ಯುವ ನಿಧಿ ಯೋಜನೆ ಹಣ ವರ್ಗಾವಣೆಗೆ ದಿನಾಂಕ ಫಿಕ್ಸ್! ಈ ದಾಖಲೆ ಸಿದ್ಧಪಡಿಸಿಕೊಳ್ಳಿ

 ಸಾರ್ವತ್ರಿಕ ಚುನಾವಣೆ 2023 (vidhansabha election 2023) ರ ಅವಧಿಯಲ್ಲಿ ರಾಜ್ಯ ಸರ್ಕಾರ ತಾನು ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಐದು ಗ್ಯಾರಂಟಿ (guarantee schemes) ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿತ್ತು.



ಅದಕ್ಕೆ ತಕ್ಕಂತೆ ಈಗಾಗಲೇ ಶಕ್ತಿ ಯೋಜನೆ, ಗೃಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳು ಆರಂಭವಾಗಿವೆ. ಇದರ ಪ್ರಯೋಜನಗಳು ಕೂಡ ಜನರಿಗೆ ಲಭ್ಯವಾಗಿದೆ.

ಇನ್ನು ಕೊನೆಯದಾಗಿ ಯುವಕರಿಗೆ ಸಹಾಯಕವಾಗುವಂತಹ ಯುವನಿಧಿ ಯೋಜನೆ ಮಾತ್ರ ಜಾರಿಗೆ ಬರುವುದು ಬಾಕಿ ಇದೆ.

ಯುವನಿಧಿ ಯೋಜನೆ ಅಪ್ಡೇಟ್! (Yuva Nidhi Yojana new update)

ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯುವ ನಿಧಿ ಯೋಜನೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ ಮಾಸಿಕ ನಿರುದ್ಯೋಗ ಭತ್ಯೆ (Monthly Unemployment Allowance) ನೀಡಲು ಸರ್ಕಾರ ನಿರ್ಧರಿಸಿದೆ.

ಯುವನಿಧಿ ಯೋಜನೆಯ ಅಡಿಯಲ್ಲಿ 2022 ನೇ ಸಾಲಿನಲ್ಲಿ ಪದವಿ ತರಗತಿ (degree) ಮುಗಿಸಿ ಕೆಲಸ ಸಿಗದೇ ನಿರುದ್ಯೋಗಿಗಳಾಗಿ ಇರುವ ಯುವಕರಿಗೆ ಪ್ರತಿ ತಿಂಗಳು ಎರಡು ವರ್ಷಗಳ ಅವಧಿಗೆ 3,000 ರೂ. ಗಳನ್ನು ಸರ್ಕಾರ ನೀಡುತ್ತದೆ.

ಅದೇ ರೀತಿ ಡಿಪ್ಲೋಮಾ (diploma course) ಕೋರ್ಸ್ ಮುಗಿಸಿದವರಿಗೆ ರೂ.1500 ಗಳನ್ನು ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯಾಗಿ ಪಡೆದುಕೊಳ್ಳಬಹುದು. ಈ ನಿರುದ್ಯೋಗ ಭತ್ಯೆ ಯೋಜನೆ ಎರಡು ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿದ್ದು ಅಷ್ಟರಲ್ಲಿ ಯುವಕ ಯುವತಿಯರು ಕೆಲಸ ಹುಡುಕಿಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ (Update on Yuva Nidhi scheme)

Yuva Nidhi Scheme

ಯುವನಿಧಿ ಯೋಜನೆಯನ್ನು ಜಾರಿಗೆ ತರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ನಾವು ಕೇವಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದರಲ್ಲಿ ಮಾತ್ರ ಸೀಮಿತವಾಗಿಲ್ಲ ಇತರ 147 ಘೋಷಣೆಯಾಗಿರುವ ಯೋಜನೆಯ ಅಡಿ 83 ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಅದೇ ರೀತಿ ನಾಲ್ಕು ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ರಾಜ್ಯ ಸರ್ಕಾರ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಯುವನಿಧಿ ಯೋಜನೆಯ ಬಗ್ಗೆಯೂ ಕೂಡ ತಿಳಿಸಿರುವ ಮಾನ್ಯ ಮುಖ್ಯಮಂತ್ರಿಗಳು, ಸದ್ಯದಲ್ಲಿಯೇ Yuva Nidhi ಯೋಜನೆಗೆ ಚಾಲನೆ ನೀಡುವ ಭರವಸೆ ಕೊಟ್ಟಿದ್ದಾರೆ.

ನಮ್ಮ ಸಾಧನೆಗಳು ಸದನದ ಒಳಗೆ ಮತ್ತು ಹೊರಗೆ ಕೇವಲ ಕಾಗದಪತ್ರಗಳಿಗೆ ಮಾತ್ರ ಸೀಮಿತವಾಗಿರದೆ ಎಲ್ಲ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದರ ಜೊತೆಗೆ ನಿರುದ್ಯೋಗಿ ಯುವಕರಿಗೆ ಆರ್ಥಿಕ ಸಹಾಯ ನೀಡುವಂತಹ ಯುವ ನಿಧಿ ಯೋಜನೆ ಇದೇ ಬರುವ ಜನವರಿ 2024 ರಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ನಿರುದ್ಯೋಗಿ ಭತ್ಯೆ ಪಡೆದುಕೊಳ್ಳಲು ಬಯಸುವ ಯುವಕರು ಅಗತ್ಯ ಇರುವ ದಾಖಲೆಗಳನ್ನು ಕೂಡಲೇ ಸಿದ್ಧಪಡಿಸಿಕೊಳ್ಳಿ.

ನಿರುದ್ಯೋಗಿ ಭತ್ಯೆ ಪಡೆದುಕೊಳ್ಳಲು ಆಧಾರ್ ಕಾರ್ಡ್ (Aadhaar Card), ಆದಾಯ ಪ್ರಮಾಣ ಪತ್ರ (Income Certificate), ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಗಳಲ್ಲಿ ತೇರ್ಗಡೆ ಹೊಂದಿರುವ ಬಗ್ಗೆ ಅಂಕಪಟ್ಟಿ, ಬ್ಯಾಂಕ್ ಖಾತೆಯ ವಿವರಗಳು (Bank Account Details) ಇಂತಹ ಕೆಲವು ಬೇಸಿಕ್ ದಾಖಲೆಗಳು ಬೇಕು. ಇದರ ಹೊರತಾಗಿ ಯುವ ನಿಧಿ ಯೋಜನೆಗೆ ಯಾವುದೆಲ್ಲ ಕಂಡಿಶನ್ ಇರಬಹುದು ಎಂಬುದನ್ನು ಸದ್ಯದಲ್ಲಿಯೇ ಸರ್ಕಾರ ಬಹಿರಂಗಪಡಿಸಲಿದೆ.


Previous Post Next Post