ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ! ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ₹20,000 ಸ್ಕಾಲರ್ಶಿಪ್

 ಪದವಿ (degree) ಶಿಕ್ಷಣದಿಂದ ಸ್ನಾತಕೋತ್ತರ (post graduation) ಪದವಿಯವರೆಗೆ ಅಧ್ಯಯನ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನ (Education scholarship) ಘೋಷಿಸಲಾಗಿದೆ.



ದೇಶದಲ್ಲಿ, ಪದವಿ (degree) ಶಿಕ್ಷಣದಿಂದ ಸ್ನಾತಕೋತ್ತರ (post graduation) ಪದವಿಯವರೆಗೆ ಅಧ್ಯಯನ ಮಾಡಲು ಬಯಸುವವರಿಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನ (Education scholarship) ಘೋಷಿಸಲಾಗಿದೆ.

20,000 ವರೆಗೆ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಕೇಂದ್ರ ಸರ್ಕಾರ (Central government) ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ವಿದ್ಯಾರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಬಹುದು.

ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ (Scholarship by central government)

ಶಿಕ್ಷಣ ಸಚಿವಾಲಯ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿದ್ದು, ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ ಗಳ ಅಧ್ಯಯನ ಮಾಡಲು ಬಯಸುವವರು ಆರ್ಥಿಕ ನೆರವು ಪಡೆದುಕೊಳ್ಳಬಹುದು.

ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ವಿದ್ಯಾರ್ಥಿಗಳು ರಾಷ್ಟ್ರೀಯ ವಿದ್ಯಾರ್ಥಿವೇತನ ಆಗಿರುವ https://scholarships.gov.in/ ಭೇಟಿ ನೀಡಿ ಆನ್ಲೈನ್ ಮೂಲಕವೇ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಉನ್ನತ ಶಿಕ್ಷಣ ವಿದ್ಯಾಭ್ಯಾಸಕ್ಕಾಗಿ ಸ್ಕಾಲರ್ಶಿಪ್ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳು! (Eligibilities)

*ವಿದ್ಯಾರ್ಥಿಗಳು ಪದವಿಪೂರ್ವ ಪದವಿ ಅಥವಾ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದಿರಬೇಕು.

*ಕರೆಸ್ಪಾಂಡೆನ್ಸ್ ಕೋರ್ಸ್ (correspondence courses) ಗಳಿಗೆ ವಿದ್ಯಾರ್ಥಿವೇತನ ಲಭ್ಯವಿಲ್ಲ.

*ವಾರ್ಷಿಕ ಆದಾಯ 4.5 ಲಕ್ಷ ರೂಪಾಯಿ ಮೀರಿರಬಾರದು.

*ಹಿಂದಿನ ತರಗತಿಯಲ್ಲಿ 75% ಅಂಕ ಪಡೆದಿರಬೇಕು.

*ಕೇಂದ್ರದ ಈ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ಬೇರೆ ಯಾವುದೇ ವಿದ್ಯಾರ್ಥಿ ವೇತನವನ್ನು ಪಡೆದಿರಬಾರದು. ವಿದ್ಯಾರ್ಥಿ ವೇತನ ಪಡೆಯುತ್ತಿರುವ ವಿದ್ಯಾರ್ಥಿಗಳು ಮತ್ತೆ ಈ ಯೋಜನೆಯಡಿಯಲ್ಲಿ ಆರ್ಥಿಕ ನೆರವು ಪಡೆಯಲು ಸಾಧ್ಯವಿಲ್ಲ.

ವಿದ್ಯಾರ್ಥಿ ವೇತನ ಪಡೆದುಕೊಳ್ಳಲು 18 ರಿಂದ 25 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಬಯಸುವ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಅಶಿಸ್ತಿನ ದೂರು ದಾಖಲಾಗಿರಬಾರದು. ವಿದ್ಯಾರ್ಥಿ ವೇತನ 50% ನಷ್ಟು ವಿದ್ಯಾರ್ಥಿನಿಯರಿಗೆ ಮೀಸಲಾಗಿದೆ. ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ (Bank Account) ಜಮಾ ಮಾಡಲಾಗುತ್ತದೆ

20,000 ವಿದ್ಯಾರ್ಥಿ ವೇತನ (Get Rs 20,000 scholarship)

Education scholarship

ಪದವಿ ಶಿಕ್ಷಣ ಮಾಡುತ್ತಿರುವವರಿಗೆ ಮೂರು ವರ್ಷ ತಲಾ 12 ಸಾವಿರ ರೂಪಾಯಿಗಳಂತೆ ನೀಡಲಾಗುವುದು ಹಾಗೂ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವವರಿಗೆ 20 ಸಾವಿರ ರೂಪಾಯಿಗಳನ್ನು ನೀಡಲಾಗುವುದು.

ವೃತ್ತಿಪರ ಕೋರ್ಸ್ (professional courses) ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಾಲ್ಕು ಮತ್ತು ಐದನೇ ವರ್ಷಕ್ಕೆ 20,000 ರೂ. ಸಿಗಲಿವೆ. ಬಿ ಟೆಕ್ (BTech) ಬಿಇ (BE) ಅಭ್ಯಾಸ ಮಾಡುವವರಿಗೆ ನಾಲ್ಕನೇ ವರ್ಷದಲ್ಲಿ 20 ಸಾವಿರ ರೂಪಾಯಿಗಳನ್ನು ಕೊಡಲಾಗುವುದು.

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸಂಪರ್ಕಿಸಬೇಕಾದ ವಿಳಾಸ! (Contact address)

ದೂರವಾಣಿ ಸಂಖ್ಯೆ; 011, 20862360 ಕರೆ ಮಾಡಿ ಅಥವಾ ಇಮೇಲ್ ಐಡಿ – es3.edu@nic.in.

ವಿಳಾಸ: ಸೆಕ್ಷನ್ ಆಫೀಸರ್, ರಾಷ್ಟ್ರೀಯ ವಿದ್ಯಾರ್ಥಿವೇತನ ವಿಭಾಗ,

ಉನ್ನತ ಶಿಕ್ಷಣ ಇಲಾಖೆ,

ಶಿಕ್ಷಣ ಸಚಿವಾಲಯ,

ವೆಸ್ಟ್ ಬ್ಲಾಕ್ 1, 2 ನೇ ಮಹಡಿ, ವಿಭಾಗ 6,

ಕೊಠಡಿ ಸಂಖ್ಯೆ 6,

ಆರ್.ಕೆ.ಪುರಂ, ಸೆಕ್ಟರ್ 1, ನವದೆಹಲಿ – 110066

Previous Post Next Post