ನಿಮಗಿನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲವೆ? | ಇಲ್ಲಿವೆ 8 ಕಾರಣಗಳು | Gruhalahakshmi Scheme

 ಈ ಎಂಟು ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿ ಹಣ ಅನೇಕ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಎಂಬುವುದು ಪತ್ತೆಯಾಗಿದೆ. ಹಾಗಿದ್ದರೆ ಯಾವೆಲ್ಲ ಕಾರಣಗಳಿಂದ ಹಣ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ…



ಗೃಹಲಕ್ಷ್ಮಿ ಯೋಜನೆ ಹಣ ಸಂದಾಯವಾಗದ ಫಲಾನಭವಿಗಳ ಪರದಾಟ ದಿನೇ ದಿನೆ ಹೆಚ್ಚಾಗುತ್ತಿದೆ. ಯೋಜನೆ ಆರಂಭಗೊ೦ಡು ಎರಡು ತಿಂಗಳು ಕಳೆದಿದ್ದರೂ ತಾಂತ್ರಿಕ ಕಾರಣಗಳಿಂದ (Technical reason) ಇನ್ನೂ ಲಕ್ಷಾಂತರ ‘ಯಜಮಾನಿ’ಯರಿಗೆ ಹಣ ತಲುಪಿಲ್ಲ. ತಮಗೆ ಹಣ ಸಿಗುತ್ತೋ ಇಲ್ಲವೋ ಎಂದು ಮಹಿಳೆಯರು ಚಿಂತೆಗೀಡಾಗಿದ್ದಾರೆ. ನಿತ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Department of Women and Child Development) ಕಚೇರಿಗೆ ಹೋಗಿ ವಿಚಾರಿಸುತ್ತಿದ್ದಾರೆ. ಸಿಡಿಪಿಒ (CDPO) ಮೊಬೈಲ್, ಕಚೇರಿ ದೂರವಾಣಿಗೆ ಕರೆ ಮಾಡುತ್ತಿದ್ದಾರೆ. ಬ್ಯಾಂಕ್‌ಗಳಿಗೆ ಹೋಗಿ ಪರಿಶೀಲಿಸಿಕೊಳ್ಳುತ್ತಿದ್ದಾರೆ. ಆದರೆ, ಹಣ ಜಮೆಯಾಗದ ವಿಷಯ ತಿಳಿದು ಆತಂಕದಿ೦ದ ಹಿಂತಿರುಗುತ್ತಿದ್ದಾರೆ.

ಹಲವರು ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ (Aadhar Number Linking) ಮಾಡಿಕೊಂಡಿಲ್ಲ. ಇನ್ನು ಕೆಲವರು ಪಡಿತರ ಚೀಟಿಯಲ್ಲಿ ಹೆಸರು ಸರಿಪಡಿಸಿಕೊಂಡಿಲ್ಲ. ಹಲವರದ್ದು ಬ್ಯಾಂಕ್ ಖಾತೆ ಸಕ್ರಿಯವಾಗಿಲ್ಲ (Bank account not active). ಇಲ್ಲವೇ ಹೆಸರು ತಪ್ಪಾಗಿರುತ್ತದೆ. ಕೆಲವರಿಗೆ ಹಣ ಬಂದಿದ್ದರೂ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮಾಹಿತಿ ನೀಡಿ ಎಲ್ಲಾ ಅರ್ಹ ಫಲಾನುಭವಿಗಳಿಗೂ (beneficiaries) ಯೋಜನೆಯ ಲಾಭ ದೊರಕಿಸಿಕೊಡಲು ಶ್ರಮಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಬಿಡುಗಡೆಯಾದ ಹಣವೆಷ್ಟು?

ಈ ವರೆಗೆ ರಾಜ್ಯದಲ್ಲಿ 1.8 ಕೋಟಿ ಮಹಿಳೆಯರು ‘ಗೃಹಲಕ್ಷ್ಮಿ’ಯ ₹2 ಸಾವಿರಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಅವರಲ್ಲಿ ನಿಗದಿತ ಸಮಯಕ್ಕೆ ನೋಂದಣಿ ಮಾಡಿಕೊಂಡ ಫಲಾನುಭವಿಗಳಿಗೆ 2,169 ಕೋಟಿ ರೂಪಾಯಿ ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿತ್ತು. ಸೆಪ್ಟಂಬರ್ ತಿಂಗಳಲ್ಲಿ 1.14 ಲಕ್ಷ ಫಲಾನುಭವಿಗಳಿಗೆ 2,280 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ. ಅಕ್ಟೋಬರ್ 4ರ ವರೆಗೆ 93 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ (bank account) ತಲಾ 2,000 ರೂಪಾಯಿ ಯಶಸ್ವಿಯಾಗಿ ವರ್ಗಾಯಿಸಲಾಗಿದೆ. 5.5 ಲಕ್ಷ ಫಲಾನುಭವಿಗಳ ಮಾಹಿತಿ ಪರಿಶೀಲಿಸಿ ಡಿಬಿಟಿ (DBT) ಮೂಲಕ ಹಣ ಪಾವತಿಸಲು ಕ್ರಮ ಕೈಗೊಂಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದರು.

ಸಚಿವರು ನೀಡಿರುವ ಮಾಹಿತಿ ಪ್ರಕಾರ ಇದುವರೆಗೂ 9.44 ಲಕ್ಷ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲ. ಇದಕ್ಕೆ ಮೂಲ ಕಾರಣವೇನೆಂದು ನೋಡಲು ಹೋದರೆ, ಅರ್ಜಿ ಸಲ್ಲಿಸುವಾಗ ಫಲಾನುಭವಿಗಳು ನೀಡಿರುವ ಬ್ಯಾಂಕ್ ಖಾತೆಗಳು ನಿಷ್ಕ್ರೀಯವಾಗಿರುವುದು, ಕೆವೈಸಿ (kyc) ಪರಿಶೀಲನೆ ಆಗದಿರುವುದು, ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಆಗಿಲ್ಲದಿರುವುದು ಸೇರಿದಂತೆ ಅನೇಕ ತಾಂತ್ರಿಕ ಕಾರಣಗಳಿಂದಾಗಿ ಈ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ.

ಹಣ ಬಾರದಿರಲು 8 ಕಾರಣಗಳು

ಕಾರಣ 1: ಅನೇಕ ಫಲಾನುಭವಿ ಮಹಿಳೆಯರು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ (Linking of Aadhaar to Bank Account) ಮಾಡಿಲ್ಲ. ಇಂತಹ 2,17,536 ಫಲಾನುಭವಿಗಳ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಯಶಸ್ವಿಯಾಗಿ ಜೋಡಿಸಲಾಗಿದೆ. ಉಳಿದ ಫಲಾನುಭವಿಗಳಿಗೂ ಸಿಡಿಪಿಒ ಮಾಹಿತಿ ನೀಡಿ ಆಧಾರ್ ಫೀಡ್ (Aadhaar Feed) ಮಾಡಿಸಲು ಕ್ರಮ ವಹಿಸಲಾಗಿದೆ.

ಕಾರಣ-2: ಕೆಲವರು ಒಂದಕ್ಕಿ೦ತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ. ಈ ಪೈಕಿ ಯಾವ ಖಾತೆಗೆ ಆಧಾರ್ ಯಶಸ್ವಿಯಾಗಿ ಜೋಡಣೆಯಾಗಿದೆ ಎಂಬುವುದು ತಿಳಿದಿಲ್ಲ. ಒಂದಕ್ಕಿ೦ತ ಹೆಚ್ಚು ಖಾತೆ ಹೊಂದಿದ್ದು, ಆ ಖಾತೆಯ ಮೊತ್ತ ಪರಿಶೀಲನೆ ಮಾಡದಿರುವುದರಿಂದ ಹಣ ಜಮಾ (Money deposit) ಆದ ಮಾಹಿತಿ ಸಿಕ್ಕಿಲ್ಲ.

ಕಾರಣ-3: ಹೀಗೆ ಬೇರೆ ಬೇರೆ ಬ್ಯಾಂಕ್ ಖಾತೆ ಹೊಂದಿರುವ ಕೆಲವು ಮಹಿಳೆಯರು ಆಧಾರ್ ಜೋಡಣೆ ಆಗಿರುವ ಖಾತೆ ಬಿಟ್ಟು, ಬೇರೊಂದು ಬ್ಯಾಂಕ್ ಖಾತೆಯನ್ನು ನೋಂದಣಿ ವೇಳೆ ನೀಡಿರುವುದರಿಂದ ಇಂಥವರಿಗೆ ಹಣ ಜಮೆಯಾಗಿಲ್ಲ.

ಕಾರಣ-4: 5,96,268 ಫಲಾನುಭವಿಗಳ ಕೆವೈಸಿ ಸಮಸ್ಯೆ (KYC problem) ಎದುರಾಗಿದೆ. ಅಂದರೆ ಇವರ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸದಿರುವುದರಿಂದಲೂ ಸರಳವಾಗಿ ಹಣ ವರ್ಗಾವಣೆಯಾಗಿಲ್ಲ.

ಕಾರಣ-5: ನೋಂದಣಿ ವೇಳೆ ನೀಡಿದ ರೇಷನ್ ಕಾರ್ಡ್’ನಲ್ಲಿ (Ration Card) ಫಲಾನುಭವಿ ಮಹಿಳೆಯೇ ಕುಟುಂಬದ ಯಜಮಾನಿ (Mistress of the family) ಸ್ಥಾನದಲ್ಲಿರಬೇಕಾದುದು ಕಡ್ಡಾಯ. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಪಡಿತರ ಚೀಟಿಯಲ್ಲಿ ಯಜಮಾನಿಯರ ಹೆಸರು ಎಲ್ಲರಿಗಿಂತ ಮೊದಲು ಇಲ್ಲದಿರುವುದರಿಂದ ಅಂಥವರಿಗೆ ಹಣ ಹೋಗಿಲ್ಲ.

ಕಾರಣ-6: ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುವುದಕ್ಕಾಗಿ ಅನೇಕ ಮಹಿಳೆಯರು ತಪ್ಪು ವಿಳಾಸಗಳನ್ನು (Wrong address) ನೀಡಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ 1,75,683 ಫಲಾನುಭವಿಗಳ ಹೆಸರು ಮತ್ತು ವಿಳಾಸ ವ್ಯತ್ಯಾಸವಾಗಿದೆ. ನೋಂದಣಿ ವೇಳೆ ನೀಡಿದ ಹೆಸರಿಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರಿಗೂ ಹೊಂದಾಣಿಕೆ ಆಗದಿರುವುದರಿಂದ ಇವರ ಹಣವನ್ನು ಪ್ರಿಜ್ ಮಾಡಲಾಗಿದೆ.

ಕಾರಣ-7: ಕೆಲವರ ಸಮಸ್ಯೆ ಏನೆಂದರೆ ತಾವು ನೋಂದಣಿ ವೇಳೆ ನೀಡಿದ ಖಾತೆಯನ್ನು ಪರಿಶೀಲಿಸುವ ಬದಲು ಇನ್ನಾವುದೋ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ (Balance check) ಮಾಡುತ್ತಿದ್ದಾರೆ. ಕೆಲವರ ಖಾತೆಗೆ ಹಣ ಬಂದಿದ್ದರೂ ಮೊಬೈಲ್‌ಗೆ ಸಂದೇಶ ಬಂದಿಲ್ಲವಾದ್ದರಿ೦ದ ತಮಗೆ ಹಣ ಬಂದಿಲ್ಲವೆ೦ದು ನಿರ್ಧರಿಸಿ ಪರದಾಡುತ್ತಿದ್ದಾರೆ.

ಕಾರಣ-8: ಬ್ಯಾಂಕ್ ಖಾತೆಯ ವಿವರ ನೀಡಿ ಯಾವುದೋ ಸಾಲ ಪಡೆದ ಹಲವು ಫಲಾನುಭವಿಗಳ ಹಣ ತಕ್ಷಣಕ್ಕೆ ಸಾಲಕ್ಕೆ ಜಮಾ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಇವರಿಗೆ ಯೋಜನೆಯ ಹಣ ಬಂದ ಮಾಹಿತಿ ಸಿಕ್ಕಿಲ್ಲ. ಹಣ ಬಂದಿಲ್ಲವೆ೦ದೇ ಭಾವಿಸಿಕೊಂಡಿದ್ದಾರೆ.

ಮೇಲ್ಕಾಣಿಸಿದ ಈ ಎಂಟು ಕಾರಣಗಳ (8 reasons) ಜತೆಗೆ ಕೆಲವು ಪ್ರಕರಣಗಳಲ್ಲಿ ಬೇರೆ ರೀತಿಯ ತಾಂತ್ರಿಕ ದೋಷಗಳಿಂದಾಗಿ ಯೋಜನೆಯ ಹಣ ತಲುಪಿಲ್ಲ. ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಚೆಗೆ ಮಾಹಿತಿ ನೀಡಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೂಡ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿತ್ತು. ‘ಗೃಹಲಕ್ಷ್ಮಿ’ ಯೋಜನೆಯ (Ghrilakshmi scheme) ಹಣ ಬಾರದೇ ಇರುವವರು ಈ 8 ಕಾರಣಗಳನ್ನು ಕೂಲಂಕುಶವಾಗಿ ಪರಿಶೀಲಿಸಿ, ಸರಿಪಡಿಸಿಕೊಂಡರೆ ಅವರಿಗೂ ಹಣ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.

Previous Post Next Post