ಗೃಹಲಕ್ಷ್ಮಿ 4ನೇ ಕಂತಿನ ಹಣಕ್ಕೆ ಹೊಸ ಕಂಡೀಷನ್; ಪಾಲಿಸದೆ ಇದ್ರೆ ಹಣ ಬರೋಕೆ ಚಾನ್ಸೇ ಇಲ್ಲ

 ಗೃಹಲಕ್ಷ್ಮಿ ಯೋಜನೆ (Gruha lakshmi scheme) ಮೂರನೇ ಕಂತಿನ ಹಣ ಬಹುತೇಕ ಎಲ್ಲಾ ಮಹಿಳೆಯರ ಖಾತೆಗೂ (Bank Account) ಜಮಾ ಆಗಿದೆ. ಸರ್ಕಾರ ತಿಳಿಸಿರುವ ಪ್ರಕಾರ ಇನ್ನು ಕೇವಲ 5% ನಷ್ಟು ಮಹಿಳೆಯರ ಖಾತೆಗೆ ಮಾತ್ರ ಹಣ ಸಂದಾಯವಾಗುವುದು (Money Deposit) ಬಾಕಿ ಇದೆ.



ಕೆಲವು ತಾಂತ್ರಿಕ ದೋಷ (technical error) ಕಾರಣದಿಂದಾಗಿ ಮೂರನೇ ಕಂತಿನ ಹಣ ಸಂಪೂರ್ಣ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ (Money Transfer) ಆಗಿಲ್ಲ. ಆದರೆ ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಪ್ರತಿಯೊಬ್ಬರ ಖಾತೆಗೆ (Bank Account) ಕೂಡ ಹಣ ಜಮಾ ಆಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.

4ನೇ ಕಂತಿನ ಹಣಕ್ಕೆ ಹೊಸ ಕಂಡೀಶನ್! (New condition for Gruha lakshmi scheme)

ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಮಹಿಳೆಯರಿಗೆ ನೀಡುವಂತಹ ಪ್ರಕ್ರಿಯೆ ಆರಂಭವಾಗಿ ನಾಲ್ಕು ತಿಂಗಳು ಕಳೆದಿವೆ. ಈಗಾಗಲೇ ಮೂರು ತಿಂಗಳುಗಳ ಹಣ ಬಿಡುಗಡೆ ಆಗಿದೆ.

4ನೇ ಕಂತಿನ ಹಣಕ್ಕಾಗಿ (4th installment) ಮಹಿಳೆಯರು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊಸ ಕಂಡೀಶನ್ (new condition) ಒಂದನ್ನು ಸರ್ಕಾರ ವಿಧಿಸಿದ್ದು ಇದನ್ನು ಪಾಲಿಸದೆ ಇದ್ದವರಿಗೆ ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ವಾಗುವುದಿಲ್ಲ ಎಂದು ಕಟ್ಟುನಿಟ್ಟಾಗಿ ತಿಳಿಸಿದೆ. ಹಾಗಾದ್ರೆ ನಾಲ್ಕನೇ ಕಂತಿನ ಹಣ ಪಡೆದುಕೊಳ್ಳಲು ಪಾಲಿಸಬೇಕಾಗಿರುವ ಕಂಡೀಶನ್ ಯಾವುದು ಎಂಬುದನ್ನು ನೋಡೋಣ

ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಕಡ್ಡಾಯ! (Aadhar Card update mandatory)

ನೀವು ಆಧಾರ್ ಕಾರ್ಡ್ ಪಡೆದುಕೊಂಡು ಹತ್ತು ವರ್ಷ ಕಳೆದಿದ್ದರೆ ತಕ್ಷಣವೇ ಆಧಾರ್ ಕಾರ್ಡ್ ಅಪ್ಡೇಟ್ (Aadhar Card update) ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಅಪ್ಡೇಟ್ ಗೆ ಡಿಸೆಂಬರ್ 31 ಕೊನೆಯ (last date for Aadhar Card update December 31st) ದಿನಾಂಕವಾಗಿದೆ.

ಈ ದಿನಾಂಕದ ಒಳಗೆ ಆಧಾರ್ ಕಾರ್ಡ್ ಅಪ್ಡೇಟ್ ಆಗದೇ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಆಧಾರ್ ಕಾರ್ಡ್ ಹತ್ತು ವರ್ಷ ಹಳೆಯದಾಗಿದ್ದರೆ ವಿಳಾಸ ಫೋಟೋ ಹೆಸರು ಮೊದಲಾದ ತಿದ್ದುಪಡಿಗಳು ಅಗತ್ಯವಿದ್ದರೆ ಮಾಡಿಕೊಳ್ಳಬೇಕು.

ಒಂದು ವೇಳೆ ಮಾಡದೆ ಇದ್ದಲ್ಲಿ ಆಧಾರ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆಧಾರ್ ಕಾರ್ಡ್ ಇಲ್ಲದೆ ಇದ್ರೆ ಗೃಹಲಕ್ಷ್ಮಿ ಯೋಜನೆಯ ಹಣ ಮಾತ್ರವಲ್ಲ ಸರ್ಕಾರದ ಇತರ ಯೋಜನೆಯ ಪ್ರಯೋಜನವನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿಲ್ಲ.

ಆಧಾರ್ ಅಪ್ಡೇಟ್ ಎಲ್ಲಿ ಮಾಡಿಸಬೇಕು?

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿದ್ದು, ಇನ್ನು ಕೇವಲ 25 ದಿನಗಳ ಅವಧಿ ಮಾತ್ರ ಬಾಕಿ ಇದೆ. ನೀವು ಆಧಾರ್ ಕಾರ್ಡ್ ಸೇವಾ ಕೇಂದ್ರಗಳಲ್ಲಿ ಅಥವಾ ಹತ್ತಿರದ ಸೈಬರ್ ಕೇಂದ್ರ (cyber centre) ಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಬಹುದು. ಈಗಾಗಲೇ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿದರೆ ಯೋಚಿಸುವ ಅಗತ್ಯವಿಲ್ಲ ಆದರೆ 10 ವರ್ಷ ಕಳೆದರೂ ಕೂಡ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳದೆ ಇರುವವರು ತಕ್ಷಣವೇ ಮಾಡಿಕೊಳ್ಳಿ.

ಇನ್ನು ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷ ಕಳೆದಿದೆ ಎಂಬುದು ಹೇಗೆ ತಿಳಿದುಕೊಳ್ಳುವುದು ಎನ್ನುವ ಗೊಂದಲ ಹಲವರಲ್ಲಿ ಇರುತ್ತದೆ ,ನೀವು ಆಧಾರ್ ಕಾರ್ಡ್ ಪಡೆದುಕೊಳ್ಳುವಾಗ ಉದ್ದನೆಯ ಕಾರ್ಡ್ ಪಡೆದುಕೊಂಡಿರುತ್ತೀರಿ ಆ ಕಾರ್ಡ್ ನಲ್ಲಿ ಎಡ ಭಾಗ ಅಥವಾ ಬಲಭಾಗದಲ್ಲಿ ಸಣ್ಣದಾಗಿ ಆಧಾರ್ ಕಾರ್ಡ್ ಇಶ್ಶೂ ಡೇಟ್ (Aadhaar card issued date) ಎಂದು ನಮೂದಿಸಿರಲಾಗುತ್ತದೆ, ಅದನ್ನ ನೀವು ಗಮನಿಸಿದರೆ ನಿಮಗೆ ಆಧಾರ್ ಕಾರ್ಡ್ ಅನ್ನು ಯಾವಾಗ ಪಡೆದುಕೊಂಡಿದ್ದೀರಿ ಎನ್ನುವ ವಿಷಯ ತಿಳಿಯುತ್ತದೆ. ಅದರ ಆಧಾರದ ಮೇಲೆ ಆಧಾರ್ ಅಪ್ಡೇಟ್ ಮಾಡಿಕೊಳ್ಳಿ.

8888

ಒಂದು ವೇಳೆ ಈಗ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಅಪ್ಡೇಟ್ ಮಾಡಿಕೊಳ್ಳಲು ವಿಶೇಷ ಪರವಾನಿಗೆ ಬೇಕು, ಜೊತೆಗೆ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ದಂಡ ಪಾವತಿಸಬೇಕು. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಮುಂದಿನ ದಿನಗಳಲ್ಲಿ ತಪ್ಪದೇ ನಿಮ್ಮ ಖಾತೆಗೆ ತಲುಪಬೇಕು ಅಂದ್ರೆ ತಕ್ಷಣವೇ ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ.


Previous Post Next Post