ಕರ್ನಾಟಕ ಸರ್ಕಾರಿ ಉದ್ಯೋಗ ಹುಡುಕಾಟದಲ್ಲಿರುವವರಿಗೆ ಇಲ್ಲಿದೆ ಹೊಸ ನೋಟಿಫಿಕೇಶನ್. ರಾಜ್ಯ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೆ ಒಳಪಟ್ಟಿರುವ ಕೆಆರ್‌ಇಡಿಎಲ್ ಕಾನೂನು ಸಲಹೆಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಯ ವಿವರ ಇಲ್ಲಿದೆ.
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು (ಕರ್ನಾಟಕ ಸರ್ಕಾರದ ಸಂಪೂರ್ಣ ಸ್ವಾಮ್ಯಕ್ಕೊಳಪಟ್ಟಿದೆ) ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸಂಸ್ಥೆಯ ಕಾನೂನು ವ್ಯವಹಾರಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ಎರಡು ವರ್ಷದ ಅವಧಿಗೆ ಕಾನೂನು ಸಲಹೆಗಾರರು ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಅರ್ಹತೆಗಳು, ಇತರೆ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.
Overview
ನೇಮಕಾತಿ ಪ್ರಾಧಿಕಾರ : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ
ಹುದ್ದೆ ಹೆಸರು : ಕಾನೂನು ಸಲಹೆಗಾರರು
ಹುದ್ದೆಯ ವಿಧ : ಗುತ್ತಿಗೆ ಆಧಾರಿತ ಹುದ್ದೆ.
ಹುದ್ದೆಗಳ ಸಂಖ್ಯೆ : 01
ನಿಗದಿಪಡಿಸಿದ ಅರ್ಹತೆ
- ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿರಬೇಕು.
- ಸಿವಿಲ್, ಕ್ರಿಮಿನಲ್ , ಲೇಬರ್, ಕಂಪನಿ ಕಾಯ್ದೆ, ವಿದ್ಯುತ್ ಕಾಯ್ದೆ, ವಿದ್ಯುತ್ ಖರೀದಿ ಹಾಗೂ ರೆಗ್ಯೂಲೇಟರಿ ಅಫೇರ್ಸ್ ವಿಷಯಗಳ ಬಗ್ಗೆ ಪರಿಣತಿಯನ್ನು ಹೊಂದಿರಬೇಕು.
- ಕನ್ನಡ ಭಾಷೆ ಅರಿವು ಕಡ್ಡಾಯ.
- ಕರ್ನಾಟಕದವರಿಗೆ ಮೊದಲ ಆಧ್ಯತೆ.
- ಸದರಿ ಅನುಭವಗಳ ಕುರಿತು ಪೂರಕ ದಾಖಲೆಗಳನ್ನು ಸಲ್ಲಿಸತಕ್ಕದ್ದು.
- ಅರ್ಜಿ ಸಲ್ಲಿಸಲು ಬಯಸುವವರು 60 ರಿಂದ 70 ವರ್ಷದೊಳಗಿನವರಾಗಿರಬೇಕು.
ಹುದ್ದೆಯ ಅವಧಿ :
ಕನಿಷ್ಠ ಎರಡು ವರ್ಷಗಳು ಹಾಗೂ ಸದರಿ ಸೇವೆ ತೃಪ್ತಿಕರವಾಗಿದ್ದಲ್ಲಿ ಸೇವೆಯನ್ನು ಪುನಃ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗುವುದು.
ಆಯ್ಕೆ ವಿಧಾನ :
ಸಂದರ್ಶನದ ಮೂಲಕ.
ಮಾಹೆಯಾನ ಕ್ರೋಡೀಕೃತ ಸಂಭಾವನೆ :
ರೂ.65,000.
- ಪ್ರಸ್ತುತ ಪಡೆಯುತ್ತಿರುವ ಪಿಂಚಣಿ ಹಾಗೂ ನಿಗಮದಿಂದ ಪಾವತಿಸಲಾಗುವ ಸಂಭಾವನೆ ಸೇರಿ ನಿವೃತ್ತಿ ಸಮಯದಲ್ಲಿ ಪಡೆಯುತ್ತಿದ್ದ ವೇತನಕ್ಕೆ ಮೀರದಂತೆ ಈ ಸಂಭಾವನೆ ನೀಡಲಾಗುತ್ತದೆ
- ಅರ್ಜಿ ಸಲ್ಲಿಸಲು ಕೊನೆ ದಿನಾಂಕ/ ಸಮಯ : 10-11-2023 ರ ಸಂಜೆ 05-30 ಗಂಟೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ರೂ.500 ಮೊತ್ತವನ್ನು ಡಿಡಿ ಮೂಲಕ 'ಕೆಆರ್‌ಐಡಿಎಲ್, ಬೆಂಗಳೂರು' ಹೆಸರಿನಲ್ಲಿ ಪಾವತಿಸಿ. ನಂತರ https://kredl.karnataka.gov.in ಗೆ ಭೇಟಿ ನೀಡಿ, ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ಭರ್ತಿ ಮಾಡಿದ ಅರ್ಜಿಯೊಂದಿಗೆ, ವಿದ್ಯಾರ್ಹತೆ / ಅನುಭವದ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಸೇರಿಸಿ ಇ-ಮೇಲ್ ವಿಳಾಸ kredlmd@gmail.com ಗೆ ಕಳುಹಿಸಿ. ಅಥವಾ
ಅಂಚೆ ಮೂಲಕ 30 ದಿನಗಳ ಒಳಗಾಗಿ ವಿಳಾಸ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ನಂಬರ್ 06/13/1, 10ನೇ ಬ್ಲಾಕ್, 2ನೇ ಹಂತ, ನಾಗರಭಾವಿ, ಬೆಂಗಳೂರು- 560072 ಗೆ ಕಳುಹಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್: https://kredl.karnataka.gov.in ಗೆ ಭೇಟಿ ನೀಡಲು ಸೂಚಿಸಲಾಗಿದೆ.