Post Office Scheme :
ಪೋಸ್ಟ್ ಆಫೀಸ್ ನಲ್ಲಿ ಗಂಡ ಹೆಂಡತಿ ಇಬ್ಬರು ಕೂಡ ಒಳ್ಳೆಯ ಆದಾಯ ಪಡೆಯಬಹುದಾದ ಯೋಜನೆ ಕೂಡ ಇದೆ. ಇದಕ್ಕಾಗಿ ಗಂಡ ಹೆಂಡತಿ ಇಬ್ಬರು ಕೂಡ ಪೋಸ್ಟ್ ಆಫೀಸ್ ನಲ್ಲಿ ಜಾಯಿಂಟ್ ಅಕೌಂಟ್ ತೆರೆಯಬೇಕಾಗುತ್ತದೆ.
Post Office Scheme :
ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಉತ್ತಮವಾದ ಆಯ್ಕೆ ಎಂದು ಹೇಳಬಹುದು. ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆಗೆ ಹಲವು ಯೋಜನೆಗಳು ಲಭ್ಯವಿದೆ. ಜನರು ಆ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.
ಇಲ್ಲಿ ಎಲ್ಲಾ ವಯೋವರ್ಗದ ಜನರಿಗು ಅನುಕೂಲ ಅಗುವಂಥ ಯೋಜನೆಗಳು ನಿಮಗೆ ಸಿಗುತ್ತದೆ. ಹಾಗೆಯೇ ಸರ್ಕಾರದ ಇಲಾಖೆ ಆಗಿರುವುದದಿಂದ ನಿಮ್ಮ ಹಣ ಕೂಡ ಸುರಕ್ಷಿತವಾಗಿರುತ್ತದೆ. ಜೊತೆಗೆ ಇಲ್ಲಿ ನಿಮಗೆ ಒಳ್ಳೆಯ ಆದಾಯ (Best Income) ಕೂಡ ಬರುತ್ತದೆ.
ಪೋಸ್ಟ್ ಆಫೀಸ್ ನಲ್ಲಿ ಗಂಡ ಹೆಂಡತಿ (Husband and Wife) ಇಬ್ಬರು ಕೂಡ ಒಳ್ಳೆಯ ಆದಾಯ ಪಡೆಯಬಹುದಾದ ಯೋಜನೆ ಕೂಡ ಇದೆ. ಇದಕ್ಕಾಗಿ ಗಂಡ ಹೆಂಡತಿ ಇಬ್ಬರು ಕೂಡ ಪೋಸ್ಟ್ ಆಫೀಸ್ ನಲ್ಲಿ ಜಾಯಿಂಟ್ ಅಕೌಂಟ್ (Joint Account) ತೆರೆಯಬೇಕಾಗುತ್ತದೆ.
ಈ ಅಕೌಂಟ್ ಓಪನ್ ಆದ ನಂತರ, ಇಲ್ಲಿ ನೀವು ಮಾಡುವ ಹೂಡಿಕೆಯ ಆಧಾರದ ಮೇಲೆ ಇದರಿಂದ ಬರುವ ಬಡ್ಡಿ ಹಣದಿಂದ ಉತ್ತಮ ಆದಾಯ ಇರುತ್ತದೆ. ಗಂಡ ಹೆಂಡತಿಗೆ ಈ ರೀತಿಯಾಗಿ ಪ್ರತಿ ತಿಂಗಳು ಹಣ ಪೆನ್ಷನ್ (Pension Scheme) ರೀತಿಯಲ್ಲಿ ಬರುತ್ತದೆ.
ಇಲ್ಲಿ ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಆ ಮೊತ್ತದ ಮೇಲೆ ತಿಂಗಳಿಗೆ 9,250 ರೂಪಾಯಿ ಆದಾಯ ಪಡೆಯಬಹುದು. ಈ ಯೋಜನೆಗೆ ಸಿಂಗಲ್ ಅಕೌಂಟ್ ಅಥವಾ ಜಾಯಿಂಟ್ ಅಕೌಂಟ್ ಪಡೆಯಬಹುದು.
ಇದಕ್ಕೆ ಉದಾಹರಣೆ ಇಲ್ಲಿ ಗಂಡ ಹೆಂಡತಿ ಇಬ್ಬರು ಜಾಯಿಂಟ್ ಅಕೌಂಟ್ ತೆರೆದು 15 ಲಕ್ಷ ಹೂಡಿಕೆ ಮಾಡಿದರೆ, 7.4% ಬಡ್ಡಿದರದಲ್ಲಿ ನಿಮಗೆ ವರ್ಷಕ್ಕೆ 1,11,000 ರೂಪಾಯಿ ಆದಾಯ ನೀಡುತ್ತದೆ. ನೀವು ಹೂಡಿಕೆ ಮಾಡುವ ಮೊತ್ತದ ಮೇಲೆ ಬಡ್ಡಿಹಣ ಸಿಗುತ್ತದೆ. ಇಲ್ಲಿ ನಿಮ್ಮ ಬಡ್ಡಿಹಣ 12 ತಿಂಗಳಿಗೆ ಡಿವೈಡ್ ಆದರೆ ಪ್ರತಿ ತಿಂಗಳು ₹9250 ರೂಪಾಯಿ ಸಿಗುತ್ತದೆ.
ಈ ಯೋಜನೆಯಲ್ಲಿ ಒಬ್ಬರೇ ಅಕೌಂಟ್ ತೆರೆಯಬಹುದು, ಜಾಯಿಂಟ್ ಅಕೌಂಟ್ ಅಥವಾ 3 ಜನ ಸೇರಿ ಅಕೌಂಟ್ ತೆರೆಯಬಹುದು. ನಿಮಗೆ ಬರುವ ಆದಾಯ ಮೂವರ ನಡುವೆ ಸಮಾನವಾಗಿ ಹಂಚಿಕೆ ಆಗುತ್ತದೆ..
ಈ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡಿ (Post Office Savings), 1 ವರ್ಷಗಳ ಬಳಿಕ ಹಣವನ್ನು ಮತ್ತೆ ಹಿಂಪಡೆಯಬಹುದು. ಒಂದು ವೇಳೆ ಇನ್ವೆಸ್ಟ್ ಮಾಡಿ 1 ರಿಂದ 3 ವರ್ಷಗಳ ಒಳಗೆ ವಾಪಸ್ ಪಡೆಯುವುದಾದರೆ, ನೀವು ಹೂಡಿಕೆ ಮಾಡಿರುವ ಹಣದಲ್ಲಿ 2% ಕಟ್ ಮಾಡಲಾಗುತ್ತದೆ.
ಈ ಯೋಜನೆಯ ಮುಕ್ತಾಯದ ಸಮಯ 5 ವರ್ಷ ಆಗಿರುವುದರಿಂದ 3 ವರ್ಷಕ್ಕೆ ಯೋಜನೆಯನ್ನು ನಿಲ್ಲಿಸಿದರೆ 1% ಹಣ ಕಟ್ ಮಾಡಿ ನಿಮಗೆ ಕೊಡಲಾಗುತ್ತದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಮೂಲಕ ಒಳ್ಳೆಯ ಆದಾಯ ಪಡೆಯಬಹುದು. ಇಂದೇ ಹೂಡಿಕೆ ಮಾಡಿ.