ಬ್ಯಾಂಕ್ ಖಾತೆ ಇಲ್ಲದೆ ಇದ್ರೂ ಗೃಹಲಕ್ಷ್ಮಿ ಯೋಜನೆ ಹಣ ಸಿಗುತ್ತಾ? ಗುಡ್ ನ್ಯೂಸ್ ನೀಡಿದ ಸರ್ಕಾರ

ನಿಮ್ಮ ಪೋಸ್ಟ್ ಆಫೀಸ್ ಖಾತೆ ಆದರೂ ಸೀಡಿಂಗ್ ಆಗಿದ್ದರೆ ಹಾಗೂ ಸಕ್ರಿಯವಾಗಿದ್ದರೆ, ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಹಣ ಪೋಸ್ಟ್ ಆಫೀಸ್ ಖಾತೆಗೆ ಕೂಡ ಬಂದು ಬೀಳುತ್ತದೆ.

 


ರಾಜ್ಯ ಕಾಂಗ್ರೆಸ್ ಸರ್ಕಾರ (State Congress Government), ಅಧಿಕಾರಕ್ಕೆ ಬರುವುದಕ್ಕೂ ಮೊದಲೇ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳ (Guarantee Schemes) ಬಗ್ಗೆ ಘೋಷಿಸಿದ್ದು, ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವುದು ಎಲ್ಲವೂ ನಿಮಗೆ ಗೊತ್ತಿರುವ ವಿಚಾರವೇ.

ಈಗಾಗಲೇ ನಾಲ್ಕು ಯೋಜನೆಗಳು ಕೂಡ ಜಾರಿಗೆ ಬಂದಿದೆ ಇತ್ತೀಚಿಗೆ ಬಿಡುಗಡೆಯಾದ ಗೃಹಲಕ್ಷ್ಮಿ ಯೋಜನೆಯ (Gruha lakshmi Scheme) ಬಗ್ಗೆ ಚರ್ಚೆಗಳು ಹೆಚ್ಚಾಗಿ ನಡೆಯುತ್ತಿವೆ.


ಯಾಕೆಂದರೆ ಗೃಹಲಕ್ಷ್ಮಿ ಯೋಜನೆ ಬಿಡುಗಡೆಯಾದ ನಂತರ ಹಲವರ ಖಾತೆಗೆ (Bank Account Deposit) ಹಣ ಬಂದು ಸೇರಿದೆ ಆದರೆ ಇನ್ನೂ ಸಾಕಷ್ಟು ಜನ ತಮಗೆ ಹಣ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಸರ್ಕಾರ ಹಲವು ಕಾರಣಗಳನ್ನು ಕೂಡ ನೀಡುತ್ತಿದೆ.

ಆಧಾರ್ ಸೀಡಿಂಗ್ ಆಗಿಲ್ವಾ? (Aadhaar Seeding)

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2,000ಗಳನ್ನು ಗೃಹಿಣಿಯರು ತಮ್ಮದಾಗಿಸಿಕೊಳ್ಳಬೇಕು ಅಂದ್ರೆ ರೇಷನ್ ಕಾರ್ಡ್ (Ration Card) ಹೊಂದಿರಬೇಕು, ಜೊತೆಗೆ ಬ್ಯಾಂಕ್ ಅಕೌಂಟ್ (Bank Account) ಕೂಡ ಬೇಕು. ಬ್ಯಾಂಕ್ ಖಾತೆ ಇಲ್ಲದೆ ಇದ್ದಲ್ಲಿ ಹಣ ಬರಲು ಸಾಧ್ಯವೇ ಇಲ್ಲ, ಇನ್ನು ಸಾಕಷ್ಟು ಜನ ಬಳಸುತ್ತಿರುವ ಅಥವಾ ಹಣ ಬರಲು ನೀಡಿರುವ ಬ್ಯಾಂಕ್ ಖಾತೆ ಬಹಳ ಹಳೆಯದು, ಅದು ಆಕ್ಟಿವ್ (Active) ಆಗಿ ಇಲ್ಲದೆ ಇರುವ ಕಾರಣದಿಂದ ಇನ್ನೂ ಕೂಡ ಸಾಕಷ್ಟು ಜನರಿಗೆ ಹಣ ಬಂದಿಲ್ಲ.


ಇನ್ನು ಮುಖ್ಯವಾಗಿ ಪ್ರತಿಯೊಂದು ಬ್ಯಾಂಕ್ ಅಕೌಂಟ್ ಗೆ ಆಧಾರ್ ಸೀಡಿಂಗ್ ಕೂಡ ಆಗಿರಲೇಬೇಕು ಬ್ಯಾಂಕ್ ಅಕೌಂಟ್ ಹಾಗೂ ಆಧಾರ್ ಲಿಂಕ್ ಆಗದೆ ಇದ್ದಲ್ಲಿ ಹಣ ಬರಲು ಸಾಧ್ಯವಿಲ್ಲ. ಇನ್ನು ಸಾಕಷ್ಟು ಜನರ ಆಧಾರ್ ಕಾರ್ಡ್ (Aadhaar Card) ಬ್ಯಾಂಕ್ ಖಾತೆ ಹಾಗೂ ರೇಷನ್ ಕಾರ್ಡ್ (Ration Card) ನಲ್ಲಿ ಇರುವ ಹೆಸರುಗಳಲ್ಲಿ ಕೂಡ ವ್ಯತ್ಯಾಸವಿದೆ.


ಈ ಕಾರಣದಿಂದಾಗಿಯೂ ಹಣಬಾರದೇ ಇರಬಹುದು. ಇದಕ್ಕಾಗಿ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಗೆ ಕೂಡ ಸರ್ಕಾರ ಅವಕಾಶ ನೀಡಿದ್ದು ಸೆಪ್ಟೆಂಬರ್ 14 ಕೊನೆಯ ದಿನಾಂಕವಾಗಿದೆ.

Click here for video


ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಇಲ್ಲವೇ?

ಇದು ಬಹುತೇಕ ಹಳ್ಳಿಗಳಲ್ಲಿ ಜನರು ಅಷ್ಟಾಗಿ ಬ್ಯಾಂಕ್ ಖಾತೆ ಹೊಂದಿರುವುದಿಲ್ಲ, ಅದರ ಬದಲು ತಮ್ಮ ವ್ಯವಹಾರವನ್ನು ಪೋಸ್ಟ್ ಆಫೀಸ್ (Post Office) ಮೂಲಕ ನಡೆಸುತ್ತಾರೆ. ಸಣ್ಣ ಉಳಿತಾಯ ಯೋಜನೆಗೆ (Savings Scheme) ಅಥವಾ ಪಿಂಚಣಿ (Pension Scheme) ಬರುವುದಕ್ಕೆ ಪೋಸ್ಟ್ ಆಫೀಸ್ ಖಾತೆ ತೆರೆದಿರುತ್ತಾರೆ.

ಹಾಗಾಗಿ ಈಗ ಹಲವರಲ್ಲಿ ಇರುವ ಪ್ರಶ್ನೆ ಅಂದ್ರೆ ನಮ್ಮ ಬ್ಯಾಂಕ್ ಅಕೌಂಟ್ ಇಲ್ಲ, ಆದರೆ ಪೋಸ್ಟ್ ಆಫೀಸ್ ಖಾತೆ ಇದೆ ಅದಕ್ಕೆ ಲಕ್ಷ್ಮಿ ಯೋಜನೆಯ ಹಣ ಬರಬಹುದೇ ಎಂಬುದು.


ನಿಮ್ಮ ಪೋಸ್ಟ್ ಆಫೀಸ್ ಖಾತೆ ಆದರೂ ಸೀಡಿಂಗ್ ಆಗಿದ್ದರೆ ಹಾಗೂ ಸಕ್ರಿಯವಾಗಿದ್ದರೆ, ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಹಣ ಪೋಸ್ಟ್ ಆಫೀಸ್ ಖಾತೆಗೆ ಕೂಡ ಬಂದು ಬೀಳುತ್ತದೆ.


ಬ್ಯಾಂಕಿನಲ್ಲಿ ಖಾತೆ ಹೊಂದಿರಬೇಕು ಎನ್ನುವುದು ಕಡ್ಡಾಯವಲ್ಲ, ಪೋಸ್ಟ್ ಆಫೀಸ್ ನಲ್ಲಿ ಖಾತೆ ಹೊಂದಿದ್ದರೂ ಕೂಡ ಅಂಥವರಿಗೂ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಎರಡು ಸಾವಿರ ರೂಪಾಯಿಗಳು ಬರುತ್ತವೆ. ಆದರೆ ನೆನಪಿರಲಿ ಈ ಖಾತೆಗೂ ಕೂಡ ಆಧಾರ್ ಲಿಂಕ್ ಆಗಿರಬೇಕು. ಹಾಗೂ ಖಾತೆ ಸಕ್ರಿಯವಾಗಿರಬೇಕು.


ನಿಮ್ಮ ಪೋಸ್ಟ್ ಆಫೀಸ್ ಖಾತೆ ಕೂಡ ಲಿಂಕ್ ಆಗಿದ್ದು ಸಕ್ರಿಯವಾಗಿದ್ದರೆ ಸರ್ಕಾರದ ವೆಬ್ಸೈಟ್ನಲ್ಲಿ ಅದೇ ಖಾತೆಯನ್ನು ತೋರಿಸುತ್ತದೆ, ಆಗ ಆ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಜಮಾ ಮಾಡಲಾಗುತ್ತದೆ.


ಈಗಲೇ ಕೋಟ್ಯಾಂತರ ಜನರ ಖಾತೆಗೆ ಹಣ ನೇರವಾಗಿ ವರ್ಗಾವಣೆ (DBT) ಆಗಿದೆ, ಆದರೆ ಹಲವರ ಖಾತೆಯಲ್ಲಿ ಸಮಸ್ಯೆ ಇರುವ ಕಾರಣದಿಂದಾಗಿ ಅರ್ಜಿ ಹಾಕಿದ ಎಲ್ಲಾ ಫಲಾನುಭವಿಗಳಿಗೆ ಬಂದಿಲ್ಲ. ಸದ್ಯದಲ್ಲಿಯೇ ಈ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.




Previous Post Next Post