OnePlus 12: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಒನ್‌ಪ್ಲಸ್‌ 12!..1TB ವರೆಗೆ ಸ್ಟೋರೇಜ್‌ ಸಾಮರ್ಥ್ಯ

 ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಇದೀಗ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಬಿಡುಗಡೆಗೂ ಮುನ್ನವೇ ಫೀಚರ್ಸ್‌ ಸೋರಿಕೆಯ ಮೂಲಕ ಹಲ್‌ಚಲ್‌ ಎಬ್ಬಿಸಿದ್ದ ಈ ಫೋನ್‌ ಅಂತಿಮವಾಗಿ ಅನಾವರಣಗೊಂಡಿದೆ. ಸ್ಮಾರ್ಟ್‌ಫೋನ್‌ ಪ್ರಿಯರು ನಿರೀಕ್ಷೆ ಇಟ್ಟ ತನ್ನ ವಿಭಿನ್ನ ಫೀಚರ್ಸ್‌ಗಳ ಮೂಲಕ ಹೊಸ ಹವಾ ಕ್ರಿಯೆಟ್‌ ಮಾಡುವ ಸೂಚನೆ ನೀಡಿದೆ.



ಹೌದು, ಒನ್‌ಪ್ಲಸ್‌ 12 (OnePlus 12) ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 3SoC ಪ್ರೊಸೆಸರ್‌ ಒಳಗೊಂಡಿರುವ ಕಂಪನಿಯ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು 2K LTPO AMOLED ಸ್ಕ್ರೀನ್‌ ಹೊಂದಿದ್ದು, 4,500 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿದೆ. ಇನ್ನುಳಿದಂತೆ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌ 12 ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ 6.82 ಇಂಚಿನ ಕ್ವಾಡ್ HD+ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 1,440 x 3,168 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇದು LTPO OLED ಸ್ಕ್ರೀನ್‌ ಹೊಂದಿದ್ದು, 1Hz ಮತ್ತು 120Hz ನಡುವಿನ ರಿಫ್ರೆಶ್ ರೇಟ್‌ನೊಂದಿಗೆ ಬರಲಿದೆ. ಇದಲ್ಲದೆ ಡಿಸ್‌ಪ್ಲೇ 4,500 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲವನ್ನು ಸಹ ನೀಡಲಿದೆ.

ಒನ್‌ಪ್ಲಸ್‌ 12 ಕ್ಯಾಮೆರಾ ಸೆಟ್‌ಅಪ್‌ ಏನಿದೆ?

ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಹ್ಯಾಸೆಲ್ಬ್ಲಾಡ್-ಟ್ಯೂನ್ಡ್ ಕ್ಯಾಮೆರಾಗಳನ್ನು ಹೊಂದಿದೆ. ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿದ್ದು, ಪ್ರೈಮೆರಿ ಕ್ಯಾಮೆರಾ 50 ಮೆಗಾಪಿಕ್ಸೆಲ್ Sony LYT-808 ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮರಾ 3x ಆಪ್ಟಿಕಲ್ ಜೂಮ್ ಅನ್ನು ಒಳಗೊಂಡಿದೆ. ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ 114-ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒನ್‌ಪ್ಲಸ್‌ 12 ಬ್ಯಾಟರಿ ಮತ್ತು ಇತರೆ ಸೌಲಭ್ಯ

ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ 5,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 100W SuperVOOC ಚಾರ್ಜಿಂಗ್, 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.4, GPS, NFC, ಮತ್ತು USB ಟೈಪ್-C ಪೋರ್ಟ್ ಹೊಂದಿದೆ. ಇದಲ್ಲದೆ ಗೈರೊಸ್ಕೋಪ್, ಅಕ್ಸಿಲೆರೊಮೀಟರ್, ಮ್ಯಾಗ್ನೆಟೋಮೀಟರ್, ಪ್ರಾಕ್ಸಿಮಿಟಿ ಸೆನ್ಸಾರ್‌ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಒನ್‌ಪ್ಲಸ್‌ 12 ಬೆಲೆ ಮತ್ತು ಲಭ್ಯತೆ

ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌ ಚೀನಾದಲ್ಲಿ 12GB RAM +256GB ಸ್ಟೋರೇಜ್ ಆಯ್ಕೆಗೆ CNY 4,299 (ಸುಮಾರು 50,700ರೂ)ಬೆಲೆ ಹೊಂದಿದೆ. ಇನ್ನು 16GB+512GB ಆಯ್ಕೆಯನ್ನು CNY 4,799 (ಅಂದಾಜು 56,600ರೂ) ಮತ್ತು 16GB+1TB ರೂಪಾಂತರದ ಆಯ್ಕೆಯು CNY 5,299 (ಸುಮಾರು 62,500ರೂ)ಬೆಲೆಯಲ್ಲಿದೆ. ಇದರ ಟಾಪ್‌ ಮಾಡೆಲ್‌

24GB RAM ಮತ್ತು 1TB ಸ್ಟೋರೇಜ್ ಆಯ್ಕೆಯ ಬೆಲೆ CNY 5,799 (ಸುಮಾರು 68,400ರೂ)ಆಗಿದೆ. ಇದನ್ನು ಪೇಲ್ ಗ್ರೀನ್, ರಾಕ್ ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Previous Post Next Post