Phone Pe ಬಳಕೆದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ನ್ಯೂ ಅಪ್ಡೇಟ್

ಹೊಸದಾಗಿ ಸೇರಿಸಲಾದ ಕ್ರೆಡಿಟ್ ವಿಭಾಗದೊಂದಿಗೆ, ಬಳಕೆದಾರರು ಹಣಕಾಸಿನ ವಿಷಯಗಳನ್ನು ಸುಲಭವಾಗಿ ಪ್ರವೇಶಿಸಬಹುದು. ಹಾಗೆಯೇ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಕುರಿತು ಬಳಕೆದಾರರಿಗೆ ಸಲಹೆ ಮತ್ತು ಸೂಚನೆಗಳನ್ನು ಕೂಡ ನೀಡಲಾಗುವುದು.



ವಾಲ್‌ಮಾರ್ಟ್ ಒಡೆತನದ ಡಿಜಿಟಲ್ ಪಾವತಿ ಅಪ್ಲಿಕೇಶನ್ ಫೋನ್‌ಪೇ (Phone Pay) ತನ್ನ ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್‌ಗಳನ್ನು ನಿರ್ವಹಿಸಲು ಮತ್ತು ಬಿಲ್‌ಗಳು ಮತ್ತು ಸಾಲಗಳನ್ನು ಪಾವತಿಸಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಪ್ಲಾಟ್‌ಫಾರ್ಮ್‌ನಲ್ಲಿ ಹೊರತಂದಿದೆ. ಕ್ರೆಡಿಟ್ ವಿಭಾಗವನ್ನು ಹೊಸದಾಗಿ ಸೇರಿಸಲಾಗಿದ್ದು, ಇದರಲ್ಲಿ, ಬಳಕೆದಾರರು CIBIL ಸ್ಕೋರ್ ಅನ್ನು ಉಚಿತವಾಗಿ ಪರಿಶೀಲಿಸಬಹುದು. ಕ್ರೆಡಿಟ್ ಕಾರ್ಡ್ ಬಿಲ್‌ಗಳು, ಸಾಲ ಪಾವತಿ ಮತ್ತು ಇತರೆ ಪೇಮೆಂಟ್‌ಗಳನ್ನೂ ಸುಲಭವಾಗಿ ನಿರ್ವಹಿಸಬಹುದು. ಒಟ್ಟಿನಲ್ಲಿ ಫೋನ್ ಪೇನಲ್ಲಿ ಹೊಸ ಕ್ರೆಡಿಟ್ ವಿಭಾಗವನ್ನು ಸೇರಿಸುವುದರೊಂದಿಗೆ, ಬಳಕೆದಾರರು ಯಾವುದೇ ಹಣ ಪಾವತಿಸದೆ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ಚೆಕ್‌ ಮಾಡಬಹುದು. ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ಸಾಲ ಮರುಪಾವತಿ, ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸುಲಭವಾಗಿ ಪಾವತಿಸಬಹುದು. ಕ್ರೆಡಿಟ್ ಸ್ಕೋರ್‌ (Credit Score) ಎಂಬುದು ನಿಮ್ಮ ಕ್ರೆಡಿಟ್‌ನ ಸಾರಾಂಶವನ್ನು ಒಳಗೊಂಡಿದೆ. ಅಂದರೆ ನೀವು ಎಷ್ಟು ಸಾಲ ತೆಗೆದುಕೊಂಡಿದ್ದೀರಿ, ನೀವು ಸಾಲ ಮರುಪಾವತಿಯನ್ನು ಸರಿಯಾಗಿ ಮಾಡಿದ್ದೀರಾ ಅಥವಾ ಇಲ್ಲವೇ ಎಂಬ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಫೋನ್ ಪೇ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಹಲವು ಸೌಲಭ್ಯ

ಹೊಸದಾಗಿ ಸೇರಿಸಲಾದ ಕ್ರೆಡಿಟ್ ವಿಭಾಗದೊಂದಿಗೆ, ಬಳಕೆದಾರರು ಹಣಕಾಸಿನ ವಿಷಯಗಳನ್ನು ಸುಲಭವಾಗಿ ಪ್ರವೇಶಿಸಬಹುದು. ಹಾಗೆಯೇ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಕುರಿತು ಬಳಕೆದಾರರಿಗೆ ಸಲಹೆ ಮತ್ತು ಸೂಚನೆಗಳನ್ನು ಕೂಡ ನೀಡಲಾಗುವುದು. ಮತ್ತು ಮುಂದಿನ ದಿನಗಳಲ್ಲಿ ಕ್ರೆಡಿಟ್ ಟ್ಯಾಬ್‌ನಲ್ಲಿ ಹೆಚ್ಚಿನ ಸೇವೆಗಳು ಲಭ್ಯವಾಗಲಿವೆ ಎಂದು ಫೋನ್‌ಪೇ ತಿಳಿಸಿದೆ. ಆ್ಯಪ್‌ನಲ್ಲಿ ಸಾಲ ನೀಡುವ ಫೀಚರ್‌ ಅನ್ನು ತರಲಾಗುವುದು ಎಂದು ವಿವರಿಸಿದೆ. ಇದರ ಮೂಲಕ ಬಳಕೆದಾರರು ಬಹಳ ಸುಲಭವಾಗಿ ಸಾಲ ಪಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಸ್ಕೋರ್ ಅಥವಾ CIBIL ಸ್ಕೋರ್ ಅನ್ನು ಹೆಚ್ಚಿನ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಮುಖ್ಯ. ಬ್ಯಾಂಕ್ ಅಥವಾ ಯಾವುದೇ ಹಣಕಾಸು ಸಂಸ್ಥೆಯಿಂದ ಯಾವುದೇ ಸಾಲಕ್ಕಾಗಿ, ಮೊದಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಲಾಗುತ್ತದೆ. ಈ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೆ ನಿಮಗೆ ಸಾಲ ಸುಲಭವಾಗಿ ಸಿಗುತ್ತದೆ ಮತ್ತು ಬಡ್ಡಿ ದರವೂ ಕಡಿಮೆ ಇರುತ್ತದೆ. ಆದರೆ, ಕ್ರೆಡಿಟ್ ಸ್ಕೋರ್ ತುಂಬಾ ಕಡಿಮೆಯಿದ್ದರೆ ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕುತ್ತವೆ. ಇಲ್ಲವೇ ಸಾಲದ ಮೇಲೆ ಹೆಚ್ಚಿನ ಬಡ್ಡಿ ವಿಧಿಸುತ್ತವೆ.

“ಹಣಕಾಸಿನ ಸಬಲೀಕರಣವಾಗುತ್ತದೆ”

ಫೋನ್‌ ಪೇಯ ಹೊಸ ವೈಶಿಷ್ಟ್ಯದ ಕುರಿತು ಮಾತನಾಡಿದ, PhonePe ಕ್ರೆಡಿಟ್‌ನ ಮುಖ್ಯ ಕಾರ್ಯನಿರ್ವಾಹಕ ಹೇಮಂತ್ ಗಾಲಾ, “ನಿಮ್ಮ ಕ್ರೆಡಿಟ್ ಆರೋಗ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ನಿರ್ವಹಿಸುವ ಮೂಲಕ ಹಣಕಾಸಿನ ಸಬಲೀಕರಣವು ಪ್ರಾರಂಭವಾಗುತ್ತದೆ ಎಂದು ನಾವು ನಂಬುತ್ತೇವೆ. ಈ ಪ್ರಯತ್ನವು ನಮ್ಮ ಬಳಕೆದಾರರಿಗೆ ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಿರುವ ಪರಿಕರಗಳು ಮತ್ತು ಜ್ಞಾನವನ್ನು ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ" ಎಂದರು.

ಆ್ಯಪ್‌ನಲ್ಲಿ ಗ್ರಾಹಕ ಸಾಲಗಳನ್ನು ಪ್ರಾರಂಭಿಸುವ ಮೂಲಕ ಶೀಘ್ರದಲ್ಲೇ ತನ್ನ ಕ್ರೆಡಿಟ್ ಕೊಡುಗೆಗಳನ್ನು ವಿಸ್ತರಿಸುವುದಾಗಿ PhonePe ಮತ್ತಷ್ಟು ಹೇಳಿದೆ. ಇದರೊಂದಿಗೆ, ಕಂಪನಿಯು ವಿವಿಧ ವಿಭಾಗಗಳಲ್ಲಿ ತನ್ನ ಗ್ರಾಹಕರ ನೆಲೆಯ ವೈವಿಧ್ಯಮಯ ಕ್ರೆಡಿಟ್ ಅವಶ್ಯಕತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಪೋನ್‌ ಪೇಯ ಆರಂಭ

ಡಿಸೆಂಬರ್ 2015ರಲ್ಲಿ ಸಮೀರ್ ನಿಗಮ್, ರಾಹುಲ್ ಚಾರಿ ಮತ್ತು ಬರ್ಜಿನ್ ಇಂಜಿನಿಯರ್ ಸ್ಥಾಪಿಸಿದ PhonePe ಬಳಕೆದಾರರಿಗೆ ಹಣಕಾಸಿನ ಸೇವೆಗಳನ್ನು ನೀಡುತ್ತದೆ. ಡಿಜಿಟಲ್ ಪಾವತಿಗಳ ಬೇಡಿಕೆ ಹೆಚ್ಚುತ್ತಿದ್ದು, ಫೋನ್‌ ಪೇಯು ಪೇಟಿಎಂ, ಗೂಗಲ್‌ ಪೇನಂತಹ ಆ್ಯಪ್‌ಗಳ ಜೊತೆ ಸ್ಪರ್ಧೆಯಲ್ಲಿದೆ. ಈ ಒಂದು ಸೇವೆ ಮ್ಯೂಚುಯಲ್ ಫಂಡ್‌ಗಳು ಮತ್ತು ವಿಮಾ ಉತ್ಪನ್ನಗಳನ್ನು ಸಹ ಒದಗಿಸುತ್ತದೆ.


Previous Post Next Post