ಶೀಘ್ರದಲ್ಲೇ ಗೃಹಲಕ್ಷ್ಮೀ ಯೋಜನೆಯ 3 ನೇ ಕಂತು ಬಿಡುಗಡೆ: 2 ಬಾರಿ ತಪ್ಪಿದವರಿಗೂ ಈ ಬಾರಿ ಹಣ

 ಗೃಹಲಕ್ಷ್ಮೀ ಮೂರನೇ ಕಂತಿನ ಹಣ ಅಕೌಂಡ್‌ಗೆ ಬರೋದು ಯಾವಾಗ ಎಂಬ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ, ಸದ್ಯಕ್ಕೆ ಸಿಗುವ ಉತ್ತರ ಶೀಘ್ರದಲ್ಲೇ ಬರಲಿದೆ ಎಂಬುದು. ಅಲ್ಲದೆ ಕಳೆದ ಎರಡು ಬಾರಿಗಿಂತಲೂ ಈ ಬಾರಿ ಫಳಾನುಭವಿಗಳ ಸಂಖ್ಯೆ ಹೆಚ್ಚು ಇದೆ. ಕೆಲವರ ತಾಂತ್ರಿಕ ದೋಷ ಸರಿಯಾಗಿ ಹೆಸರು ನೋಂದಣಿಯಾಗಿರುವುದರಿಂದ 2 ಬಾರಿ ಮಿಸ್ ಆದವರಿಗೂ ಈ ಬಾರಿ ಗೃಹಲಕ್ಷ್ಮೀ ಹಣ ಬರಲಿದೆ ಎಂಬುದು ಸಂತಸದ ವಿಷಯವಾಗಿದೆ



* ಶೀಘ್ರದಲ್ಲೇ ಜಿಲ್ಲೆಯಲ್ಲಿ 3 ನೇ ಕಂತಿನ ಹಣ ಬಿಡುಗಡೆಯಾಗಲಿದೆ.

* ಕಳೆದ 2 ಕಂತಿನಲ್ಲಿ ಹಣ ಬಾರದ ಫಲಾನುಭವಿಗಳಿಗೆ ಈ ಕಂತಿನಲ್ಲಿ ಹಣ ಬಿಡುಗಡೆಯಾಗಲಿದೆ. ತಾಂತ್ರಿಕ ದೋಷದಿಂದಾಗಿ ಹಣ ಸಂದಾಯವಾಗಿರಲಿಲ್ಲ

* ಈ ತನಕ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿ 2,63,097 ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿದೆ. 31,302 ಫಲಾನುಭವಿಗಳಿಗ ಹಣ ವರ್ಗಾವಣೆಯಾಗಬೇಕಿದೆ.

ಶೀಘ್ರದಲ್ಲೇ ಗೃಹಲಕ್ಷ್ಮೀ ಯೋಜನೆಯ 3ನೇ ಕಂತಿನ ಹಣ ರಾಮನಗರಕ್ಕೆ ಬಿಡುಗಡೆ ಆಗಲಿದೆ. ಈ ಬಾರಿ ಕಳೆದೆರಡು ಕಂತಿಗಿಂತಲೂ ಹೆಚ್ಚಿನ ಫಲಾನುಭವಿಗಳು ಇರುವ ನಿರೀಕ್ಷೆ ಇದೆ

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಮನಗರದ ಉಪನಿರ್ದೇಶಕ(ಪ್ರಭಾರ) ಪ್ರಸನ್ನಕುಮಾರ್‌ ಮಾತನಾಡಿ, ಶೀಘ್ರದಲ್ಲೇ ಜಿಲ್ಲೆಯಲ್ಲಿ 3 ನೇ ಕಂತಿನ ಹಣ ಬಿಡುಗಡೆಯಾಗಲಿದೆ. ಕಳೆದ 2 ಕಂತಿನಲ್ಲಿ ಹಣ ಬಾರದ ಫಲಾನುಭವಿಗಳಿಗೆ ಈ ಕಂತಿನಲ್ಲಿ ಹಣ ಬಿಡುಗಡೆಯಾಗಲಿದೆ. ತಾಂತ್ರಿಕ ದೋಷದಿಂದಾಗಿ ಹಣ ಸಂದಾಯವಾಗಿರಲಿಲ್ಲ ಎಂದು , ಹೇಳಿದ್ದಾರೆ.

ಆದರೆ, ರಾಜ್ಯ ಕಾಂಗ್ರೆಸ್‌ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿಒಂದಾಗಿರುವ ಗೃಹಲಕ್ಷ್ಮೀ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತವರು ಜಿಲ್ಲೆಯಲ್ಲೇ 100% ಗುರಿ ಸಾಧನೆಯಾಗಿಲ್ಲ.

ಕಳೆದ ಆಗಸ್ಟ್‌ ತಿಂಗಳಲ್ಲಿ ರಾಜ್ಯಾದ್ಯಂತ ಸರಕಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿತ್ತು. ಯೋಜನೆ ಜಾರಿಗೆ ಬಂದು 4 ತಿಂಗಳು ಕಳೆದಿದೆ. ಆದರೂ 100% ಗುರಿ ಸಾಧನೆಯಾಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿ ಯೋಜನೆ ಈ ತನಕ 100% ಗುರಿ ಸಾಧಿಸಿಲ್ಲ. ಜಿಲ್ಲಾಮಟ್ಟದಲ್ಲೂ ಇದೇ ಪರಿಸ್ಥಿತಿ ಇದೆ. ಒಟ್ಟಾರೆ, ರಾಮನಗರ ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಈ ತನಕ 89.37% ಮಾತ್ರ ಗುರಿ ಸಾಧಿಸಿದೆ.

ಏನಾಗಿದೆ?

ರಾಜ್ಯ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುವ ಗೃಹಲಕ್ಷ್ಮೀ ಯೋಜನೆ ಈ ತನಕ ಹಲವರಿಗೆ ತಲುಪಿಯೇ ಇಲ್ಲ. ತಾಂತ್ರಿಕ ದೋಷಗಳು ಯೋಜನೆ ಯಶಸ್ವಿಗೆ ಸಾಕಷ್ಟು ಹಿನ್ನಡೆ ಉಂಟು ಮಾಡುತ್ತಿದೆ. ಎಲ್ಲವನ್ನು ಸರಿಪಡಿಸಿ 100% ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ.

ತಾಂತ್ರಿಕ ಸಮಸ್ಯೆಗಳು, ಆಧಾರ್‌ ಕಾರ್ಡ್‌ ಬ್ಯಾಂಕ್‌ಗಳಲ್ಲಿ ಜೋಡಣೆಯಾಗದಿರುವುದು, ರೇಷನ್‌ ಕಾರ್ಡ್‌ನಲ್ಲಿ ಪತಿಯ ಹೆಸರು ಬದಲಾವಣೆಯಾಗಿರುವುದು, ಕಾರ್ಡ್‌ ಮುಖ್ಯಸ್ಥರ ಮರಣ ಸೇರಿದಂತೆ ನಾನಾ ತಾಂತ್ರಿಕ ಸಮಸ್ಯೆಗಳು ಯೋಜನೆಯ ಯಶಸ್ವಿಗೆ ಅಡ್ಡಗಾಲು ಹಾಕಿವೆ.

ಗೃಹಲಕ್ಷ್ಮೀ ಯೋಜನೆಗೆ ರಾಜ್ಯ ಸರಕಾರ ಜಿಲ್ಲೆಯಲ್ಲಿ ಒಟ್ಟು 2,94,399 ಫಲಾನುಭವಿಗಳ ಗುರಿ ನಿಗದಿಪಡಿಸಿದೆ. ಇದರಲ್ಲಿ 69,802 ನಗರ ಪ್ರದೇಶದಲ್ಲಿ, 2,24,597 ಗ್ರಾಮೀಣ ಫಲಾನುಭವಿಗಳನ್ನು ಗುರುತಿಸಿದೆ. ಈ ತನಕ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿ 2,63,097 ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿದೆ. 31,302 ಫಲಾನುಭವಿಗಳಿಗ ಹಣ ವರ್ಗಾವಣೆಯಾಗಬೇಕಿದೆ. ಆದರೆ, ಅಧಿಕಾರಿಗಳು ಮಾತ್ರ ಬಾಕಿ 12 ಸಾವಿರ ಮಂದಿಗೆ ಮಾತ್ರ ಹಣ ನೀಡಬೇಕಿದೆ ಎಂದು ವಾದಿಸುತ್ತಿದ್ದಾರೆ.

2 ಕಂತು:

ಗೃಹಲಕ್ಷ್ಮೀ ಯೋಜನೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿಈ ತನಕ ಒಟ್ಟು 2 ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದೆ. 3ನೇ ಕಂತು ಶೀಘ್ರದಲ್ಲೇ ಎಲ್ಲರ ಖಾತೆಗೆ ಬರಲಿದೆ. ಇನ್ನು ಕಳೆದ 2 ತಿಂಗಳ ಕಂತಿನ ಹಣ ಬಾರದ ಫಲಾನುಭವಿಗಳಿಗೆ ಒಟ್ಟಿಗೆ 3 ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

49.20 ಕೋಟಿ ರೂ. ಬೇಕು:

ಜಿಲ್ಲೆಯಲ್ಲಿಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಯಡಿ ನೋಂದಣಿ ಆಗಿರುವ ಫಲಾನುಭವಿಗಳಿಗೆ 49.20 ಕೋಟಿ ರೂ. ಹಣ ಬೇಕಾಗುತ್ತದೆ. ಇನ್ನು ಬಾಕಿ ಉಳಿದಿರುವ 31 ಸಾವಿರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಬೇಕಾದರೆ, ಮತ್ತಷ್ಟು ಹಣ ಬೇಕಾಗಲಿದೆ.

ಡಿಸಿಎಂ ಭೇಟಿ:

ಗೃಹಲಕ್ಷ್ಮೀ ಯೋಜನೆ ನೋಂದಣಿ ಆರಂಭವಾದ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಕನಕಪುರದ ಕರ್ನಾಟಕ ಒನ್‌ ಸಮಗ್ರ ನಾಗರೀಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ನೋಂದಣಿ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಡಿಸಿಎಂ ದಿಢೀರ್‌ ಭೇಟಿ ನೀಡಿ ಯಾವುದೇ ಸಮಸ್ಯೆಯಾಗದಂತೆ ಸೇವೆ ನೀಡುವಂತೆ ಸಿಬ್ಬಂದಿಗೆ ಸೂಚಿಸಿದ್ದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಹಿನ್ನಡೆ

ಈ ತನಕ ಜಿಲ್ಲೆಯಲ್ಲಿ 89.37% ಗುರಿ ಸಾಧನೆ

ಡಿಸಿಎಂ ಸ್ವಕ್ಷೇತ್ರ ಕನಕಪುರದಲ್ಲಿ 91.97% ನೋಂದಣಿ


Previous Post Next Post