ಸೆ. 4ರಿಂದ PV ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ದಿಕ್ಸೂಚಿ

ಸೆ. 4ರಿಂದ PV ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ದಿಕ್ಸೂಚಿ

 ಇದೇ ಸೆ.4ರಿಂದ ಎಸ್ಸೆಸ್ಸೆಲ್ಸಿ– ದ್ವಿತೀಯ ಪಿಯುಸಿ(ವಿಜ್ಞಾನ ವಿಷಯ) ಪಠ್ಯಗಳ ಅಧ್ಯಾಯವಾರು ಪ್ರಶ್ನೋತ್ತರಗಳ ‘ಪರೀಕ್ಷಾ ದಿಕ್ಸೂಚಿ‘ ಅಂಕಣ ಆರಂಭಿಸಲಾಗುತ್ತಿದೆ.



ಈ ಅಂಕಣದಲ್ಲಿ ಎಸ್ಸೆಸ್ಸೆಲ್ಸಿಯ ಇಂಗ್ಲಿಷ್‌, ಗಣಿತ, ಸಮಾಜ ಮತ್ತು ವಿಜ್ಞಾನದ ವಿಷಯಗಳು ಹಾಗೂ ದ್ವಿತೀಯ ಪಿಯುಸಿಯ (ವಿಜ್ಞಾನ ವಿಷಯ) ಭೌತವಿಜ್ಞಾನ(Physics), ರಸಾಯನ ವಿಜ್ಞಾನ (Chemistry), ಗಣಿತ (Mathematics) ಮತ್ತು ಜೀವವಿಜ್ಞಾನ(Biology) ವಿಷಯಗಳ ಅಧ್ಯಾಯವಾರು ಮಾದರಿ ಪ್ರಶ್ನೋತ್ತರಗಳನ್ನು ಪ್ರಕಟಿಸಲಾಗುತ್ತಿದೆ.


ಎಸ್ಸೆಸ್ಸೆಲ್ಸಿ ಪ್ರಶ್ನೋತ್ತರಗಳು ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿರುತ್ತವೆ. ಕನ್ನಡ ಮಾದ್ಯಮದ ಪ್ರಶ್ನೋತ್ತರ ಮುದ್ರಣ ಆವೃತ್ತಿಯಲ್ಲಿ ಪ್ರಕಟವಾದರೆ, ಇಂಗ್ಲಿಷ್ ಮಾಧ್ಯಮದ ಮಾಹಿತಿ ಆನ್‌ಲೈನ್‌ ಆವೃತ್ತಿಯಲ್ಲಿ ಪ್ರಕಟವಾಗಲಿದೆ. ಮುದ್ರಣ ಆವೃತ್ತಿಯಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡಿ ನೋಡುವಂತೆ ಸೂಚನೆ ನೀಡಲಾಗಿರುತ್ತದೆ. ಹಾಗೆಯೇ, ಈ ಬಾರಿ ಪಿಯುಸಿ ಪ್ರಶ್ನೋತ್ತರ ಇಂಗ್ಲಿಷ್ ಮಾಧ್ಯಮದಲ್ಲಿರುತ್ತದೆ.

ಈ ಎರಡೂ ತರಗತಿಯ ಮಾಹಿತಿಗಳು ವಾರಕ್ಕೆ ನಾಲ್ಕು ದಿನ ಪ್ರಕಟವಾಗುತ್ತವೆ. ಸೋಮವಾರದಿಂದ ಗುರುವಾರದವರೆಗೆ ಪ್ರತಿ ದಿನ ಪ್ರಕಟವಾಗುವ ಪುರವಣಿಯ ಅರ್ಧ ಪುಟದಲ್ಲಿ ಪರೀಕ್ಷಾ ದಿಕ್ಸೂಚಿಯಿರುತ್ತದೆ.


ನುರಿತ ಅಧ್ಯಾಪಕರು ಮತ್ತು ಶಿಕ್ಷಕರು ಸಿದ್ಧಪಡಿಸುವ ಈ ದಿಕ್ಸೂಚಿಯ ಮಾಹಿತಿ, ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿಯಾಗಲಿದೆ.

Post a Comment

Previous Post Next Post
CLOSE ADS
CLOSE ADS
×