ಇದೀಗ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಬಿವೈಪಿಎಲ್ ಸ್ಕಾಲರ್‌ಶಿಪ್ ಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕವನ್ನು ಕೂಡ ನೀಡಿದ್ದಾರೆ. ಈ ಸ್ಕಾಲರ್ಶಿಪ್ ಗೆ ( Scholarship ) ಮಾನವಿಕ ವಿಭಾಗಗಳ ಪದವಿ, ಬಿಇ, ಬಿ.ಟೆಕ್, ಬಿಸಿಎ, ಬಿಎಸ್ಸಿ ಹೀಗೆ ಯಾವುದೇ ಪದವಿಗಳ ಅಂತಿಮ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ಬನ್ನಿ.
ಬಿವೈಪಿಎಲ್ ಸ್ಕಾಲರ್‌ಶಿಪ್ ( BYPL Scholarship ) ನೀಡುತ್ತಿರುವ ಮುಖ್ಯ ಉದ್ದೇಶ :
ಹಿಂದುಳಿದ ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಪರಿಸ್ಥಿಯನ್ನು ಎದುರಿಸದೇ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಪಡೆದುಕೊಳ್ಳಬೇಕು. ಈ ಒಂದು ಉದ್ದೇಶದಿಂದ ಬಿಎಸ್‌ಇಎಸ್ ಯಮುನಾ ಪವರ್ ಲಿಮಿಟೆಡ್ ( BSES Yamuna power Limited ) ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗಾಗಿಯೇ ನೀಡುತ್ತಿದೆ.
ಈ ವಿದ್ಯಾರ್ಥಿ ವೇತನದ ಹೆಸರು ಬಿವೈಪಿಎಲ್ ಸಶಕ್ತ್ ಸ್ಕಾಲರ್‌ಶಿಪ್ ( BYPL Sashakt Scholarship ). ಯಾವುದೇ ಪದವಿ ಕೋರ್ಸ್‌ಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಹಾಗೆಯೇ ಈ ಸ್ಕಾಲರ್ಶಿಪ್ ಗೆ ನೀಡಬೇಕಾದ ದಾಖಲೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ. ಅರ್ಹ ವಿದ್ಯಾಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.
ಬಿವೈಪಿಎಲ್ ಸ್ಕಾಲರ್‌ಶಿಪ್ ನಲ್ಲಿ ನೀಡುವ ವಿದ್ಯಾರ್ಥಿ ವೇತನದ ಮೊತ್ತ :
ಈ ಸ್ಕಾಲರ್ಶಿಪ್ ನಲ್ಲಿ ನೀಡುವ ವಿದ್ಯಾರ್ಥಿವೇತನದ ಹಣಕಾಸು ಸೌಲಭ್ಯ ಒಂದು ವರ್ಷಕ್ಕೆ ರೂ.30,000 ವರೆಗೆ ನೀಡಲಾಗುತ್ತದೆ.
ಹಾಗೆಯೇ ಬಿಇ, ಬಿ.ಟೆಕ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಅಮೆಜಾನ್ ವತಿಯಿಂದ ರೂ.50,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಪ್ರಾಯೋಜನವನ್ನು ಪಡೆದುಕೊಳ್ಳಬೇಕು.
ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆಗಳು ( Qualifications ) :
ಭಾರತೀಯ ಪ್ರಜೆಗಳಾಗಿರಬೇಕು.
ದೆಹಲಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಥಿಗಳು ಯಾವುದೇ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರಬೇಕು.
ಕೊನೆ ಸೆಮಿಸ್ಟರ್ / ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.55 ಅಂಕಗಳನ್ನು ಪಡೆದಿರಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.6,00,000 ಮೀರಿರಬಾರದು.
ಅರ್ಜಿ ಸಲ್ಲಿಸಲು ನೀಡಬೇಕಾದ ಮುಖ್ಯ ದಾಖಲೆಗಳ ( Documents ) ವಿವರ :
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್
- ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ
- ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ
- ಕಾಲೇಜು ಪ್ರವೇಶ ಶುಲ್ಕದ ರಶೀದಿ.
- ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ
ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿಧಾನ ( How to Apply ) :
ಹಂತ 1: ಕೆಳಗಿನ ‘Apply Now’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 2: ‘ಆನ್‌ಲೈನ್ ಅರ್ಜಿ ನಮೂನೆ ಪುಟ’ಕ್ಕೆ ತೆರಳಲು ನೋಂದಾಯಿತ ಐಡಿಯನ್ನು ಬಳಸಿಕೊಂಡು Buddy4Study ಗೆ ಲಾಗಿನ್ ಮಾಡಿ.
ನೋಂದಾಯಿಸದಿದ್ದರೆ – ನಿಮ್ಮ ಇಮೇಲ್/ಮೊಬೈಲ್/ಜಿಮೇಲ್ ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ.
ಹಂತ 3: ಈಗ ನಿಮ್ಮನ್ನು ‘ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2023’ ಅರ್ಜಿ ನಮೂನೆಯ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
ಹಂತ 4: ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ‘ಅಪ್ಲಿಕೇಶನ್ ಪ್ರಾರಂಭಿಸಿ’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಆನ್‌ಲೈನ್ ವಿದ್ಯಾರ್ಥಿವೇತನ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಹಂತ 6: ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ‘ನಿಯಮಗಳು ಮತ್ತು ಷರತ್ತುಗಳನ್ನು’ ಸ್ವೀಕರಿಸಿ ಮತ್ತು ‘ಪೂರ್ವವೀಕ್ಷಣೆ’ ಕ್ಲಿಕ್ ಮಾಡಿ.
ಹಂತ 7: ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ವಿವರಗಳು ಪೂರ್ವವೀಕ್ಷಣೆ ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘ಸಲ್ಲಿಸು’ ಬಟನ್ ಕ್ಲಿಕ್ ಮಾಡಿ.
ಬಿವೈಪಿಎಲ್ ಸ್ಕಾಲರ್‌ಶಿಪ್ಗೆ ಅರ್ಜಿ ಸಲ್ಲಿಸಲು ಸಲ್ಲಿಸಲು ಕೊನೆ ದಿನಾಂಕ (Last Date):
07-01-2024 ಆಗಿದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಆದಷ್ಟು ಬೇಗ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಿ.
Tags:
Scholarship
