ಪ್ರತಿ ತಿಂಗಳು ಸಾವಿರಾರು ರೂಪಾಯಿಗಳವರೆಗೆ ಬಿಲ್ (Electricity Bill) ಪಾವತಿ ಮಾಡುತ್ತಿರುವವರು ಕೂಡ ಇಂದು ಉಚಿತ ವಿದ್ಯುತ್ (free electricity) ಪಡೆದುಕೊಳ್ಳುವ ಹಾಗೆ ಆಗಿದೆ
ಗೃಹಜ್ಯೋತಿ ಯೋಜನೆ (Gruha jyothi scheme) ಅಡಿ ಉಚಿತವಾಗಿ ವಿದ್ಯುತ್ (free electricity) ಪಡೆದುಕೊಳ್ಳುತ್ತಿರುವ ಲಕ್ಷಾಂತರ ಕುಟುಂಬಗಳು ಇಂದು ವಿದ್ಯುತ್ ಪಾವತಿ ಮಾಡುವ ಸಂಕಷ್ಟ ಇಲ್ಲದೆ ನೆಮ್ಮದಿಯಾಗಿವೆ.
ಪ್ರತಿ ತಿಂಗಳು ಸಾವಿರಾರು ರೂಪಾಯಿಗಳವರೆಗೆ ಬಿಲ್ (Electricity Bill) ಪಾವತಿ ಮಾಡುತ್ತಿರುವವರು ಕೂಡ ಇಂದು ಉಚಿತ ವಿದ್ಯುತ್ (free electricity) ಪಡೆದುಕೊಳ್ಳುವ ಹಾಗೆ ಆಗಿದೆ. ಮನೆಯ ಮಾಲೀಕರು ಮಾತ್ರವಲ್ಲದೇ ಬಾಡಿಗೆದಾರರು ಕೂಡ ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಬಹುದು.
ಆದರೆ ಇದೀಗ ರಾಜ್ಯದ ಜನತೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿದ್ಯುತ್ ಬಿಲ್ ಉಚಿತವಾಗಿ ಏನೋ ಸಿಗುತ್ತದೆ, ಆದರೆ ಸರ್ಕಾರದ ಈ ಹೊಸ ಆದೇಶದಿಂದ ಜನರಿಗೆ ಮತ್ತೊಂದು ಸಮಸ್ಯೆ ಎದುರಿಸುವಂತಾಗಿದೆ.
ಲೋಡ್ ಶೆಡ್ಡಿಂಗ್ ಭೀತಿ? (Load shedding)
ಹೌದು ಉಚಿತ ಗ್ಯಾರಂಟಿ ಯೋಜನೆಯ ಖುಷಿಯಲ್ಲಿರುವ ರಾಜ್ಯದ ಜನತೆಗೆ ಸಂಕಷ್ಟ ನೀಡುವಂತಹ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಈ ಬಾರಿ ರಾಜ್ಯದ ಹಲವೆಡೆ ಮಳೆಯ ಅಭಾವ ಉಂಟಾಗಿದೆ.
ಮಳೆ ಬರದೆ ಇದ್ದರೆ ಬೆಳೆ ನಷ್ಟ ಮಾತ್ರವಲ್ಲದೆ ವಿದ್ಯುತ್ ಅನ್ನು ಕೂಡ ಅಗತ್ಯವಿದ್ದಷ್ಟು ತಯಾರಿಕೆ ಮಾಡಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್ ಬಳಕೆ ಕೂಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಒಂದನ್ನು ಕೈಗೊಳ್ಳಲಿದ್ದು ಇದರಿಂದ ರಾಜ್ಯದ ಜನತೆಗೆ ಸಾಕಷ್ಟು ತೊಂದರೆ ಆಗಬಹುದು.
ಅಕ್ಟೋಬರ್ ತಿಂಗಳಿನಿಂದಲೇ ಪ್ರಾರಂಭ ಲೋಡ್ ಶೆಡ್ಡಿಂಗ್!
ನಮ್ಮಲ್ಲಿ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಆದರೆ ಜನರ ಬೇಡಿಕೆಯನ್ನು ಈಡೇರಿಸುವಷ್ಟು ವಿದ್ಯುತ್ ತಯಾರಿಕೆ ಆಗುತ್ತಿಲ್ಲ. ಹಿಂದಿನ ವರ್ಷಕ್ಕಿಂತ ಈ ಬಾರಿ ಶೇಕಡ 20% ನಷ್ಟು ವಿದ್ಯುತ್ ಬಳಕೆ ಹೆಚ್ಚಾಗಿದೆ. ಇದರಿಂದಾಗಿ ಲೋಡ್ ಶೆಡ್ಡಿಂಗ್ ಅಸ್ತ್ರವನ್ನು ಸರ್ಕಾರ ಪ್ರಯೋಗಿಸುತ್ತಿದೆ.
ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಸಮಸ್ಯೆ ಶುರುವಾಗಿದೆ. ಸರಿಯಾಗಿ ಮಳೆ ಬಾರದೇ ಇರುವ ಹಿನ್ನೆಲೆಯಲ್ಲಿ ರೈತರಿಗೆ ಬೆಳೆಯ ನಷ್ಟದ ಭಯ ಒಂದುಕಡೆಯಾದರೆ, ದಿನದ 24 ಗಂಟೆಗಳಲ್ಲಿ ಹೆಚ್ಚಿನ ಸಮಯ ವಿದ್ಯುತ್ ಕಡಿತಗೊಳ್ಳುವುದು ಇನ್ನಷ್ಟು ಸಮಸ್ಯೆಯನ್ನು ಉಂಟುಮಾಡುತ್ತದೆ.
ತೋಟಗಳಿಗೆ ನೀರುಣಿಸಲು ವಿದ್ಯುತ್ ಇಲ್ಲದಿದ್ದರೆ ಸಮಸ್ಯೆ ಆಗುತದೆ. ನಗರ ಭಾಗದಲ್ಲಿ ಲೋಡ್ ಶೆಡ್ಡಿಂಗ್ ಸಮಸ್ಯೆ ಅಷ್ಟಾಗಿ ಜನರನ್ನು ಕಾಡದೇ ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಇದರಿಂದಾಗಿ ಜನರು ವಿದ್ಯುತ್ ಇಲ್ಲದೆ ಸಮಸ್ಯೆ ಅನುಭವಿಸುವಂಥಾಗಿದೆ.
ವಿದ್ಯುತ್ ಅಗತ್ಯ ಇರುವ ಜನರಿಗೆ ಇದು ನಿಜಕ್ಕೂ ದೊಡ್ಡ ಸಮಸ್ಯೆ. ಆದರೆ ವಿದ್ಯುತ್ ಉತ್ಪಾದನೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್ ಒದಗಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಒಂದಿಷ್ಟು ವಿದ್ಯುತ್ ಅನ್ನು ತುರ್ತು ಪರಿಸ್ಥಿತಿಗಾಗಿ ಆದರೂ ಉಳಿಸಿಕೊಳ್ಳಲು ಸರ್ಕಾರಕ್ಕೆ ಲೋಡ್ ಶೆಡ್ಡಿಂಗ್ ಎನ್ನುವುದು ಅನಿವಾರ್ಯವಾಗಿದೆ.