ಅನ್ನಭಾಗ್ಯ ಯೋಜನೆಯ ಅಕ್ಕಿ ಬೇಕೋ ಬದಲಿಗೆ ಹಣ ಬೇಕೋ? ನೀವೇ ಡಿಸೈಡ್ ಮಾಡಿ ಎಂದ ಸರ್ಕಾರ

 ರಾಜ್ಯ ಸರ್ಕಾರ ಒಂದು ಸರ್ವೆ (Survey) ನಡೆಸುತ್ತಿದೆ, ಪ್ರತಿ ಜಿಲ್ಲೆಗಳಲ್ಲಿ ಇರುವ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ.



ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ (Karnataka government Scheme) ಒಂದಾಗಿರುವ ಅನ್ನಭಾಗ್ಯ ಯೋಜನೆ (Annabhagya Scheme) ಯಲ್ಲಿ ಸಾಕಷ್ಟು ಗೊಂದಲಗಳು ಕೂಡ ಹುಟ್ಟಿಕೊಂಡಿವೆ.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಕೇಂದ್ರ ಸರ್ಕಾರ ಕೊಡುತ್ತಿದ್ದ 5 ಕೆಜಿ ಉಚಿತ ಅಕ್ಕಿಯ (Free Rice) ಜೊತೆಗೆ ರಾಜ್ಯದ ಜನತೆಗೆ ತಾವು 5 ಕೆಜಿ ಉಚಿತ ಅಕ್ಕಿಯನ್ನು ಸೇರಿಸಿ ಒಟ್ಟಾರೆಯಾಗಿ 10 ಕೆಜಿ ಉಚಿತ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತು.

ಆದರೆ ಕಾರಣಾಂತರಗಳಿಂದ ಸರ್ಕಾರಕ್ಕೆ ರಾಜ್ಯಕ್ಕೆ ಬೇಕಾಗಿರುವಷ್ಟು ಅಕ್ಕಿಯನ್ನು ಹೊಂದಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಹೊಸದೊಂದು ಸರ್ವೆ ನಡೆಸಲು ಮುಂದಾಗಿದೆ.

ಸರ್ಕಾರಕ್ಕೆ ಅಕ್ಕಿ ಹೊಂದಿಸಲು ಸಾಧ್ಯವಾಗುತ್ತಿಲ್ಲ

ನಮ್ಮ ರಾಜ್ಯದಲ್ಲಿ ಪ್ರತಿ ತಿಂಗಳು ಫಲಾನುಭವಿಗಳಿಗೆ 5 ಕೆಜಿ ಉಚಿತವಾಗಿ ಅಕ್ಕಿ ಕೊಡುವುದಾದರೆ 2.40 ಮೆಟ್ರಿಕ್ ಟನ್ ನಷ್ಟು ಅಕ್ಕಿ ಬೇಕು. ಆದರೆ ಹೊರ ರಾಜ್ಯಗಳು ಅಕ್ಕಿಗೆ ಹೆಚ್ಚಿನ ಹಣ ಡಿಮ್ಯಾಂಡ್ ಮಾಡುತ್ತಿರುವ ಕಾರಣ ಸರ್ಕಾರಕ್ಕೆ ಅದನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಣ ಕೊಡುವುದೇ ಉಚಿತ ಎಂದು ಸರ್ಕಾರ ತೀರ್ಮಾನಿಸುವ ಸಾಧ್ಯತೆ ಇದೆ.

ಬರಪೀಡಿತ ತಾಲೂಕುಗಳ ಘೋಷಣೆ

ರಾಜ್ಯದಲ್ಲಿ 195 ಬರಪೀಡಿತ ತಾಲೂಕುಗಳ ಹೆಸರುಗಳನ್ನು ಘೋಷಣೆ ಮಾಡಲಾಗಿದೆ. ಇವುಗಳಲ್ಲಿ 161 ತಾಲೂಕುಗಳನ್ನು ತೀವ್ರ ಭರ ಪೀಡಿತ ಪ್ರದೇಶ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ.


ಘೋಷಿತ ಬರಪೀಡಿತ ತಾಲೂಕುಗಳಿಗೆ ಈ ತಿಂಗಳಿನಿಂದ ಹಣದ ಬದಲು ಅಕ್ಕಿಯನ್ನು ಕೊಡಲು ಸರ್ಕಾರ ನಿರ್ಧರಿಸಿದೆ. ಅಂದರೆ ಪಡಿತರ ಚೀಟಿ (Ration Card) ಹೊಂದಿರುವವರಿಗೆ ಸಂಪೂರ್ಣ 10 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತದೆ.

ನಿಮಗೆ ಅಕ್ಕಿ ಬೇಕೋ ಹಣ ಬೇಕೋ, ಡಿಸೈಡ್ ಮಾಡಿ

ಹೌದು ರಾಜ್ಯ ಸರ್ಕಾರ ಒಂದು ಸರ್ವೆ (Survey) ನಡೆಸುತ್ತಿದೆ, ಪ್ರತಿ ಜಿಲ್ಲೆಗಳಲ್ಲಿ ಇರುವ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗೆ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದಾರೆ.


ಜನರಿಗೆ 5 ಕೆಜಿ ಉಚಿತ ಅಕ್ಕಿ ಬೇಕೋ ಅಥವಾ ಅದರ ಬದಲು ಹಣವನ್ನೇ ನೇರ ಅವರ ಖಾತೆಗೆ ವರ್ಗಾವಣೆ (DBT) ಮಾಡಬೇಕೋ ಎಂಬುದರ ಬಗ್ಗೆ ಸರ್ವೆ ನಡೆಸಲಾಗುತ್ತಿದೆ. ಈಗಾಗಲೇ ಸಂಗ್ರಹವಾಗಿರುವ ಜನಾಭಿಪ್ರಾಯದ (Public Opinion) ಪ್ರಕಾರ 50% ಜನ ಹಣವೇ ಬೇಕು ಎಂದು ಹೇಳಿದರೆ ಇನ್ನೂ 50%ನಷ್ಟು ಜನ ಹಣ ಬೇಡ ಅದರ ಬದಲು 10 ಕೆಜಿ ಅಕ್ಕಿಯನ್ನು ಕೊಡಿ ಎಂದು ಅಭಿಪ್ರಾಯ ಸೂಚಿಸಿದ್ದಾರೆ.

ಇನ್ನು ರಾಜ್ಯಾದ್ಯಂತ ಆಹಾರ ಇಲಾಖೆ (Food Department) ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ಮಾಹಿತಿ ನೀಡಲಿದೆ. ಇದರ ಆಧಾರದ ಮೇಲೆ ಜನರಿಗೆ ಅಕ್ಕಿ ಕೊಡಬೇಕೋ ಅಥವಾ ಹಣ ಕೊಡುವುದನ್ನೇ ಮುಂದುವರಿಸಬೇಕೋ ಎಂಬುದರ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.


ಇದು ಜನಾಭಿಪ್ರಾಯಕ್ಕೆ ಇರುವ ವೇದಿಕೆಯಾಗಿದ್ದು ನೀವು ಕೂಡ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಸರ್ಕಾರದಿಂದ ಉಚಿತವಾಗಿ ಅಕ್ಕಿ ಬೇಕೋ ಅಥವಾ ಹಣವನ್ನ ನಿಮ್ಮ ಖಾತೆಗೆ ಹಾಕುವುದು ಒಳ್ಳೆಯದೋ ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಬಹುದು





Previous Post Next Post