ಇಂತವರ ಖಾತೆಗೆ ಬರಲಿದೆ ಉಚಿತ 3000 ರೂಪಾಯಿ! ಸರ್ಕಾರದಿಂದ ಹೊಸ ಯೋಜನೆ ಘೋಷಣೆ

5ನೇ ಯೋಜನೆಯಾಗಿರುವ ಯುವ ನಿಧಿ (Yuva Nidhi Scheme) ಗ್ಯಾರಂಟಿ ಯೋಜನೆ ಯಾವಾಗ ಆರಂಭವಾಗಬಹುದು ಎಂದು ಯುವಕರು ಕುತೂಹಲದಿಂದ ಕಾದು ಕುಳಿತಿದ್ದಾರೆ



ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ತಮ್ಮ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದ್ದ ಗ್ಯಾರಂಟಿ ಯೋಜನೆಗಳನ್ನು (guarantee schemes) ಮಾತಿನಂತೆ ಒಂದೊಂದಾಗಿ ಜಾರಿಗೆ ತಂದಿದೆ

ಈಗಾಗಲೇ ನಾಲ್ಕು ಯೋಜನೆಗಳು ಜಾರಿಗೆ ಬಂದಿದ್ದು, ಎಲ್ಲವೂ ಯಶಸ್ಸು ಕಂಡಿವೆ. ಇನ್ನು 5ನೇ ಯೋಜನೆಯಾಗಿರುವ ಯುವ ನಿಧಿ (Yuva Nidhi Scheme) ಗ್ಯಾರಂಟಿ ಯೋಜನೆ ಯಾವಾಗ ಆರಂಭವಾಗಬಹುದು ಎಂದು ಯುವಕರು ಕುತೂಹಲದಿಂದ ಕಾದು ಕುಳಿತಿದ್ದಾರೆ ,ಇದಕ್ಕೆ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ಉತ್ತರ ನೀಡಿದ್ದಾರೆ.

ಯಾವಾಗಿಂದ ಆರಂಭ ಯುವ ನಿಧಿ ಯೋಜನೆ?

ಮೈಸೂರು ದಸರಾ (Mysore Dasara) ಉದ್ಘಾಟನೆಯ ಸಮಯದಲ್ಲಿ ಈ ಬಗ್ಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಹಿತಿ ಬಹಿರಂಗಗೊಳಿಸಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿರುವ ಪ್ರಕಾರ 2024 ಜನವರಿ ತಿಂಗಳಿನಿಂದ ಯುವ ನಿಧಿ ಯೋಜನೆಗೆ ಚಾಲನೆ ನೀಡಲಾಗುವುದು, ಈ ಮೂಲಕ ನಿರುದ್ಯೋಗ ಭತ್ಯೆ ಯನ್ನು ಅಗತ್ಯ ಇರುವವರಿಗೆ ನೀಡಲಾಗುವುದು.

ಯಾರಿಗೆ ಸಿಗಲಿದೆ ನಿರುದ್ಯೋಗ ಭತ್ಯೆ?

ಯುವ ನಿಧಿ ಯೋಜನೆ (Yuva Nidhi Yojana) ಅಂದ್ರೆ ನಿರುದ್ಯೋಗಿಗಳಿಗೆ (unemployed) ಆರ್ಥಿಕವಾಗಿ ಸಹಾಯ ಮಾಡುವುದು. 2022 23ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮಾ (diploma) ತೇರ್ಗಡೆ ಹೊಂದಿದ್ದು ಇನ್ನೂ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವಂತಹ ವಿದ್ಯಾರ್ಥಿಗಳಿಗೆ ಯುವ ನಿಧಿ ಯೋಜನೆಯ ಪ್ರಯೋಜನ ಸಿಗಲಿದೆ.

ಪದವಿಯಲ್ಲಿ (Degree) ಪಾಸಾಗಿ ಕೆಲಸ ಹುಡುಕುತ್ತಿರುವವರಿಗೆ ಎರಡು ವರ್ಷಗಳ ಕಾಲ ರೂ. 3000 ಪ್ರತಿ ತಿಂಗಳಿಗೆ, ಹಾಗೂ ಡಿಪ್ಲೋಮಾ ಕೋರ್ಸ್ ಮುಗಿಸಿ ಕೆಲಸಕ್ಕಾಗಿ ಹುಡುಕಾಡುತ್ತಿರುವ ಯುವಕ ಯುವತಿಯರಿಗೆ 1,500 ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳ ಕಾಲ ಸರ್ಕಾರ ನೀಡಲಿದೆ.

ಮುಂಬರುವ ದಿನಗಳಲ್ಲಿ ಅಂದರೆ ಜನವರಿ ತಿಂಗಳಿನಿಂದ ಯುವ ನಿಧಿ ಯೋಜನೆಯ ಹಣವನ್ನು ಫಲಾನುಭವಿ ಯುವಕ ಯುವತಿಯರ ಖಾತೆಗೆ (Bank Account) ನೇರವಾಗಿ ವರ್ಗಾವಣೆ ಮಾಡಲಾಗುವುದು

ಅವರಿಗೆ ಉದ್ಯೋಗ (job) ಸಿಗುವವರೆಗೆ ಅಂದರೆ ಎರಡು ವರ್ಷಗಳ ಕಾಲ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು, ಸರ್ಕಾರದಿಂದ ಸಿಗುವ ನಿರುದ್ಯೋಗ ಭತ್ಯೆ ಬಳಸಿಕೊಂಡು ಯುವಕ ಯುವತಿಯರು ಆದಷ್ಟು ಬೇಗ ಕೆಲಸ ಹುಡುಕಿಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶ.

ಒಟ್ಟಿದ್ದಲ್ಲಿ 5ನೇ ಗ್ಯಾರಂಟಿ ಯೋಜನೆ ಯಾವಾಗ ಆರಂಭವಾಗಬಹುದು ಎಂದು ಕಾದು ಕುಳಿತವರಿಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ನೀಡಿದ್ದಾರೆ.



Previous Post Next Post