ಕೋಳಿ ಫಾರಂ ಬ್ಯುಸಿನೆಸ್ ಮಾಡೋಕೆ ಸಿಗುತ್ತೆ ಸರ್ಕಾರದಿಂದ ಸಬ್ಸಿಡಿ

 ಕೋಳಿ ಫಾರಂ ಆರಂಭಿಸಲು ಸಾಲ (Business Loan) ತೆಗೆದುಕೊಂಡರೆ ಅದಕ್ಕೆ ಸಬ್ಸಿಡಿ, ಬಡ್ಡಿ ದರಗಳಲ್ಲಿ ಸಬ್ಸಿಡಿ, ತೆರಿಗೆ ವಿನಾಯಿತಿ, ತಾಂತ್ರಿಕ ಸಹಾಯ ಮೊದಲಾದವುಗಳು ಸರ್ಕಾರದಿಂದ ಸಿಗುತ್ತವೆ.



ಸರ್ಕಾರ (Government) ಸ್ವಂತ ಉದ್ಯಮ ಆರಂಭಿಸುವವರಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತದೆ. ಇತ್ತೀಚಿಗೆ ಸ್ವಂತ ಉದ್ಯೋಗ ಆರಂಭಿಸುವ ಯುವಕರಸಂಖ್ಯೆ ಕೂಡ ಜಾಸ್ತಿಯಾಗಿರುತ್ತದೆ.

ಸರ್ಕಾರವು ಸಾಕಷ್ಟು ಸಾಲಕ್ಕೆ ಸಬ್ಸಿಡಿ(subsidy) ದರವನ್ನು ಕೂಡ ನೀಡುತ್ತದೆ. ಹೀಗೆ ನೀವು ಕೋಳಿಯನ್ನು( Poultry)ಸಾಕಿ ನಿಮ್ಮ ಕಲ್ಪನೆಗೂ ಮೀರಿ ಆದಾಯ ಗಳಿಸಬೇಕು ಎಂದು ಭಾವಿಸಿದ್ದಾರೆ ಕೋಳಿ ಫಾರ್ಮ್(Poultry farm) ತೆರೆಯಲು ಸರ್ಕಾರದಿಂದ ಸಹಾಯ ಧನ (Government subsidy Loan)ಲಭ್ಯವಿರುತ್ತದೆ.

ಕೋಳಿ ಫಾರಂ ಮಾಡೋಕೆ ಸರ್ಕಾರದ ಸಹಾಯಧನ:

 ಕೋಳಿ ಉದ್ಯಮವನ್ನು ಬೆಂಬಲಿಸುವ ಸಲುವಾಗಿ ಹಾಗೂ ಕೋಳಿ ಉದ್ಯಮ ಮಾಡುವವರಿಗೆ ಸಬ್ಸಿಡಿ ದರದಲ್ಲಿ ಕೋಳಿ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.


ಕೋಳಿ ಉದ್ಯಮವನ್ನು(Business) ಹೆಚ್ಚಿಸಬೇಕು ಹಾಗೂ ಗುಣಮಟ್ಟದ ಕೋಳಿ ಸಾಕಾಣಿಕೆ ಉದ್ಯಮವನ್ನು(Poultry Farm Business)ಬೆಂಬಲಿಸಬೇಕು ಎನ್ನುವುದರ ಬಗ್ಗೆ ಸರ್ಕಾರ ಕೋಳಿ ಫಾರಂಗಳಿಗೂ ಕೂಡ ಸಬ್ಸಿಡಿ(Subsidy) ನೀಡಲು ಆರಂಭಿಸಿದೆ.


ಇನ್ನು ಸಬ್ಸಿಡಿ(Subsidy) ಸಹಾಯಧನವನ್ನು ಇವಾಗ ಹೊಸದಾಗಿ ಕೋಳಿ ಫಾರಂ(Poultry Farming)ಆರಂಭಿಸಲು ಪ್ರಯತ್ನಿಸುತ್ತಿರುವವರಿಂದ ಹಿಡಿದು ಕೋಳಿಸಾಕಾಣಿಕೆಯನ್ನು ದೊಡ್ಡ ಉದ್ಯಮವಾಗಿ ಮಾಡಿಕೊಂಡವರಿಗೂ ಕೂಡ ಸರ್ಕಾರದಿಂದ ಈ ಪ್ರಯೋಜನ ಸಿಗಲಿರುವುದು.


ರೈತರು (Farmer) ಎಷ್ಟು ಕೋಳಿ ಸಾಕುತ್ತಾರೆ ಯಾವ ರೀತಿಯ ಕೋಳಿ ಸಾಕುತ್ತಾರೆ ಎನ್ನುವುದರ ಆಧಾರದ ಮೇಲೆ ಸಬ್ಸಿಡಿ ನೀಡಲಾಗುವುದು. ಈ ಸಬ್ಸಿಡಿ ಆಯಾ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆ ಮಾಡುವವರ ಮೇಲೆ ಅವಲಂಬಿತವಾಗಿದೆ.

ಸಬ್ಸಿಡಿ ಪಡೆಯಲು ಏನು ಮಾಡಬೇಕು? 

ಸಬ್ಸಿಡಿ ಪಡೆಯುವುದಕ್ಕೆ ರೈತರು ತಮ್ಮ ಕೋಳಿ ಉದ್ಯಮದ ಬಗ್ಗೆ ಮಾಹಿತಿ, ಗುರುತಿನ ಪುರಾವೆ (Address proof), ಭೂಮಿಯ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರವು ಅರ್ಜಿಗಳನ್ನು ಪರಿಶೀಲಿಸಿ ಅದರಆಧಾರದ ಮೇಲೆ ಸಬ್ಸಿಡಿ(Subsidy) ನೀಡಲಿದೆ.


ಎಷ್ಟು ಸಿಗುತ್ತೆ ಸಬ್ಸಿಡಿ? 

ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆ ಮಾಡುವವರಿಗೆ ಈ ಸಬ್ಸಿಡಿಯ ಹೆಚ್ಚಿನ ಪ್ರಯೋಜನ ಸಿಗಲಿದೆ.


ಗ್ರಾಮೀಣಭಾಗದಲ್ಲಿ 1ಸಾವಿರ ಕೋಳಿಸಾಕಾಣಿಕೆಗೆ ನಿಮ್ಮ ಬಂಡವಾಳದ ಶೇ. 50 ರಷ್ಟು ಹಣವನ್ನು ಸರ್ಕಾರವೇ ಸಬ್ಸಿಡಿ(Subsidy)ರೂಪದಲ್ಲಿ ಭರಿಸಲಿರುವುದು.


ಈ ರೀತಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸುಲಭವಾಗಿ ಬಂಡವಾಳದ ಅರ್ಧದಷ್ಟು ಹಣವನ್ನು ಪಡೆಯಬಹುದಾಗಿದೆ. ಎರಡು ಕಂತುಗಳಲ್ಲಿ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಉದ್ಯಮಿ ಮಿತ್ರ www.nlm.udyamimitra.in ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.



Previous Post Next Post