ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತ, ಇನ್ನೂ ಅರ್ಜಿ ಹಾಕದವರಿಗೆ ನಿರಾಸೆ! ಸದ್ಯಕ್ಕಂತೂ ಅಪ್ಲೈ ಮಾಡಲು ಸಾಧ್ಯವಿಲ್ಲ

 ಗೃಹ ಲಕ್ಷ್ಮಿ ಯೋಜನೆ (Gruhalakshmi Scheme) ಗೆ ಸದ್ಯಕ್ಕಂತೂ ಅಪ್ಲೈ/ ನೋಂದಣಿ (Registration) ಮಾಡಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಸಾಕಷ್ಟು ಜನ ಅರ್ಜಿ (Application) ಸಲ್ಲಿಸಿಲ್ಲ. ಅಂತವರು ಅರ್ಜಿ ಸಲ್ಲಿಸುವುದಕ್ಕೆ ಇನ್ನೂ ಹಲವು ದಿನ 



ಇನ್ನು ಮುಂದೆ ಗೃಹ ಲಕ್ಷ್ಮಿ ಯೋಜನೆ (Gruha lakshmi Scheme) ಗೆ ಸದ್ಯಕ್ಕಂತೂ ಅಪ್ಲೈ/ ನೋಂದಣಿ (Registration) ಮಾಡಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಸಾಕಷ್ಟು ಜನ ಅರ್ಜಿ (Application) ಸಲ್ಲಿಸಿಲ್ಲ.

ಅಂತವರು ಅರ್ಜಿ ಸಲ್ಲಿಸುವುದಕ್ಕೆ ಇನ್ನೂ ಹಲವು ದಿನ ಕಾಯಬೇಕು. ಸರ್ಕಾರ ಹೊಸ ಮಾಹಿತಿಯನ್ನು ನೀಡಿದ್ದು, ಇಂದು ನಾಳೆ ಅರ್ಜಿ ಸಲ್ಲಿಸೋಣ ಅಂತ ಇರುವವರಿಗೆ ನಿರಾಸೆ ಮೂಡಿಸಿದೆ!

ಗೃಹಲಕ್ಷ್ಮಿ ಯೋಜನೆ ನೋಂದಣಿ ಸ್ಥಗಿತ

ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡುವ ಯೋಜನೆ ಗೃಹ ಲಕ್ಷ್ಮಿ ಯೋಜನೆ. ರಾಜ್ಯದಲ್ಲಿ ಒಟ್ಟು 1.28 ಕೋಟಿ ಫಲಾನುಭವಿಗಳು ಇದ್ದಾರೆ. ಅದರಲ್ಲಿ 1.13 ಕೋಟಿ ಮಹಿಳೆಯರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ


ಆದರೆ ಇನ್ನೂ ಸುಮಾರು ಗೃಹಿಣಿಯರು ನೋಂದಾವಣಿ ಮಾಡಿಕೊಂಡಿಲ್ಲ, 

 Best Friendship status

ಅದರಲ್ಲೂ ನೋಂದಾಯಿಸಿಕೊಂಡ 17 ಲಕ್ಷ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ (Aadhaar Seeding) ಮಾಡಿಕೊಳ್ಳದೆ ಇರುವುದರಿಂದ ಅವರ ಖಾತೆಗೆ ಕೂಡ ಹಣ (DBT) ಬಂದಿಲ್ಲ.

ಹೀಗೆ ಅರ್ಜಿ ಸಲ್ಲಿಸಿರುವ ಗೃಹಿಣಿಯರ ಖಾತೆಯನ್ನು ಪರಿಶೀಲಿಸಿ ಅವರ ಖಾತೆಗೆ ಹಣವನ್ನು ಹಾಕುವ ಪ್ರಕ್ರಿಯೆ ನಡೆಯುತ್ತಿದೆ, ಇದೇ ಕಾರಣಕ್ಕೆ ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಲಾಗಿದೆ.


“ಗೃಹಲಕ್ಷ್ಮಿ ಯೋಜನೆಗಾಗಿ ನೋಂದಾಯಿಸಿಕೊಂಡ ಫಲಾನುಭವಿಗಳ ಖಾತೆಗೆ ೨ ಸಾವಿರ ರೂಪಾಯಿಗಳನ್ನು ಜಮಾ ಮಾಡುವ ಪ್ರಕ್ರಿಯೆಯಲ್ಲಿ ಗೊಂದಲ ತಪ್ಪಿಸಬೇಕು ಎನ್ನುವ ಕಾರಣಕ್ಕೆ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಶೀಘ್ರದಲ್ಲಿಯೇ ಪುನರಾರಂಭಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೋಸ್ಟ್ ಒಂದನ್ನು ಹಂಚಿಕೊಂಡಿದೆ.

ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಒಂದು ವಾರ ಕಳೆದಿದೆ. ಈ ಯೋಜನೆಯ ಅಡಿಯಲ್ಲಿ ಹಲವರ ಖಾತೆಗೆ (Bank Account) ಹಣ ಬಂದು ಜಮಾ ಆಗಿದೆ. ಆದರೆ ಮೊದಲ ಕಂತಿನ ಹಣ ಇನ್ನೂ ಸಾಕಷ್ಟು ನೋಂದಾಯಿತ ಫಲಾನುಭವಿಗಳಿಗೆ ವರ್ಗಾವಣೆ ಆಗಿಲ್ಲ.

ಇದಕ್ಕೆ ಅವರ ಖಾತೆ ಸರಿಯಾಗಿ ಇಲ್ಲ, ಆಧಾರ್ ಸೀಡಿಂಗ್ (Aadhaar Seeding) ಆಗಿಲ್ಲ ಹಾಗೂ ಬ್ಯಾಂಕ್ ಖಾತೆ ಆಕ್ಟಿವ್ (Bank Account Not Active) ಆಗಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದೆ, ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಅವರ ಖಾತೆಗೆ ಹಣ ಹಾಕಲಾಗುವುದು.

ಜಾರಿಯಾಗಲಿದ್ಯಾ 5ನೇ ಗ್ಯಾರಂಟಿ ಯೋಜನೆ?

ಒಟ್ಟು ನಾಲ್ಕು ಗ್ಯಾರಂಟಿ ಯೋಜನೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government) ಜಾರಿಗೆ ತಂದಿದೆ, ಇದೀಗ ಪದವೀಧರ ನಿರುದ್ಯೋಗಿ ಯುವಕ (unemployed) ಯುವತಿಯರಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿರುವ ನಿರುದ್ಯೋಗಿ ಯುವಕರಿಗೆ 1,500 ರೂಪಾಯಿಗಳನ್ನು ಕೊಡುವ “ಯುವ ನಿಧಿ (yuva Nidhi) ಯೋಜನೆ ಯಾವಾಗ ಜಾರಿಗೆ ಬರಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲ.


ಸದ್ಯ ಗೃಹಲಕ್ಷ್ಮಿ ಯೋಜನೆಯಲ್ಲಿ ಇರುವ ಲೋಪದೋಷ ಸರಿಪಡಿಸಿಕೊಂಡು ಖಾತೆಗೆ ಹಣ ಹಾಕುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ, ಪಡಿತರ ಚೀಟಿಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಿದ್ದುಪಡಿಗೆ ಕೂಡ ಅವಕಾಶ ಮಾಡಿಕೊಡಲಾಗಿದೆ

Previous Post Next Post