Indian Navy SSC Recruitment: ನೌಕಾದಳದಲ್ಲಿ ಖಾಲಿ ಇರುವ 224 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

 ಭಾರತೀಯ ನೌಕಾದಳಕ್ಕೆ ಸೇರಿ ದೇಶ ಸೇವೆ ಮಾಡಬೇಕು ಎಂದುಕೊಂಡಿರುವವರಿಗೆ ಗುಡ್‌ನ್ಯೂಸ್‌. ಭಾರತೀಯ ನೌಕಾದಳ ಖಾಲಿ ಇರುವ ಜನರಲ್ ಸರ್ವೀಸ್, ಏರ್​ ಟ್ರಾಫಿಕ್ ಕಂಟ್ರೋಲರ್, ನೇವಲ್ ಏರ್ ಆಪರೇಶನ್ಸ್​ ಆಫೀಸರ್ ಸೇರಿ 224 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Indian Navy SSC Recruitment). ಶಾರ್ಟ್​ ಸರ್ವೀಸ್​ ಕಮಿಷನ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಆನ್​​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. SSC Officers Entry ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಅಕ್ಟೋಬರ್ 29.



ಹುದ್ದೆ ಮತ್ತು ಶೈಕ್ಷಣಿಕ ಅರ್ಹತೆಗಳ ಮಾಹಿತಿ

  • ಜನರಲ್ ಸರ್ವೀಸ್- 40 ಹುದ್ದೆ-ವಿದ್ಯಾರ್ಹತೆ: ಬಿಇ/ಬಿ.ಟೆಕ್
  • ಏರ್​ ಟ್ರಾಫಿಕ್ ಕಂಟ್ರೋಲರ್ (ATC)- 66 ಹುದ್ದೆ-ವಿದ್ಯಾರ್ಹತೆ: ಬಿಇ/ಬಿ.ಟೆಕ್
  • ನೇವಲ್ ಏರ್ ಆಪರೇಶನ್ಸ್​ ಆಫೀಸರ್- 66 ಹುದ್ದೆ-ವಿದ್ಯಾರ್ಹತೆ: ಬಿಇ/ ಬಿ.ಟೆಕ್
  • ಪೈಲಟ್- 66 ಹುದ್ದೆ-ವಿದ್ಯಾರ್ಹತೆ: ಬಿಇ/ಬಿ.ಟೆಕ್
  • ಲಾಜಿಸ್ಟಿಕ್ಸ್​- 66 ಹುದ್ದೆ-ವಿದ್ಯಾರ್ಹತೆ: ಬಿ.ಕಾಂ, ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂಸಿಎ, ಎಂ.ಎಸ್ಸಿ
  • ಎಜುಕೇಶನ್- 18 ಹುದ್ದೆ-ವಿದ್ಯಾರ್ಹತೆ: ಬಿಇ/ಬಿ.ಟೆಕ್, ಎಂ.ಟೆಕ್, ಎಂ.ಎಸ್ಸಿ
  • ಎಂಜಿನಿಯರ್ ಬ್ರ್ಯಾಂಚ್‌ (ಜನರಲ್ ಸರ್ವೀಸ್- ಜಿಎಸ್)- 30 ಹುದ್ದೆ-ವಿದ್ಯಾರ್ಹತೆ: ಬಿಇ/ಬಿ.ಟೆಕ್
  • ಎಲೆಕ್ಟ್ರಿಕಲ್ ಬ್ರ್ಯಾಂಚ್‌ (ಜನರಲ್ ಸರ್ವೀಸ್- ಜಿಎಸ್)- 50 ಹುದ್ದೆ-ವಿದ್ಯಾರ್ಹತೆ: ಬಿಇ/ ಬಿ.ಟೆಕ್
  • ನೇವಲ್ ಕನ್​ಸ್ಟ್ರಕ್ಟರ್- 20 ಹುದ್ದೆ-ವಿದ್ಯಾರ್ಹತೆ: ಬಿಇ/ ಬಿ.ಟೆಕ್

ಅರ್ಜಿ ಶುಲ್ಕ ಮತ್ತು ವೇತನದ ವಿವರ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 56,100 ರೂ. ದೊರೆಯಲಿದೆ. ಭಾರತದ ಎಲ್ಲಿ ಬೇಕಾದರೂ ಉದ್ಯೋಗ ನಿರ್ವಹಿಸಲು ತಯಾರಿರುವವರು ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ

ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ, ಮೆಡಿಕಲ್ ಟೆಸ್ಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
  • ಆಗ ತೆರೆದುಕೊಳ್ಳುವ ಹೋಮ್‌ಪೇಜ್‌ನಲ್ಲಿ “Register” ಆಯ್ಕೆಯನ್ನು ಸೆಲೆಕ್ಟ್‌ ಮಾಡಿ
  • ಅಗತ್ಯವಿರುವ ಮಾಹಿತಿಯೊಂದಿಗೆ ಯಶಸ್ವಿಯಾಗಿ ಹೆಸರನ್ನು ನೋಂದಾಯಿಸಿ ಮತ್ತು ಲಾಗ್ ಇನ್ ಆಗಿ.
  • ಅಗತ್ಯವಾದ ಎಲ್ಲಾ ಮಾಹಿತಿಗಳೊಂದಿಗೆ SSC Officers Entry ಅರ್ಜಿ ತುಂಬಿ
  • ಬಿಇ/ ಬಿ.ಟೆಕ್‌ ಕೋರ್ಸ್‌ನ 5 ಮತ್ತು 7ನೇ ಸೆಮಿಸ್ಟರ್‌ ಸರ್ಟಿಫಿಕೆಟ್‌, ಎಸ್ಸೆಸ್ಸೆಲ್ಸಿ ಪ್ರಮಾಣ ಪತ್ರದಲ್ಲಿರುವಂತೆ ಬರ್ತ್‌ ಸರ್ಟಿಫಿಕೆಟ್‌, ಇತ್ತೀಚಿನ ಕಲರ್‌ ಫೋಟೊ ಅಪ್‌ಲೋಡ್‌ ಮಾಡಬೇಕು.
  • ಎಲ್ಲವೂ ಸರಿಯಾಗಿದೆ ಎನ್ನುವುದನ್ನು ಪರಿಶೀಲಿಸಿ “Submit” ಬಟನ್‌ ಕ್ಲಿಕ್‌ ಮಾಡಿ
  • ಭವಿಷ್ಯದ ಅಗತ್ಯಗಳಿಗಾಗಿ ಅರ್ಜಿಯ ಪ್ರಿಂಟ್‌ ಔಟ್‌ ತೆಗೆದಿಡಿ

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಭಾರತೀಯ ನೌಕಾದಳದ ಅಧಿಕೃತ ವೆಬ್​ ಸೈಟ್:- www.indiannavy.nic.inಗೆ ಭೇಟಿ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ

Previous Post Next Post