ಕಾಲುದಾರಿ ಪಡೆದುಕೊಳ್ಳುವುದಕ್ಕಾಗಿ ರೈತರು ಹಾಗೂ ಖಾಸಗಿ ಜಮೀನಿನ (Private Property) ಮಾಲೀಕರ ನಡುವೆ ಸಾಕಷ್ಟು ವ್ಯಾಜ್ಯಗಳು ನಡೆಯುತ್ತವೆ.
ಕೃಷಿಕರು (farmers) ತಮ್ಮ ಭೂಮಿಗೆ (Agriculture land) ಅಥವಾ ತಮ್ಮ ಜಮೀನಿಗೆ (Property) ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಹೊಂದಿರುವುದು ಅಗತ್ಯವಾಗಿದೆ
ಕೃಷಿ ಭೂಮಿಗೆ ಬೇಕಾಗಿರುವ ಅಗತ್ಯ ಉಪಕರಣಗಳನ್ನು ಸಾಗಿಸಲು ಮೊದಲಾದ ವಾಹನ (vehicle) ಕೃಷಿ ಭೂಮಿಯವರೆಗೆ (agriculture land) ತಲುಪಲು ಕಾಲು ದಾರಿ (Road), ಬಂಡಿದಾರಿ ಬೇಕಾಗುತ್ತದೆ.
ಈ ಕಾಲುದಾರಿ ಪಡೆದುಕೊಳ್ಳುವುದಕ್ಕಾಗಿ ರೈತರು ಹಾಗೂ ಖಾಸಗಿ ಜಮೀನಿನ (Private Property) ಮಾಲೀಕರ ನಡುವೆ ಸಾಕಷ್ಟು ವ್ಯಾಜ್ಯಗಳು ನಡೆಯುತ್ತವೆ. ತಾವು ಯಾವುದೇ ಕಾರಣಕ್ಕೂ ಕಾಲುದಾರಿ ಬಿಟ್ಟು ಕೊಡುವುದಿಲ್ಲ ಎಂದು ಖಾಸಗಿ ಜಮೀನಿನ ಮಾಲೀಕರು ಹೇಳಿದ್ರೆ ಕೃಷಿಕರು ತಮ್ಮ ಜಮೀನಿಗೆ ಹೋಗಲು ದಾರಿಯಲ್ಲಿದೆ ಪರದಾಡಬೇಕಾಗುತ್ತದೆ.
ಆದರೆ ನೆನಪಿಡಿ ಸರ್ಕಾರದಿಂದ ಕೃಷಿ ಜಮೀನಿಗೆ ಕಾಲುದಾರಿ ನೀಡಲಾಗಿರುತ್ತದೆ, ಹಾಗಾಗಿ ನಿಮ್ಮ ಕೃಷಿ ಭೂಮಿಯ ಸುತ್ತ ಎಲ್ಲಿ ಕಾಲುದಾರಿ ನೀಡಲಾಗಿದೆ ಎಂಬುದನ್ನು ನೀವು ಅಧಿಕೃತವಾಗಿ ತಿಳಿದುಕೊಳ್ಳಲು ಈ ರೀತಿ ಮಾಡಿ.
ಆನ್ಲೈನ್ ಮೂಲಕ ತಿಳಿದುಕೊಳ್ಳಿ ಜಮೀನಿಗೆ ಇರುವ ಕಾಲು ದಾರಿಯ ಬಗ್ಗೆ!
https://www.landrecords.karnataka.gov.in/service3/ ಸರ್ಕಾರದ ಅಧಿಕೃತ ವೆಬ್ಸೈಟ್ (official website)ಗೆ ಭೇಟಿ ನೀಡಿ.
*ಪುಟ ತೆಗೆದುಕೊಳ್ಳುತ್ತಿದ್ದಂತೆ ಮೇಲ್ಭಾಗದಲ್ಲಿ ನಿಮ್ಮ ಜಿಲ್ಲೆ (district) ಹೋಬಳಿ ನಕ್ಷೆಯ ಪ್ರಕಾರ ದಾಖಲೆಗಳನ್ನು ಎಂಟರ್ ಮಾಡಬೇಕು.
*ನಂತರ ನಿಮ್ಮ ಜಿಲ್ಲಾ ತಾಲೂಕು ಹೋಬಳಿ ಮೊದಲಾದ ಹೆಸರುಗಳನ್ನು ನಮೂದಿಸಬೇಕು.
*ಹೋಬಳಿ ಅಡಿಯಲ್ಲಿ ಎಲ್ಲಾ ಊರುಗಳ ಹೆಸರುಗಳನ್ನು ತೋರಿಸಲಾಗುತ್ತದೆ, ನೀವು ಅದರ ಮೇಲೆ ಕ್ಲಿಕ್ ಮಾಡಿದರೆ ಒಂದು ಫೈಲ್ ಡೌನ್ಲೋಡ್ (file download) ಆಗುತ್ತದೆ.
ಈಗ ಡೌನ್ಲೋಡ್ ಆಗಿರುವ ಫೈಲ್ ತೆರೆದು ನೋಡಿದರೆ ಹಳದಿ ಬಣ್ಣದ ಗೆರೆ (yellow line) ಕಾಣಿಸಿದರೆ ಅದು ನಿಮ್ಮ ಜಮೀನಿಗಾಗಿ ಸರ್ಕಾರ ಬಿಟ್ಟಿರುವ ಕಾಲುದಾರಿಯಾಗಿರುತ್ತದೆ. ಈ ನಕ್ಷೆಯ ಮೂಲಕ ನೀವು ಸುಲಭವಾಗಿ ನಿಮ್ಮ ಜಮೀನಿನ ಸುತ್ತ ನಿಮ್ಮ ಜಮೀನಿಗೆ ಹೋಗಲು ಎಲ್ಲಿ ಕಾಲುದಾರಿ ಅಥವಾ ಬಂಡಿದಾರಿ ಇದೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
ಇನ್ನು ಸರ್ಕಾರ ಈಗಾಗಲೇ ತಿಳಿಸಿರುವಂತೆ ಯಾವುದೇ ರೈತ ತನ್ನ ಜಮೀನಿಗೆ ಹೋಗಲು ಕಾಲುದಾರಿ ಇಲ್ಲದೆ ಇರುವ ಸಂದರ್ಭದಲ್ಲಿ ಅದನ್ನು ತಕ್ಷಣವೇ ತಹಶಿಲ್ದಾರರು ಹಾಗೂ ಪೊಲೀಸರಿಗೆ ತಿಳಿಸಿ ಅವರ ಸಹಾಯದಿಂದ ಯಾವುದೇ ವ್ಯಾಜ್ಯವು ಇಲ್ಲದೆ ತಮ್ಮ ಜಮೀನಿಗೆ ಖಾಸಗಿ ಜಮೀನಿನ (Private Property) ಮೂಲಕ ಹೋಗಲು ಕಾಲುದಾರಿ ನಿರ್ಮಿಸಿ ಕೊಳ್ಳಬಹುದು.
