ರಕ್ಷಣಾ ಇಲಾಖೆಯ ಹುದ್ದೆಗಳಿಗೆ ಸೇರಲು ಉಚಿತ ತರಬೇತಿ: ಆನ್‌ಲೈನ್‌ ಅರ್ಜಿ ಆಹ್ವಾನ

ಭೂಸೇನೆ, ಜಲಸೇನೆ, ವಾಯುಸೇನೆ, ಇತರೆ ಏಕರೂಪ ರಕ್ಷಣಾ ಸೇವೆಗಳಿಗೆ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ತರಬೇತಿಯನ್ನು ಕರ್ನಾಟಕದ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು.



2023-24ನೇ ಸಾಲಿನ ಅಲ್ಪಸಂಖ್ಯಾತರ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ರಕ್ಷಣಾ / ಏಕರೂಪದ ಸೇವೆಗಳಿಗೆ (ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಸಿಐಎಸ್‌ಎಫ್‌, ಬಿಎಸ್‌ಎಫ್‌, ಆರ್‌ಪಿಎಫ್‌, ಪೊಲೀಸ್, ಅಬಕಾರಿ ಇತ್ಯಾದಿ) ಸೇರಲು ಇಚ್ಛಿಸುವ ಅಭ್ಯರ್ಥಿಗಳಿಗೆ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ತರಬೇತಿಯನ್ನು ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಅರ್ಹತೆಗಳು

- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ರಾಮನಗರ, ಬೆಳಗಾವಿ, ದಾವಣಗೆರೆ, ಕಲಬುರಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಿವಾಸಿಗಳಾಗಿರಬೇಕು.

- ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯದವರಾಗಿರಬೇಕು.

- ನಿಗದಿತ ವಯೋಮಾನ ಹೊಂದಿರಬೇಕು.

- ಕನಿಷ್ಠ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು.

- ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು ರೂ.8.00 ಲಕ್ಷಗಳು ಮೀರಿರಬಾರದು.

ತರಬೇತಿ ಕುರಿತು ಮಾಹಿತಿ

ತರಬೇತಿ ಕಾಲಾವಧಿಯು 60 ದಿನಗಳಾಗಿರುತ್ತದೆ.

ತರಬೇತಿಯ ಅವಧಿಯಲ್ಲಿ ಊಟ, ವಸತಿ ಸೌಲಭ್ಯ ನೀಡಲಾಗುತ್ತದೆ.

ಅಭ್ಯರ್ಥಿಗೆ ಯಾವುದೇ ತರಹದ ಸ್ಟೈಫಂಡ್ ನೀಡಲಾಗುವುದಿಲ್ಲ.

ನಿಗಧಿತ ದೈಹಿಕ ಸಾಮರ್ಥ್ಯ ಹೊಂದಿರಬೇಕು.

ಆನ್‌ಲೈನ್‌ ಅರ್ಜಿಗಳನ್ನು ಸಲ್ಲಿಸಲು ಕೊನೆ ದಿನಾಂಕ : 05-01-2024

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://dom.karnataka.gov.in

Apply Online

ಮೇಲಿನ ಲಿಂಕ್‌ ಕ್ಲಿಕ್ ಮಾಡಿ. ಓಪನ್ ಆದ ವೆಬ್‌ಸೈಟ್‌ನಲ್ಲಿ '2023-24ನೇ ಸಾಲಿನ ರಕ್ಷಣಾ / ಏಕರೂಪದ ಸೇವೆಗಳಿಗೆ ವಸತಿ ಸಹಿತವಾಗಿ ಪೂರ್ವ ನೇಮಕಾತಿ ದೈಹಿಕ ಕೌಶಲ್ಯದ ಕುರಿತಾದ ತರಬೇತಿಗೆ ಅರ್ಜಿ' ಎಂದಿರುವ ಲಿಂಕ್‌ ಕ್ಲಿಕ್ ಮಾಡಿ. ತೆರೆಯುವ ವೆಬ್‌ಪೇಜ್‌ನಲ್ಲಿ ಕೇಳಲಾಗುವ ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ.

Previous Post Next Post