ಗೃಹ ಲಕ್ಷ್ಮಿ ಫಲಾನುವಿಗಳಿಗೆ ಸಿಹಿ ಸುದ್ದಿ ಶ್ರೀಘದಲ್ಲೆ ಎಲ್ಲರಿಗೂ ಹಣ ಜಮೆ

ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಎರಡು ಸಾವಿರ ರೂಪಾಯಿಗಳನ್ನು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ಪ್ರಕ್ರಿಯೆ ಇಂದಿಗೂ ನಡೆಯುತ್ತಿದೆ



ರಾಜ್ಯದಲ್ಲಿ ಒಟ್ಟು ಒಂದು ಕೋಟಿ 30 ಲಕ್ಷದಷ್ಟು ಮಹಿಳೆಯರು ಅರ್ಜಿ ಸಲ್ಲಿಸಿ 84 ಲಕ್ಷ ಮಹಿಳೆಯರು ಪ್ರತಿ ತಿಂಗಳು 2000 ಗಳನ್ನು ಪಡೆದುಕೊಳ್ಳುವಂತೆ ಆಗಿದೆ. ರಾಜ್ಯ ಸರ್ಕಾರದ ಈ ಯೋಜನೆ ಸಣ್ಣ ಮಟ್ಟದ್ದೇನು ಅಲ್ಲ. ಇದಕ್ಕಾಗಿ ಸರ್ಕಾರ ಮೀಸಲಿಟ್ಟ ಹಣ ಕೋಟ್ಯಾಂತರ ರೂಪಾಯಿಗಳಷ್ಟು.


ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಎರಡು ಸಾವಿರ ರೂಪಾಯಿಗಳನ್ನು ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಜಮಾ ಮಾಡುವ ಪ್ರಕ್ರಿಯೆ ಇಂದಿಗೂ ನಡೆಯುತ್ತಿದೆ ಸಾಕಷ್ಟು ಗೊಂದಲದ ನಡುವೆಯೂ ಸುಮಾರು 70% ನಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ.

ಇಂತಹ ಮಹಿಳೆಯರಿಗೆ ಹಣ ಸಂದಾಯವಾಗಿಲ್ಲ

70% ಮಹಿಳೆಯರ ಖಾತೆಗೆ ಮಾಸಿಕ 2,000 ರೂ.ಜಮಾ ಆಗಿದ್ದರು ಇನ್ನೂ 30% ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (dbt) ಮಾಡುವಲ್ಲಿ ರಾಜ್ಯ ಸರ್ಕಾರ ಇನ್ನೂ ಪ್ರಕ್ರಿಯೆಯಲ್ಲಿದೆ. ಮೊದಲ ಕಂತಿನ ಗೃಹಲಕ್ಷ್ಮಿ (Gruha lakshmi Scheme) ಹಣ ಪಡೆದುಕೊಳ್ಳಲು ಹಲವು ಮಹಿಳೆಯರಿಗೆ ಸಾಧ್ಯವಾಗಿಲ್ಲ.


ಇದಕ್ಕಿರುವ ಕಾರಣಗಳು ಒಂದೆರಡು ಅಲ್ಲ. ರಾಜ್ಯ ಸರ್ಕಾರ , (State government) ಈ ಹಿಂದೆಯೇ ಯೋಜನೆ ಆರಂಭಿಸುವುದಕ್ಕೂ ಮೊದಲು, ಉಚಿತ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಏನೆಲ್ಲಾ ದಾಖಲೆಗಳು (Documents) ಮುಖ್ಯವಾಗಿರುತ್ತೆ ಎಂಬುದನ್ನು ತಿಳಿಸಿತ್ತು, ಆದರೂ ಹಲವು ಮಹಿಳೆಯರು ದಾಖಲೆಗಳನ್ನು ಹೊಂದಿಸುವಲ್ಲಿ ಎಡವಿದ್ದಾರೆ.


ಯಾಕೆ ನಿಮ್ಮ ಖಾತೆಗೆ ಹಣ ಬಂದಿಲ್ಲ ಗೊತ್ತಾ?


ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಗೃಹಲಕ್ಷ್ಮಿ ಹಣ ಮೀಸಲಿರುವುದೇ ಮನೆಯ ಗೃಹಿಣಿಯರಿಗಾಗಿ. ಆದರೆ ಮಹಿಳೆಯರ ಖಾತೆಯಲ್ಲಿನ ಲೋಪ ದೋಷಗಳು ಅವರಿಗೆ ಹಣ ಸಿಗದಂತೆ ಮಾಡಿದೆ. ಹಲವು ಮಹಿಳೆಯರ ಖಾತೆ ಸಕ್ರಿಯವಾಗಿಲ್ಲ (Account not active) ಜೊತೆಗೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಸೀಡಿಂಗ್ ಆಗಿಲ್ಲ.


ಈ ನಡುವೆ ಎಲ್ಲಾ ಸರಿ ಇದ್ರೂ ಮಹಿಳೆಯರ ಹೆಸರು ಆಧಾರ್ ಕಾರ್ಡ್ (Aadhaar Card) ರೇಷನ್ ಕಾರ್ಡ್ (Ration card) ಹಾಗೂ ಬ್ಯಾಂಕ್ ಖಾತೆಯಲ್ಲಿ ಮ್ಯಾಚ್ ಆಗುತ್ತಿಲ್ಲ.


ಅಷ್ಟೇ ಅಲ್ಲ ನಿಮ್ಮ ರೇಷನ್ ಕಾರ್ಡ್ ಬಿಪಿಎಲ್ ಇರಲಿ ಅಥವಾ ಎಪಿಎಲ್ ಆಗಿರಲಿ, ಆ ಕಾರ್ಡ್ ನಲ್ಲಿ ಮೊದಲ ಹೆಸರು ಮಾತ್ರ ಮಹಿಳೆಯದ್ದೇ ಇರಬೇಕು ಪುರುಷನ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಅಂತಹ ಕುಟುಂಬಕ್ಕೆ 2000 ಸಿಗಲು ಸಾಧ್ಯವೇ ಇಲ್ಲ. ಈ ಎಲ್ಲಾ ಮಾಹಿತಿಗಳು ಗೃಹಿಣಿಯರಿಗೆ ಗೊತ್ತಿದ್ದರೂ ಕೂಡ ಮೊದಲ ಕಂತಿನ ಹಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲ?

ಹಣ ಬಾರದೆ ಇರಲು ಸರ್ಕಾರವೂ ಕಾರಣ;

ಸುಮಾರು ಲಕ್ಷಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಮಾಸಿಕ 2,000 ಬರಲು ಸಾಧ್ಯವೇ ಇಲ್ಲ. ಬೇಕಾಗಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸೇವಾ ಕೇಂದ್ರಗಳಲ್ಲಿ ಹೋಗಿ ಅರ್ಜಿ ಹಾಕಿ ಬಂದ ಮೇಲೆ ಸರ್ಕಾರದ ವೆಬ್ಸೈಟ್ಗಳ ಸರ್ವರ್ ಸಮಸ್ಯೆಯಿಂದಾಗಿ (Server problem) ಹಲವು ಫಲಾನುಭವಿಗಳು ಇದರಿಂದ ವಂಚಿತರಾಗಿದ್ದಾರೆ. ಆದರೆ ಕಾರಣ ಏನೇ ಇರಬಹುದು ನಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಅಂತ ಬೇಸರ ವ್ಯಕ್ತಪಡಿಸುವ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ.


ಹಣ ಜಮಾ ಆಗುತ್ತೆ: ಭರವಸೆ ನೀಡಿದ ಸಿಎಂ!


ಹೌದು, ಹಲವು ಮಹಿಳೆಯರ ಖಾತೆಗೆ ಇನ್ನೂ ಹಣ ಸಂದಾಯವಾಗಿಲ್ಲ, ಅಂದ್ರೆ ಅವರ ಖಾತೆಯಲ್ಲಿ ಇರುವ ಸಮಸ್ಯೆ ಪರಿಹಾರವಾಗಿಲ್ಲ ಎಂದೇ ಅರ್ಥ. ಹಾಗಾಗಿ ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಫಲಾನುಭವಿಗಳ ಮನೆ ಮನೆಗೆ ತೆರಳಿ, ಅಗತ್ಯ ಇರುವ ಮಾಹಿತಿಗಳನ್ನು ನಾವೇ ಸರಿಪಡಿಸಿಕೊಂಡು ಮಹಿಳೆಯರ ಖಾತೆಗೆ 2,000 ಬರುವಂತೆ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.


“ರಾಜ್ಯದಲ್ಲಿ ಲಕ್ಷಾಂತರ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಇದಕ್ಕೆ ಮುಖ್ಯ ಕಾರಣ ಸರ್ವರ್ ಸಮಸ್ಯೆ ಕೂಡ ಆಗಿರಬಹುದು ಹಾಗಾಗಿ ತಂತ್ರಾಂಶಗಳ ಸಮಸ್ಯೆ ಸರಿಪಡಿಸಿಕೊಂಡು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುವುದು” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.


ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳನ್ನು ಹಲವು ಮಹಿಳೆಯರು ಪಡೆದುಕೊಂಡಿದ್ದಾರೆ. ಇನ್ನು ಹಲವರಿಗೆ ಸದ್ಯದಲ್ಲಿಯೇ ಹಣ ಜಮಾ ಮಾಡಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ

Previous Post Next Post