ಪದವಿ ಶಿಕ್ಷಣವನ್ನು ಯಾವುದೇ ಮಾನವಿಕ/ ಕಲಾ ವಿಷಯಗಳು, ಪ್ರೊಫೇಶನಲ್ ವಿಷಯಗಳಲ್ಲಿ ಓದುತ್ತಿದ್ದೀರಾ.. ಹಾಗಿದ್ರೆ ನಿಮಗಾಗಿ ಇಲ್ಲಿದೆ ವರ್ಷಕ್ಕೆ ರೂ.50,000 ವರೆಗಿನ ವಿದ್ಯಾರ್ಥಿವೇತನ. ಅರ್ಜಿ ವಿಧಾನ, ಅರ್ಹತೆ, ಬೇಕಾದ ದಾಖಲೆಗಳ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.



ಜಡ್‌ಎಸ್‌ ಅಸೋಸಿಯೇಟ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ನೀಡಲಾಗುವ ZScholars ಪ್ರೋಗ್ರಾಮ್‌ಗೆ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಸ್ಕಾಲರ್‌ಶಿಪ್‌ ಅನ್ನು ಎರಡು ವಿಭಾಗದಲ್ಲಿ ನೀಡಲಾಗುತ್ತಿದ್ದು, ಅರ್ಹತೆ, ವಿದ್ಯಾರ್ಥಿವೇತನ ವಿವರ, ಅರ್ಜಿಗೆ ವಿವರಗಳು ಇಲ್ಲಿವೆ.

ZScholars ಪ್ರೋಗ್ರಾಮ್‌ ಬಡಕುಟುಂಬದ, ಕಡಿಮೆ ಆದಾಯ ಇರುವ ಕುಟುಂಬದ ಪ್ರತಿಭಾವಂತ ಮಕ್ಕಳು ತಮ್ಮ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಹಾಯ ನೀಡುವ ಉದ್ದೇಶ ಹೊಂದಿದೆ. ವಿದ್ಯಾರ್ಥಿವೇತನದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಜೆನೆರಲ್ ಸಬ್ಜೆಕ್ಟ್‌ಗಳ ಅಂಡರ್‌ಗ್ರಾಜುಯೇಟ್‌ ವಿದ್ಯಾರ್ಥಿಗಳಿಗೆ ZScholars ವಿದ್ಯಾರ್ಥಿವೇತನ ವಾರ್ಷಿಕ ರೂ.20,000. ನೀಡಲಾಗುತ್ತದೆ.

ಅರ್ಹತೆಗಳು

ಬೆಂಗಳೂರು, ಚೆನ್ನೈ, ದೆಹಲಿ, ಪುಣೆ ಪ್ರದೇಶದ ಕಾಲೇಜು/ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಮೊದಲ ವರ್ಷದ ಬಿ.ಕಾಂ, ಬಿಎ, ಬಿಎಸ್ಸಿ, ಇತರೆ ಸಾಮಾನ್ಯ ವಿಷಯಗಳಲ್ಲಿ ಡಿಗ್ರಿ ಓದುತ್ತಿರಬೇಕು.

ವಿದ್ಯಾರ್ಥಿಗಳು ಪಿಯುಸಿಯಲ್ಲಿ ಕನಿಷ್ಠ ಶೇಕಡ.60 ಅಂಕಗಳನ್ನು ಪಡೆದು ಪಾಸಾಗಿರಬೇಕು.

ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ಮೀರಿರಬಾರದು.

ಪ್ರೊಫೇಶನಲ್ ಕೋರ್ಸ್‌ ಅಂಡರ್‌ಗ್ರಾಜುಯೇಟ್‌ ವಿದ್ಯಾರ್ಥಿಗಳಿಗೆ ZScholars ವಿದ್ಯಾರ್ಥಿವೇತನ ವಾರ್ಷಿಕ ರೂ.50,000 ನೀಡಲಾಗುತ್ತದೆ.

ಅರ್ಹತೆಗಳು

ಬಿ.ಇ, ಬಿ.ಟೆಕ್, ಎಲ್‌ಎಲ್‌ಬಿ, ಬಿ.ಆರ್ಚ್‌, ಎಂಬಿಬಿಎಸ್ ಮತ್ತು ಇತರೆ ಪ್ರೊಫೇಶನಲ್‌ ಕೋರ್ಸ್‌ಗಳನ್ನು ಪ್ರಥಮ ವರ್ಷದಲ್ಲಿ ಓದುತ್ತಿರಬೇಕು.

ದ್ವಿತೀಯ ಪಿಯುಸಿ ಅನ್ನು ಶೇಕಡ.60 ಅಂಕಗಳೊಂದಿಗೆ ಪಾಸ್‌ ಮಾಡಿರಬೇಕು.

ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.8 ಲಕ್ಷ ಮೀರಿರಬಾರದು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ದ್ವಿತೀಯ ಪಿಯುಸಿ ಅಂಕಪಟ್ಟಿ

ಸರ್ಕಾರ ನೀಡಿದ ಅಧಿಕೃತ ಗುರುತಿನ ಚೀಟಿ.

ಪ್ರಸ್ತುತ ಮೊದಲ ವರ್ಷದ ಪದವಿ ವ್ಯಾಸಂಗಕ್ಕಾಗಿ ಪ್ರವೇಶ ಪಡೆದ ದಾಖಲೆ.

ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ

ಇ-ಮೇಲ್ ವಿಳಾಸ

ಮೊಬೈಲ್‌ ನಂಬರ್

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-12-2023

Apply Online

ಅರ್ಜಿ ಸಲ್ಲಿಸುವ ವಿಧಾನ - ಮೇಲೆ ನೀಡಿದ 'Apply Online' ಎಂದಿರುವ ಲಿಂಕ್ ಕ್ಲಿಕ್ ಮಾಡಿ. ತೆರೆದ ವೆಬ್‌ಪೇಜ್‌ನಲ್ಲಿ ಅಭ್ಯರ್ಥಿಗಳು 'General Undergraduate / Progessional Undergraduate' ವಿಭಾಗದಲ್ಲಿ ತಮಗೆ ಸಂಬಂಧಿಸಿದ ವಿಭಾಗ ಆಯ್ಕೆ ಮಾಡಿ 'Apply Online' ಎಂದಿರುವಲ್ಲಿ ಕ್ಲಿಕ್ ಮಾಡಿ. ಇ-ಮೇಲ್‌, ಜಿ-ಮೇಲ್, ಮೊಬೈಲ್‌ ನಂಬರ್ ಮೂಲಕ ರಿಜಿಸ್ಟ್ರೇಷನ್‌ ಪಡೆದು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ. ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿಗೆ ಅವಕಾಶ ಇರುವುದಿಲ್ಲ.


Previous Post Next Post