ಎಲ್ಐಸಿಯ ಒಂದು ಪ್ರಮುಖ ಯೋಜನೆಯ ಮೂಲಕ ಕಡಿಮೆ ಹಣದ ಮೂಲಕ ಪ್ಲಾನ್ ಆರಂಭಿಸಿ ಉತ್ತಮ ಆದಾಯವನ್ನು ಪಡೆಯಬಹುದು
ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಜನರಿಗೆ ವ್ಯಾಪಕವಾದ ಜೀವ ವಿಮಾ ಯೋಜನೆಗಳನ್ನು ಒದಗಿಸುತ್ತದೆ. ಈ ಯೋಜನೆಗಳ ಮೂಲಕ, ಜನರು ದೀರ್ಘಾವಧಿಯವರೆಗೆ ಹೂಡಿಕೆ ಮಾಡಬಹುದು. ಆರ್ಥಿಕ ರಕ್ಷಣೆಯನ್ನು ಪಡೆಯಬಹುದು. ಎಲ್ಐಸಿಯ ಒಂದು ಪ್ರಮುಖ ಯೋಜನೆಯ ಮೂಲಕ ಕಡಿಮೆ ಹಣದ ಮೂಲಕ ಪ್ಲಾನ್ ಆರಂಭಿಸಿ ಉತ್ತಮ ಆದಾಯವನ್ನು ಪಡೆಯಬಹುದು.
ಎಲ್ಐಸಿಯ New Endowment Plan :
ನಾವು ಇಲ್ಲಿ ಮಾತನಾಡುತ್ತಿರುವ ಯೋಜನೆಯ ಹೆಸರು LIC ಯ ನ್ಯೂ ಎಂಡೋಮೆಂಟ್ ಪ್ಲಾನ್. ಈ ಯೋಜನೆಗೆ ಒಳಪಡುವ ವ್ಯಕ್ತಿಯ ವಯಸ್ಸು ಕನಿಷ್ಠ 8 ವರ್ಷಗಳಿಂದ ಗರಿಷ್ಠ 55 ವರ್ಷಗಳವರೆಗೆ ಇರಬೇಕು. ಆದರೆ, ಈ ಯೋಜನೆಗೆ ಕನಿಷ್ಠ ವಿಮಾ ಮೊತ್ತವು 1 ಲಕ್ಷ ರೂಪಾಯಿ ಆಗಿರಬೇಕು.
ಈ ವಿಚಾರ ನೆನಪಿನಲ್ಲಿರಲಿ :
LICಯ ಯಾವುದೇ ವಿಮಾ ಯೋಜನೆಯಿಂದ ಉತ್ತಮ ಆದಾಯವನ್ನು ಗಳಿಸಲು, ವ್ಯಕ್ತಿಯ ವಯಸ್ಸು ಮತ್ತು ಪಾಲಿಸಿ ಅವಧಿ ಎಷ್ಟು ಎನ್ನುವುದು ಬಹಳ ಮುಖ್ಯವಾಗಿದೆ. ಇದರ ಜೊತೆ ಹೂಡಿಕೆ ಮಾಡುವ ಮೊತ್ತವೂ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನೀವು ಪಾಲಿಸಿಯನ್ನು ಪಡೆಯುವಾಗ ಈ ಮೂರು ಅಂಶಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು.
ಉದಾಹರಣೆ:
ಒಬ್ಬ ವ್ಯಕ್ತಿಯು 25 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, 35 ವರ್ಷಗಳ ಪಾಲಿಸಿ ಅವಧಿಯನ್ನು ಹೊಂದಿದ್ದು, 9 ಲಕ್ಷದ ವಿಮಾ ಮೊತ್ತವನ್ನು ಆರಿಸಿದರೆ, ಮೊದಲ ವರ್ಷದ ವ್ಯಕ್ತಿಯ ಮಾಸಿಕ ಪ್ರೀಮಿಯಂ 2046 ರೂ. ಆಗಿರುತ್ತದೆ. ಮುಂದಿನ ವರ್ಷದಿಂದ, ಒಬ್ಬ ವ್ಯಕ್ತಿಯು ಈ ಪಾಲಿಸಿಗಾಗಿ ಪ್ರತಿ ತಿಂಗಳು 2002 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಕೈ ಸೇರುವುದು ದೊಡ್ಡ ಮೊತ್ತ :
9 ಲಕ್ಷ ರೂ.ಗಳ ವಿಮಾ ಪಾಲಿಸಿಗೆ ಒಬ್ಬ ವ್ಯಕ್ತಿ 35 ವರ್ಷಗಳವರೆಗೆ ಒಟ್ಟು 8,23,052 ಪಾವತಿಸಬೇಕಾಗುತ್ತದೆ. ಅದರ ರಿಟರ್ನ್ಸ್‌ನಲ್ಲಿ, 35 ವರ್ಷಗಳ ನಂತರ 43,87,500 ರೂ. ಸಿಗುತ್ತದೆ. ವ್ಯಕ್ತಿಯು 35 ವರ್ಷಗಳವರೆಗೆ ಮಾಸಿಕ 2,000 ರೂ ಪ್ರೀಮಿಯಂ ಪಾವತಿಸುವ ಮೂಲಕ 43 ಲಕ್ಷ ರೂ.ಗಿಂತ ಹೆಚ್ಚಿನ ನಿಧಿಯನ್ನು ರಚಿಸಬಹುದು.
