Post Office Jobs: ಅಂಚೆ ಇಲಾಖೆಯಲ್ಲಿ 10th ಪಾಸಾದವರಿಗೆ ಉದ್ಯೋಗ- ತಿಂಗಳಿಗೆ 63,000 ಸಂಬಳ

By SVR Creations

 Post Office Recruitment 2023: ಭಾರತೀಯ ಅಂಚೆ ಇಲಾಖೆ(India Postal Department) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ಸ್ಟಾಫ್ ಕಾರ್​ ಡ್ರೈವರ್(Staff Car Driver) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 30, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಆಸಕ್ತರು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಹಾಕಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಬೇಗನೆ ಅರ್ಜಿ ಹಾಕಿ ಪೋಸ್ಟ್ ಆಫೀಸ್ ಉದ್ಯೋಗ ಪಡೆದುಕೊಳ್ಳಿ.



ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ವಿದ್ಯಾರ್ಹತೆ:

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.

ವಯೋಮಿತಿ:

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 30, 2023ಕ್ಕೆ ಗರಿಷ್ಠ 56 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

8888

ವೇತನ:

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹19,900-63,200 ಸಂಬಳ ಕೊಡಲಾಗುತ್ತದೆ.

ಉದ್ಯೋಗದ ಸ್ಥಳ:

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ

ಆಯ್ಕೆ ಪ್ರಕ್ರಿಯೆ:

ಡ್ರೈವಿಂಗ್ ಲೈಸೆನ್ಸ್​

ಡ್ರೈವಿಂಗ್ ಟೆಸ್ಟ್

ಟ್ರೇಡ್ ಟೆಸ್ಟ್

ಸಂದರ್ಶನ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/10/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 30, 2023

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನಾಳೆಯೊಳಗೆ ಕಳುಹಿಸಬೇಕು.

O/o ಸೀನಿಯರ್ ಮ್ಯಾನೇಜರ್

ಮೇಲ್ ಮೋಟಾರ್ ಸೇವೆ

C-121

ನರೈನಾ ಇಂಡಸ್ಟ್ರಿಯಲ್ ಏರಿಯಾ ಹಂತ-I

ನರೈನಾ

ನವದೆಹಲಿ-110028