Gruhalakshmi scheme amount
ಬಹು ನಿರೀಕ್ಷಿತ ಗೃಹ ಲಕ್ಷ್ಮಿ ಯೋಜನೆಗೆ ಇಂದು ಮೈಸೂರಿನಲ್ಲಿ ಚಾಲನೆ ನೀಡಲಾಗಿದ್ದು, ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಮೊದಲನೇ ಕಂತಿನ ಹಣ (Gruhalakshmi amount)ವರ್ಗಾವಣೆಗೆ ಚಾಲನೆ ನೀಡಲಾಗಿತ್ತು. ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿ.
ಈ ಕಾರ್ಯಕ್ರಮವನ್ನು ರಾಜ್ಯದ 11,000 ಸಾವಿರ ಗ್ರಾಮ ಪಂಚಾಯತಿಗಳಲ್ಲಿಯು ಸಹ ಏರ್ಪಡಿಸಲಾಗಿದ್ದು, ರಾಜ್ಯಾದ್ಯಂತ ಚಾಲನೆ ಕಾರ್ಯಕ್ರಮ ನೇರ ಪ್ರಸಾರ ವಿಕ್ಷೀಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ನೇರ ನಗದು ವರ್ಗಾವಣೆ(DBT) ಮೂಲಕ ಮೊದಲ ಕಂತಿನ ಹಣ ವರ್ಗಾವಣೆ:
ನೇರ ನಗದು ವರ್ಗಾವಣೆ(DBT) ಎಂದರೆ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆ ವಿವರವನ್ನು ಡಿಜಿಟಲ್ ಪೈಲ್ ನಲ್ಲಿ ಕೃಡೀಕರಿಸಿ ಕೇವಲ ಒಂದು ಕ್ಲಿಕ್ ಮಾಡುವುದರ ಮೂಲಕ ಎಲ್ಲಾ ಫಲಾನುಭವಿಗಳ ಖಾತೆಗೆ ಏಕ ಕಾಲಕ್ಕೆ ಹಣ ವರ್ಗಾವಣೆ ಮಾಡುವಂತಹ ವ್ಯವಸ್ಥೆ ಇದಾಗಿದೆ.
ನಿಮ್ಮ ಖಾತೆಗೆ ಈ ಯೋಜನೆಯಡಿ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳುವ ಎರಡು ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ. ಈ ವಿಧಾನ ಅನುಸರಿಸಿ ಈ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದವರು ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬವುದು.
ವಿಧಾನ-1 : ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿ ತಿಳಿಯಬವುದು:
ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಪಡಿತರ ಚೀಟಿ ಕುಟುಂಬದ ಫಲಾನುಭವಿಗಳು ಖಾತೆಯಿರುವ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡುವ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ಖಾತೆಗೆ ಹಣ ಜಮಾ ಅಗಿರುವುದನ್ನು ಖಚಿತಪಡಿಸಿಕೊಳ್ಳಬವುದು.
ವಿಧಾನ-2 : DBT Karnataka ಮೊಬೈಲ್ ಅಪ್ಲಿಕೇಶನ್ ಮೂಲಕ ತಿಳಿಯಬವುದು:
ಕರ್ನಾಟಕ ಸರಕಾರದ ಇ-ಆಡಳಿತ ವಿಭಾಗದ ರಾಜ್ಯ "DBT Karnataka" ಅಧಿಕೃತ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಲ್ಲೇ ಸರಕಾರಿ ಯೋಜನೆಗಳ ನೇರ ನಗದು ವರ್ಗಾವಣೆ(DBT)ಯ ಹಣ ಜಮಾ ಅಗಿರುವುದನ್ನು ತಿಳಿಯಬವುದಾಗಿದೆ.
Step-1: ಪ್ರಥಮದಲ್ಲಿ ಈ https://play.google.com/store/apps/details?id=com.dbtkarnataka ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ "DBT Karnataka" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ನಂತರ ಫಲಾನುಭವಿಯ 12 ಅಂಕಿಯ ಆಧಾರ್ ನಂಬರ್ ನಮೂದಿಸಿ ಆಧಾರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಬರುವ 6 ಅಂಕಿಯ ಒಟಿಪಿಯನ್ನು ನಮೂದಿಸಿ "VERIFY OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-2: ಈ ಪ್ರಕ್ರಿಯೆ ಮುಗಿಸಿದ ಬಳಿಕ ನಿಮಗೆ ನೆನಪಿನಲ್ಲಿ ಉಳಿಯುವ 4 ಅಂಕಿಯ Secure code ಅನ್ನು ಹಾಕಿ "SUBMIT" ಬಟನ್ ಮೇಲೆ ಕ್ಲಿಕ್ ಮಾಡಬೇಕು.
Step-3: ತದನಂತರ ಫಲಾನುಭವಿಯ ವಿವರ ತೋರಿಸುತ್ತದೆ ಈ ಪುಟದ ಕೊನೆಯ ಕಾಲಂ ನಲ್ಲಿ ಮೊಬೈಲ್ ನಂಬರ್ ಹಾಕಿ "OK" ಬಟನ್ ಮೇಲೆ ಕ್ಲಿಕ್ ಮಾಡಿಬೇಕು.
Step-4: ಈ ಪುಟದಲ್ಲಿ "Payment Status" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಯೋಜನೆಯ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಈ ಯೋಜನೆಯಡಿ ಹಣ ಜಮಾ ಅಗಿರುವುದರ ಕುರಿತು ಮಾಹಿತಿ ತಿಳಿಯುತ್ತದೆ.
ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿದೆ ಎಂದು ತಿಳಿಯಲಿ "Seeding status of Aadhar in Bank Account" ಬಟನ್ ಮೇಲೆ ಕ್ಲಿಕ್ ಮಾಡಿದರೆ ವಿವರ ಗೋಚರಿಸುತ್ತದೆ.