ಗೃಹಲಕ್ಷ್ಮಿಯರಿಗೆ ಮತ್ತೊಂದು ಬಿಗ್ ಬ್ರೇಕಿಂಗ್ : ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ

ಗೃಹಲಕ್ಷ್ಮಿಯರಿಗೆ ಮತ್ತೊಂದು ಬಿಗ್ ಬ್ರೇಕಿಂಗ್ : ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಪ್ರಾರಂಭ

 ನಮಸ್ಕಾರ ಸ್ನೇಹಿತರೆ, ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕಾಂಗ್ರೆಸ್ ಸರ್ಕಾರ ಓ ಕರ್ನಾಟಕದಲ್ಲಿ ಭರ್ಜರಿ ಮತದೊಂದಿಗೆ ಆಯ್ಕೆಯಾಗಿರುವುದರಿಂದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದೆ. ಮಹಿಳೆಯರಿಗೆ ಈಗ ಮತ್ತೊಂದು ಉಚಿತ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಈಗ ಮಹಿಳೆಯರಿಗೆ ಜಾರಿಗೆ ತರಲಾಗುತ್ತಿದೆ



ಉಚಿತ ಹೊಲಿಗೆ ಯಂತ್ರ ಯೋಜನೆ :

ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ವೃತ್ತಿಪರ ಕುಶಲಕರ್ಮಿಗಳಿಗೆ ಪ್ರಾರಂಭಿಸಲಾಗಿತ್ತು. ಸುಧಾರಿತ ಸಲಕರಣೆ ಸರಬರಾಜು ಯೋಜನೆಯಡಿಯಲ್ಲಿ ಉಚಿತವಾಗಿ ವೃತ್ತಿಪರ ಕುಶಲಕರ್ಮಿಗಳಿಗೆ ಗ್ರಾಮೀಣ ಪ್ರದೇಶದ ಮಹಿಳಾ ಕುಶಲಕರ್ಣಿಗಳಿಗೆ ವಿದ್ಯುತ್ ಚಾಲಿತ ಹೊಲಿಗೆ ಯಂತ್ರಗಳನ್ನು ಸರ್ಕಾರವು ಉಚಿತವಾಗಿ ವಿತರಿಸಲು ಮುಂದಾಗಿದೆ.

ಉಚಿತ ಹೊಲಿಗೆ ಯಂತ್ರ ಯೋಜನೆಯ ಅರ್ಹತೆಗಳು :

ಉಚಿತ ಹೊಲಿಗೆ ಯಂತ್ರ ಯೋಜನೆಗೆ ಸಂಬಂಧಿಸಿ ದಂತೆ ವಿದ್ಯುತ್ ಚಾಲಿತ ಉಚಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿಯನ್ನು ಮಹಿಳಾ ಅಭ್ಯರ್ಥಿಗಳು ಗ್ರಾಮೀಣ ಪ್ರದೇಶದಲ್ಲಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಕನಿಷ್ಠ 21 ವರ್ಷದಿಂದ ಹಾಗೂ ಗರಿಷ್ಠ 45 ವರ್ಷಗಳು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸಾಗಿರಬೇಕು. ಕನಿಷ್ಠ 10ನೇ ತರಗತಿಯನ್ನು ಅರ್ಜಿದಾರರು ಉತ್ತೀರ್ಣರಾಗಿರಬೇಕು. ಜೇನು ಸಲ್ಲಿಸಲು ಒಂದು ಕುಟುಂಬಕ್ಕೆ ಮಾತ್ರ ಅವಕಾಶವಿರುತ್ತದೆ. ಈಗಾಗಲೇ ಹೊಲಿಗೆ ಯಂತ್ರವನ್ನು ಸರ್ಕಾರದ ಯಾವುದೇ ಯೋಜನೆಯ ಅಡಿಯಲ್ಲಿ ಪಡೆದಿರುವ ಫಲಾನುಭವಿಗಳಿಗೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.


ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿರುವುದಿಲ್ಲ. ಅಗತ್ಯವಿರುವ ದಾಖಲೆಗಳು : ವಿದ್ಯುತ್ ಚಾಲಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳಿಂದಲೇ ,ಪಾಸ್ಪೋರ್ಟ್ ಸೈಜ್ ಫೋಟೋ, ಶೈಕ್ಷಣಿಕ ಅರ್ಹತೆ ಅಂಕಪಟ್ಟಿ, ಪಡಿತರ ಚೀಟಿ, ಎಸ್ ಎಸ್ ಎಲ್ ಸಿ ಅಂಕಪಟ್ಟಿ ಜಾತಿ ಪ್ರಮಾಣ ಪತ್ರ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಂದ ವೃದ್ಧಿ ಮಾಡಿರುವ ಬಗ್ಗೆ ದೃಢೀಕರಣ ಪತ್ರವನ್ನು ಹೊಂದಿರಬೇಕಾಗುತ್ತದೆ.


ಅರ್ಜಿ ಸಲ್ಲಿಸಲು ಇರುವ ದಿನಾಂಕ :

ವಿದ್ಯುತ್ ಚಾಲಿತ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿಯನ್ನು ಸಲ್ಲಿಸಲು ದಿನಾಂಕ 01-09 -2023 ರಿಂದ 30 -09 -2023ರ ವರೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಉಚಿತ ಹೊಲಿಗೆ ಯಂತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರವರ ಕಚೇರಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೈಗಾರಿಕಾ ವಿಭಾಗ, ಜಿಲ್ಲಾ ಪಂಚಾಯತ್, ಎಲ್ ೧೦ ,ಕೈಗಾರಿಕಾ ವಸಾಹತು ,ಎಂ ಎಸ್ .ಕೆ .ಮಿಲ್ ರಸ್ತೆ ಕಲಬುರ್ಗಿ ಅಥವಾ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳಿಗೆ ಈ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ.


ಹೀಗೆ ಸಾಧಾರಣ ಉಚಿತ ಹೊಲಿಗೆ ಯಂತ್ರ ಇರುವುದಲ್ಲದೆ ರಾಜ್ಯ ಸರ್ಕಾರವು ವಿದ್ಯುತ್ ಚಾಲಿತ ಉಚಿತ ವರಿಗೆ ಯಂತ್ರವನ್ನು ನೀಡಲು ನಿರ್ಧರಿಸಿದೆ. ಈ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ಜಾರಿಗೆ ತಂದಿದ್ದು ಸದ್ಯದಲ್ಲಿಯೇ ರಾಜ್ಯದಲ್ಲಿರುವ ಉಳಿದ ಎಲ್ಲಾ ಜಿಲ್ಲೆಗಳಿಗೂ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

Post a Comment

Previous Post Next Post
CLOSE ADS
CLOSE ADS
×