ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ₹58,500 ರೂಪಾಯಿ ಸಹಾಯಧನ; ಅರ್ಜಿ ಸಲ್ಲಿಸಿ

 ಹಸು ಸಾಕುವವರಿಗೆ (Cow Farming) ಶೇಕಡಾ 90% ನಷ್ಟು ಸಹಾಯಧನವನ್ನು ಸರ್ಕಾರ ನೀಡುತ್ತದೆ ಹಾಗೂ 10% ಹಣವನ್ನು ಬ್ಯಾಂಕ್ ನಿಂದ ಸಾಲ (Bank Loan) ಪಡೆದುಕೊಳ್ಳಬೇಕು



ಸಾಮಾನ್ಯವಾಗಿ ಹಳ್ಳಿಗಳಲ್ಲಿ (village) ರೈತರು (farmers ) ತಮ್ಮ ಕೃಷಿ ಕೆಲಸದ ಜೊತೆಗೆ ಹೈನುಗಾರಿಕೆ, ಪಶು ಸಂಗೋಪನೆ ಅಂತಹ ಉಪಕಸುಬು ಕೂಡ ಮಾಡುತ್ತಾರೆ. ಇದರಿಂದ ಒಂದಷ್ಟು ಉತ್ತಮವಾದ ಆದಾಯ ಗಳಿಸಿಕೊಳ್ಳಲು ಸಾಧ್ಯವಿದೆ.

ಈ ಬಾರಿ ಅಂತೂ ಮಳೆಯ ಅಭಾವದಿಂದ ಸರಿಯಾದ ಫಸಲು ಪಡೆದುಕೊಳ್ಳಲು ರೈತರಿಗೆ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಆದಾಯ (increase income) ಹೆಚ್ಚಿಸುವ ಸಲುವಾಗಿ ಹಸು ಸಾಕಾಣಿಕೆಗೆ (cow farming) ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.

ಹೈನುಗಾರಿಕೆ ಮಾಡುವವರಿಗೆ ಸರ್ಕಾರದಿಂದ ಸಬ್ಸಿಡಿ (Subsidy Loan for Dairy farming)

ನೀವು ಕೂಡ ಹೈನುಗಾರಿಕೆ ಮಾಡಲು ಬಯಸುತ್ತೀರಾ? ಆದರೆ ಬಂಡವಾಳ ಹಾಕಲು ಹಣ ಇಲ್ಲ ಎಂದು ಚಿಂತೆ ಮಾಡುತ್ತಿದ್ದೀರಾ? ಮುಂದೆ ಈ ಯೋಚನೆಯೇ ಬೇಡ. ಮಿಶ್ರತಳಿಯ ಹಸು ಸಾಕಾಣಿಕೆಗೆ (mixed breed cow farming) ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದ್ದು, 90% ನಷ್ಟು ಹಣವನ್ನು ನೀಡಲು ಸರ್ಕಾರ ಮುಂದಾಗಿದೆ.

ಹಸು ಸಾಕುವವರಿಗೆ ಶೇಕಡಾ 90% ನಷ್ಟು ಸಹಾಯಧನವನ್ನು ಅಂದರೆ 58,500 ರೂ.ಗಳಷ್ಟು ಸರ್ಕಾರ ನೀಡುತ್ತದೆ ಹಾಗೂ 10% ಅಂದರೆ 6,500 ಗಳಷ್ಟು ಹಣವನ್ನು ಬ್ಯಾಂಕ್ ನಿಂದ ಸಾಲ (Bank Loan) ಪಡೆದುಕೊಳ್ಳಬೇಕು.

ಮಿಶ್ರ ತಳಿ ಹಸು ಸಾಕಾಣಿಕೆಗೆ ಹಣ ಪಡೆಯಲು ಬೇಕಾಗುವ ದಾಖಲೆಗಳು!

ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಖಾತೆಯ ವಿವರ (Bank Account Details), ಮೊಬೈಲ್ ಸಂಖ್ಯೆ (Mobile Number), ಆದಾಯ ಪ್ರಮಾಣ ಪತ್ರ (Income Certificate), ಜಾತಿ ಪ್ರಮಾಣ ಪತ್ರ (Cast Certificate), ವಿಕಲಚೇತನರಾಗಿದ್ದರೆ ನೋಂದಾವಣಿ ಪ್ರಮಾಣ ಪತ್ರ ಒದಗಿಸಬೇಕು.

ಯೋಜನೆಯ ಪ್ರಯೋಜನ ಯಾರಿಗೆ ಸಿಗಲಿದೆ? (Who can get benefits)

ಕಳೆದ ಐದು ವರ್ಷಗಳಲ್ಲಿ ಸರ್ಕಾರದ ಯಾವುದೇ ಪಶುಸಂಗೋಪನೆಯ ಯೋಜನೆಯ ಸಬ್ಸಿಡಿ (subsidy) ಪಡೆದುಕೊಂಡಿರುವವರು ಈ ಯೋಜನೆಗೆ ಅಪ್ಲೈ ಮಾಡುವಂತಿಲ್ಲ.

*SC/ST ವರ್ಗದ ಕೃಷಿಕರು ಕೂಲಿ ಕಾರ್ಮಿಕರು ಈ ಯೋಜನೆಗೆ ಅಪ್ಲೈ ಮಾಡಬಹುದು.

ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೈತರು ಹಾಲು ಉತ್ಪಾದನಾ ಸಂಘದ ಸದಸ್ಯರಾಗಿರಬೇಕು ಅಥವಾ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರವಾದರೂ ಸದಸ್ಯತ್ವ ಪಡೆದುಕೊಳ್ಳಬೇಕು.

*ಸರ್ಕಾರದ ಸಹಾಯಧನ ಪಡೆದುಕೊಳ್ಳಲು ಹೈನುಗಾರಿಕೆ ಮಾಡುವವರು ಹಾಲು ಉತ್ಪಾದನೆ ಮಾಡಿ ಅದನ್ನು ಹಾಲು ಉತ್ಪಾದನೆ ಘಟಕಕ್ಕೆ ವಿತರಣೆ ಮಾಡುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಡಬೇಕು.

ಆನ್ಲೈನ್ /offline ಮೂಲಕವೇ ಅರ್ಜಿ ಸಲ್ಲಿಸಬಹುದು.ಆಥವ ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು. ಮಿಶ್ರ ತಳಿಯ ಹಸು ಸಾಕಾಣಿಕೆಯಿಂದ ಹೆಚ್ಚು ಆದಾಯ ಪಡೆಯಬಹುದಾದ್ದರಿಂದ ಯುವಕರು ಕೂಡ ಈ ಯೋಜನೆಗೆ ಅಪ್ಲೈ ಮಾಡಿ ಸರ್ಕಾರದಿಂದ ಧನಸಹಾಯ ಪಡೆಯಬಹುದು.


Previous Post Next Post