ಉದ್ದಿಮೆದಾರರನ್ನು ಗುರುತಿಸಿ ತರಬೇತಿ ಜೊತೆಗೆ 3 ಲಕ್ಷಗಳ ವರೆಗೆ ಸಬ್ಸಿಡಿ ಸಾಲ (subsidy loan) ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ನಮ್ಮ ದೇಶದಲ್ಲಿ ಸಾಕಷ್ಟು ಪರಂಪರಾಗತವಾಗಿ ಬಂದಿರುವ ಕುಲಕಸುಬು ಮಾಡುವ ಜನರು ಇದ್ದಾರೆ, ಆದರೆ ಇಂತಹ ಜನರಿಗೆ ಯಾವುದೇ ರೀತಿಯ ಸಾಲ (loan) ಸೌಲಭ್ಯ ಸಿಗುವುದಿಲ್ಲ. ಇದೇ ಕಾರಣಕ್ಕೆ ಈ ಉದ್ದಿಮೆಗಳು (business) ಇನ್ನೂ ಹಿಂದೆ ಬಿದ್ದಿವೆ. ಆದ್ರೆ ಈಗ ಕೇಂದ್ರ ಸರ್ಕಾರ ಇಂಥವರಿಗಾಗಿ ಒಂದು ಅದ್ಭುತ ಯೋಜನೆಯನ್ನು ಪರಿಚಯಿಸಿದೆ.
ವಿಶ್ವಕರ್ಮ ಯೋಜನೆ; (Vishwakarma Yojana)
ಭಾರತೀಯ ಇತಿಹಾಸದಲ್ಲಿ ಸಾಕಷ್ಟು ಆರಂಭಿಕ ಉದ್ಯೋಗಗಳು ಕುಲಕಸುಬುಗಳು ಇವೆ, ಇದರ ಮೂಲಕವೇ ಭಾರತವನ್ನು ವಿಶೇಷವಾಗಿ ಗುರುತಿಸಲಾಗುತ್ತದೆ ಎನ್ನಬಹುದು.
ಆದರೆ ದುರಾದೃಷ್ಟವಶಾತ್ ಈ ಕೆಲಸಗಳನ್ನು ಮಾಡಿಕೊಂಡು ಹೋಗುವವರಿಗೆ ಅವರ ಉದ್ಯೋಗವನ್ನು ಮುಂದುವರಿಸಿಕೊಂಡು ಹೋಗಲು ಸರ್ಕಾರದಿಂದ ಅಥವಾ ಬೇರೆ ಯಾವುದೇ ರೀತಿಯ ಸಾಲಗಳು ಸಿಗುತ್ತಿರಲಿಲ್ಲ.
ಈ ಕಾರಣಕ್ಕೆ ಅಂತಹ ಉದ್ದಿಮೆದಾರರನ್ನು ಗುರುತಿಸಿ ತರಬೇತಿ ಜೊತೆಗೆ 3 ಲಕ್ಷಗಳ ವರೆಗೆ ಸಬ್ಸಿಡಿ ಸಾಲ (subsidy loan) ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ವಿಶ್ವಕರ್ಮ ಯೋಜನೆಯ ಪ್ರಯೋಜನಗಳು;
ಈ ಯೋಜನೆಯ ಅಡಿಯಲ್ಲಿ ಅಗತ್ಯ ಇರುವವರಿಗೆ ಅವರ ಕಸುಬು ಅಥವಾ ಕೆಲಸ ವನ್ನು ಇನ್ನಷ್ಟು ದೊಡ್ಡದಾಗಿ ಬೆಳೆಸಲು ಅನುಕೂಲ ಮಾಡಿಕೊಡಲು ತರಬೇತಿ ನೀಡಲಾಗುತ್ತದೆ. ತರಬೇತಿ (training) ಸಮಯದಲ್ಲಿ ಹಣ ಕೂಡ ಸಿಗುತ್ತದೆ.
ಅಷ್ಟೇ ಅಲ್ಲದೆ ತರಬೇತಿಯ ನಂತರ 15,000ಗಳನ್ನು ಟೂಲ್ ಕಿಟ್ ಖರೀದಿ ಮಾಡಲು ನೀಡಲಾಗುತ್ತದೆ. ಇನ್ನು ಮೂರು ಲಕ್ಷ ರೂಪಾಯಿಗಳ ವರೆಗೆ ಸಬ್ಸಿಡಿ ಸಾಲ (Subsidy Loan) ಕೂಡ ಪಡೆದುಕೊಳ್ಳಬಹುದು.
ಮೊದಲನೇ ಕಂತಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಸಾಲವಾಗಿ ಕೊಡಲಾಗುವುದು, ಅದನ್ನು ಸರಿಯಾದ ಸಮಯಕ್ಕೆ ಅಂದರೆ ಒಂದು ವರ್ಷದ ಒಳಗೆ ಮರುಪಾವತಿ ಮಾಡಿದರೆ ಅದಕ್ಕೆ ಮೀಸಲಾಗುವ ಬಡ್ಡಿ ಕೇವಲ 5%.
ಇನ್ನು ಮೊದಲ ಕಂತಿನ ಹಣ ಪಾವತಿ ಮಾಡಿದರೆ ಎರಡನೇ ಕಂತಿನಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ, ಇದಕ್ಕೂ ಕೂಡ ಸಬ್ಸಿಡಿ ಇರುವುದರಿಂದ ಜನರು ಸುಲಭವಾಗಿ ಸಾಲ ಸೌಲಭ್ಯ ಪಡೆಯಬಹುದು.
ಯಾರಿಗೆ ಸಿಗಲಿದೆ ಈ ಯೋಜನೆಯ ಪ್ರಯೋಜನ?
ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಕರಕುಶಲ ವಸ್ತು ತಯಾರಕರು, ಮೀನುಗಾರರು, ಚಪ್ಪಲಿ ಹೊಲಿಯುವವರು, ಕುಂಬಾರರು, ವಾಸ್ತುಶಿಲ್ಪಿಗಳು ಮೊದಲದ ಸಾಂಪ್ರದಾಯಿಕ ಕಸುಬು ಮಾಡುತ್ತಾ ಬಂದಿರುವವರು ಪ್ರಯೋಜನ ಪಡೆದುಕೊಳ್ಳಬಹುದು. ಇಂಥವರು ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ, ಅವರಿಗೆ ಒಂದು ಕಾರ್ಡ್ ಕೂಡ ನೀಡಲಾಗುವುದು.
ವಿಶ್ವಕರ್ಮ ಯೋಜನೆಯಲ್ಲಿ ಕೈಜೋಡಿಸಿದ ಆರ್ ಬಿಐ;
ಪಿ ಐ ಡಿ ಎಫ್ (PIDF) ಯೋಜನೆಯ ಅಡಿಯಲ್ಲಿ ವಿಶ್ವಕರ್ಮ ಯೋಜನೆಯನ್ನು ಕೂಡ ಸೇರಿಸಲು ತೀರ್ಮಾನಿಸಲಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿ ಕಾಂತ್ ದಾಸ್ (shaktikant Das) ತಿಳಿಸಿದ್ದಾರೆ. PIDF ಯೋಜನೆನ್ನು ಎರಡು ವರ್ಷಗಳಿಗೆ ಅಂದರೆ ಡಿಸೇಂಬರ್ 31, 2025 ರವರೆಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಗವರ್ನರ್ ಮಾಹಿತಿ ನೀಡಿದ್ದಾರೆ.