ಚಾಲಕನಾಗಿ ಸ್ವಯಂ ಉದ್ಯೋಗ ಬೇಕೆನ್ನುವರಿಗೆ ಸರ್ಕಾರದಿಂದ ಸಬ್ಸಿಡಿ

ಚಾಲಕನಾಗಿ ಸ್ವಯಂ ಉದ್ಯೋಗ ಬೇಕೆನ್ನುವರಿಗೆ ಸರ್ಕಾರದಿಂದ ಸಬ್ಸಿಡಿ

 ನಮಸ್ಕಾರ ಸ್ನೇಹಿತರೇ ಕಾರು ಆಟೋರಿಕ್ಷಾ ಮತ್ತು ಗೂಡ್ಸ್ ವಾಹನಗಳ ಖರೀದಿಗೆ 300000 ಲಕ್ಷ ರೂಪಾಯಿಗಳ ಸಹಾಯಧನ ಸ್ವಯಂ ಉದ್ಯೋಗ ಚಾಲಕ ಉದ್ಯೋಗ ಬೇಕೆನ್ನುವವರು ಸೆಪ್ಟೆಂಬರ್ 25ರ ಒಳಗೆ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಸಲು ಪೂರ್ತಿ ಮಾಹಿತಿ ತಿಳಿಸಿಕೊಡುತ್ತೇನೆ ಪೂರ್ತಿಯಾಗಿ ನಮ್ಮ ಆರ್ಟಿಕಲ್ ಅನ್ನು ಓದುತ್ತಾ ಸಾಗಿ.



ಸ್ವಾವಲಂಬಿ ಸಾರಥಿ ಸ್ಕೀಂ 2023 :

ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯುವಜನರ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 2023 24ನೇ ಸಾಲಿನ ಬಜೆಟ್ ನಲ್ಲಿ ಈ ಘೋಷಣೆ ಮಾಡಿದ್ದಾರೆ. ಈ ಸ್ವಾವಲಂಬಿ ಸಾರಥಿ ಯೋಜನೆ ಅಡಿ ಸುಮಾರು ನಾಲ್ಕು ಲಕ್ಷ ರೂಗಳ ವರೆಗೆ ವಾಹನ ಖರೀದಿಗೆ ಸಬ್ಸಿಡಿ ದೊರೆಯುತ್ತದೆ.

ಈ ಸ್ವಾವಲಂಬಿ ಯೋಜನೆಯಲ್ಲಿ ಯಾರ್ಯಾರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ.

ಆಟೋರಿಕ್ಷಾ , ಪ್ಯಾಸೆಂಜರ್ ಆಟೋ , ಗೂಡ್ಸ್ ಗಾಡಿಗಳು ಮತ್ತು ಟ್ಯಾಕ್ಸಿಗಳನ್ನು ಕೊಂಡುಕೊಳ್ಳಲು ಬಯಸುವ ವ್ಯಕ್ತಿಗಳಿಗೆ ಬ್ಯಾಂಕಿನಿಂದ ಸಾಲ ಮಂಜೂರ್ ಆಗಿದ್ದಲ್ಲಿ ನಿಗಮದ ವಾಹನದ ಮೌಲ್ಯ ಶೇಕಡ 75ರಷ್ಟು ಸಬ್ಸಿಡಿ ದೊರೆಯುತ್ತದೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ವರ್ಗಗಳ ವ್ಯಕ್ತಿಗಳಿಗೆ ಗರಿಷ್ಠ ನಾಲ್ಕು ಲಕ್ಷ ಅಂದರೆ ಶೇಕಡ 50 ರಿಂದ 75 % ವರೆಗೆ ಸಬ್ಸಿಡಿ ನೀಡಿ ಸ್ವಯಂ ಉದ್ಯೋಗ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.


ಅದೇ ರೀತಿ ಧಾರ್ಮಿಕ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಸಾಲದ ಶೇಕಡ 50ರಷ್ಟು ಅಂದರೆ 4 ಲಕ್ಷಗಳವರೆಗೆ ಸಹಾಯಧನ ನೀಡಲಾಗುತ್ತದೆ. ಈ ಬಗ್ಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಪ್ರಕಟಣೆ ಹೊರಡಿಸಿದ್ದು ಅರ್ಹ ಮತ್ತು ಆಸಕ್ತ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.


ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಈ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂದರೆ ಇಷ್ಟರಲ್ಲೇ ಎಸ್ಸಿ/ಎಸ್ ಟಿ ಸಮುದಾಯಕ್ಕೆ ಅರ್ಜಿ ಆಹ್ವಾನಿಸಲಿದ್ದು, ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಮುಸ್ಲಿಂ ಬೌದ್ಧ ಪಾರ್ಸಿ ಜನಾಂಗದವರಿಗೂ ಅರ್ಜಿ ಆಹ್ವಾನಿಸಲಾಗುತ್ತದೆ ಆದ್ದರಿಂದ ಈಗ ಇರುವ ಆಹ್ಹಾನಕ್ಕೆ ಅರ್ಜಿಯನ್ನು ಸಲ್ಲಿಸಿ.


ಈ ಯೋಜನೆಯ ಅರ್ಹತೆಗಳೇನು?

ಮೊದಲಿಗೆ ನೀವು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು. ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ 18 ವಯಸ್ಸಾಗಿರಬೇಕು ಗರಿಷ್ಠ 55 ದಾಟಿರಬಾರದು. ಮತ್ತು ನಿಮ್ಮ ಕುಟುಂಬದ ವಾರ್ಷಿಕ ಆದಾಯವು 450000 ಕ್ಕಿಂತ ಕಡಿಮೆ ಇರಬೇಕು. ಸಾರಿಗೆ ಅಧಿಕಾರಿಯಿಂದ ನೀಡಲಾದ ಚಾಲನಾ ಪರವಾಗಿ ಕಡ್ಡಾಯ. ಅರ್ಜಿದಾರರ ಕುಟುಂಬದವರು ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಕಾರಿ ನೌಕರರಾಗಿರಬಾರದು.

ಅರ್ಜಿ ಸಲ್ಲಿಸಲು ಯಾವ ಯಾವ ದಾಖಲೆ ಬೇಕು?

• ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ


• ಜಾತಿ ಪ್ರಮಾಣ ಪತ್ರ


• ಆದಾಯ ಪ್ರಮಾಣ ಪತ್ರ


• ಬ್ಯಾಂಕ್ ಪಾಸ್ ಬುಕ್


• ವಾಹನ ಅಂದಾಜು ದರಪಟ್ಟಿ


• ಸ್ವಯಂ ಘೋಷಣೆ ಪತ್ರ


• ವಾಹನ ಚಾಲನ ಪರವಾನಗಿ ಪ್ರತಿ


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?


ಗೆಳೆಯರೇ ಈ ಯೋಜನೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 25 ರಂದು ಕೊನೆಯ ದಿನಾಂಕವಾಗಿರುತ್ತದೆ.


ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಅರ್ಜಿ ಸಲ್ಲಿಸಲು ಇಷ್ಟಪಡುವ ಕರ್ನಾಟಕದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಬೇಕು.


ಅರ್ಜಿ ಸಲ್ಲಿಸುವ ಲಿಂಕ್: https://kmdconline.karnataka.gov.in/Portal/login

ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.



Post a Comment

Previous Post Next Post
CLOSE ADS
CLOSE ADS
×