ಬೆಂಗಳೂರು ಅರಣ್ಯ ವೃತ್ತದಲ್ಲಿ ಒಟ್ಟು 33 ಅರಣ್ಯ ವೀಕ್ಷಕರ ಹುದ್ದೆ ಖಾಲಿ ಇದ್ದು, 2023-24ನೇ ಸಾಲಿನಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
ಒಂದು ವೇಳೆ ನೀವು ಸರ್ಕಾರಿ ಕೆಲಸ ಬೇಕು ಎಂದು ಯೋಚಿಸುತ್ತಿದ್ದರೆ ಇದೀಗ ಒಂದು ಒಳ್ಳೆಯ ಅವಕಾಶ ನಿಮಗೆ ಸಿಗುತ್ತಿದೆ. ಬೆಂಗಳೂರು ಅರಣ್ಯ ವೃತ್ತದಲ್ಲಿ ಒಟ್ಟು 33 ಅರಣ್ಯ ವೀಕ್ಷಕರ ಹುದ್ದೆ ಖಾಲಿ ಇದ್ದು, 2023-24ನೇ ಸಾಲಿನಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
ಇದು ನೇರವಾಗಿ ನೇಮಕ ಮಾಡಿಕೊಳ್ಳುವ ಹುದ್ದೆ ಆಗಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರಣ್ಯ ವೀಕ್ಷಕರ ಹುದ್ದೆ ಸರ್ಕಾರಿ ಕೆಲಸವೇ ಆಗಿದ್ದು, ಗ್ರೂಪ್ ಡಿ ವರ್ಕರ್ ಗಳ ಸಾಲಿಗೆ ಬರುತ್ತದೆ.
10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆದವರು ಕೂಡ ಈ ಕೆಲಸಕ್ಕೆ ಅರ್ಹತೆ ಪಡೆಯುತ್ತಾರೆ. ಈ ಕೆಲಸಕ್ಕೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಬಹುದು.
ಹುದ್ದೆಯ ಬಗ್ಗೆ ಪೂರ್ತಿ ಮಾಹಿತಿ ನೀಡುವುದಾದರೆ.. ಹುದ್ದೆ ಖಾಲಿ ಇರುವುದು ಕರ್ನಾಟಕ ಅರಣ್ಯ ಇಲಾಖೆಯಲ್ಲಿ, ಹುದ್ದೆಯ ಹೆಸರು ಅರಣ್ಯ ವೀಕ್ಷಕ, ಹುದ್ದೆ ಖಾಲಿ ಇರುವುದು ಬೆಂಗಳೂರು ಅರಣ್ಯ ವೃತ್ತದಲ್ಲಿ, ಒಟ್ಟು 33 ಹುದ್ದೆಗಳು ಖಾಲಿ ಇದೆ.. ಈ ಕೆಲಸಕ್ಕೆ ಬೇಕಿರುವ ವಿದ್ಯಾರ್ಹತೆ 10 ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್ ಆಗಿದ್ದರೆ ಸಾಕು.
ಈ ಕೆಲಸದ ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕ ಪರೀಕ್ಷೆ, PET/PST ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ. ಈ ಕೆಲಸಕ್ಕೆ 27/9/2023 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗುತ್ತದೆ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26/10/2023. 31/10/2023ರ ಒಳಗೆ ಅರ್ಜಿ ಶುಲ್ಕ ಪಾವತಿ ಮಾಡಬೇಕು. ಈ ಹುದ್ದೆಯ ಬಗ್ಗೆ ಆದೇಶ, ಪರೀಕ್ಷೆಯ ಸಿಲಬಸ್ ಇದೆಲ್ಲವನ್ನು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು. https://aranya.gov.in ಇದು ಅಧಿಕೃತ ವೆಬ್ಸೈಟ್ ಆಗಿದೆ. ಈ ವೆಬ್ಸೈಟ್ ಇಂದಲೇ ಅರ್ಜಿಯನ್ನು ಸಲ್ಲಿಸಬಹುದು.
ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳು ಕೂಡ ಬೇಕಾಗುತ್ತದೆ. ಆಧಾರ್ ಕಾರ್ಡ್, ಕ್ಯಾಸ್ಟ್ ಸರ್ಟಿಫಿಕೇಟ್, ಇನ್ಕಮ್ ಸರ್ಟಿಫಿಕೇಟ್, 10ನೇ ತರಗತಿ ಮಾರ್ಕ್ಸ್ ಕಾರ್ಡ್ ಅಥವಾ ತತ್ಸಮಾನ ಪರೀಕ್ಷೆಯ ಮಾರ್ಕ್ಸ್ ಕಾರ್ಡ್, ಇಮೇಲ್ ಐಡಿ, ಫೋನ್ ನಂಬರ್, ಹಾಗೂ ಇನ್ನಿತರ ದಾಖಲೆ ಬೇಕಾಗುತ್ತದೆ.
ಈ ಕೆಲಸಕ್ಕೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅಪ್ಲಿಕೇಶನ್ ಹಾಕಲು ವೆಬ್ಸೈಟ್ ಲಿಂಕ್ ಸೆಪ್ಟೆಂಬರ್ 27ರಿಂದ ಆಕ್ಟಿವ್ ಆಗುತ್ತದೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು